ETV Bharat / business

ರಫ್ತು ವಹಿವಾಟು ಏರಿಕೆ... ವ್ಯಾಪಾರ ಕೊರತೆ ಅಂತರ ಇಳಿಕೆ

ರಸಾಯನಿಕ, ಕಬ್ಬಿಣ ಮತ್ತು ಔಷಧ ವಲಯಗಳು ಸಕಾರಾತ್ಮಕ ಪ್ರಗತಿ ಕಂಡಿವೆ. ಇನ್ನೊಂದು ಕಡೆ ಹರಳು, ಚಿನ್ನಾಭರಣ, ಎಂಜಿನಿಯರಿಂಗ್‌, ಪೆಟ್ರೋಲಿಯಂ ಉತ್ಪನ್ನಗಳು ನಕಾರಾತ್ಮಕ ಪ್ರಗತಿ ದಾಖಲಿಸಿವೆ.

ಸಾಂದರ್ಭಿಕ ಚಿತ್ರ
author img

By

Published : Aug 15, 2019, 9:42 AM IST

ನವದೆಹಲಿ: ದೇಶದ ರಫ್ತು ವಹಿವಾಟು ಜುಲೈನಲ್ಲಿ ಶೇ 2.25ರಷ್ಟು ಹೆಚ್ಚಾಗಿ ₹ 1.86 ಲಕ್ಷ ಕೋಟಿಗೆ ಏರಿಕೆಯಾಗಿದೆ ಎಂದು ಸರ್ಕಾರ ತಿಳಿಸಿದೆ.

ರಸಾಯನಿಕ, ಕಬ್ಬಿಣ ಮತ್ತು ಔಷಧ ವಲಯಗಳು ಸಕಾರಾತ್ಮಕ ಪ್ರಗತಿ ಕಂಡಿವೆ. ಇನ್ನೊಂದು ಕಡೆ ಹರಳು, ಚಿನ್ನಾಭರಣ, ಎಂಜಿನಿಯರಿಂಗ್‌, ಪೆಟ್ರೋಲಿಯಂ ಉತ್ಪನ್ನಗಳು ನಕಾರಾತ್ಮಕ ಪ್ರಗತಿ ದಾಖಲಿಸಿವೆ.

ಆಮದು ಪ್ರಮಾಣ ಶೇ. 10.43ರಷ್ಟು ಏರಿಕೆಯಾಗಿ ₹ 2.84 ಲಕ್ಷ ಕೋಟಿಗೆ ತಲುಪಿದೆ. ಇದರಿಂದ ದೇಶಿಯ ವ್ಯಾಪಾರ ಕೊರತೆಯ ಅಂತರವು ನಾಲ್ಕು ತಿಂಗಳ ಕನಿಷ್ಠ ಮಟ್ಟವಾದ ₹ 1.34 ಲಕ್ಷ ಕೋಟಿಯಿಂದ ₹ 92,300 ಕೋಟಿಗೆ ಇಳಿಕೆ ಕಂಡಿದೆ.

ತೈಲ ಆಮದು ಶೇ. 22.15ರಿಂದ 9.6 ಬಿಲಿಯನ್​ ಡಾಲರ್​ಗೆ, ತೈಲಯೇತರ ಆಮದು ಶೇ. 5.92 ರಿಂದ 30.16 ಬಿಲಿಯನ್​ ಡಾಲರ್​ಗೆ ಮತ್ತು ಚಿನ್ನದ ಆಮದು ಶೇ. 42.2ರಿಂದ 1. 71 ಬಿಲಿಯನ್​ ಡಾಲರ್​ಗೆ ಕಡಿಮೆಯಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.