ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ಮತ್ತು ವೃದ್ಧರಿಗೆ ಕೊರೊನಾ ವೈರಸ್‌ನ ಹೆಚ್ಚಿನ ಅಪಾಯವನ್ನು ಗಮನದಲ್ಲಿ ಇಟ್ಟುಕೊಂಡು, ಪಿಂಚಣಿದಾರರು ತಮ್ಮ ಜೀವಿತ ಪ್ರಮಾಣಪತ್ರ (ಜೆಪಿಪಿ) ಸಲ್ಲಿಸುವ ಅವಧಿಯನ್ನು ಇಪಿಎಫ್‌ಒ 2021ರ ಫೆಬ್ರವರಿ 28ರವರೆಗೆ ವಿಸ್ತರಿಸಿದೆ.
ಇಪಿಎಸ್ 1995 ಮತ್ತು 2021ರ ಫೆಬ್ರವರಿ 21ರವರೆಗೆ ಯಾವುದೇ ತಿಂಗಳಲ್ಲಿ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗಿರುವವರಿಗೆ ಇದು ಅನ್ವಯವಾಗಲಿದೆ. ಪ್ರಸ್ತುತ ಪಿಂಚಣಿದಾರರು ನವೆಂಬರ್ 30ರವರೆಗೆ ಯಾವುದೇ ಸಮಯದಲ್ಲಿ ಜೆಪಿಪಿಯನ್ನು ಸಲ್ಲಿಸಬಹುದಾಗಿತ್ತು. ಈ ಗಡುವನ್ನು ಒಂದು ವರ್ಷದವರೆಗೆ ಅವಧಿಗೆ ಮಾನ್ಯವಾಗಿರುತ್ತದೆ.
ಅಕ್ಟೋಬರ್‌ನಲ್ಲಿ ಶೇ 5.91ಕ್ಕೆ ಜಿಗಿದ ಚಿಲ್ಲರೆ ಹಣದುಬ್ಬರ... ದಿನಸಿ, ತರಕಾರಿ ಬೆಲೆ ಏರಿಕೆ
ಎಲ್ಲ ಪಿಂಚಣಿದಾರರು 2021ರ ಫೆಬ್ರವರಿ 28ರವರೆಗೆ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದು. 3.65 ಲಕ್ಷ ಸಾಮಾನ್ಯ ಸೇವಾ ಕೇಂದ್ರಗಳು (ಸಿಎಸ್‌ಸಿ), ಬ್ಯಾಂಕ್ಗಳ ಪಿಂಚಣಿ ವಿತರಣಾ ಶಾಖೆಗಳು, 1.36 ಲಕ್ಷ ಅಂಚೆ ಕಚೇರಿಗಳು, 1.90 ಲಕ್ಷ ಅಂಚೆಯವರ ಅಂಚೆ ನೆಟ್‌ವರ್ಕ್ ಮತ್ತು ಅಂಚೆ ಇಲಾಖೆಯಡಿ ಬರುವ ಗ್ರಾಮೀಣ ಡಾಕ್ ಸೇವಕರು ಸೇರಿದಂತೆ ಬಹು ವಿಧಾನಗಳಲ್ಲಿ ಪಿಂಚಣಿದಾರರು ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಬಹುದು.
ಪಿಂಚಣಿದಾರರು ತಮ್ಮ ಹತ್ತಿರದ ಸಿಎಸ್‌ಸಿಗಳನ್ನು ಪತ್ತೆಹಚ್ಚಲು https://locator.csccloud.in/ ಲಿಂಕ್ ಅನ್ನು ಬಳಸಬಹುದು ಮತ್ತು ಜೆಪಿಪಿಗಳನ್ನು ತಮ್ಮ ಮನೆ ಅಥವಾ ಬೇರೆಡೆಯಿಂದ ಸಲ್ಲಿಸಲು ಅಂಚೆ ಕಚೇರಿಗಳಿಗೆ ಆನ್‌ಲೈನ್ ವಿನಂತಿಯನ್ನು ಮಾಡಲು http://ccc.cept. gov.in/covid/request.aspx ಲಿಂಕ್ ಅನ್ನು ಬಳಸಬಹುದು.