ETV Bharat / business

ಕೆಲಸದಿಂದ ವಜಾ ಆದ ಬಳಿಕ ಮತ್ತೆ ನೇಮಕ ಸಾಧ್ಯವೇ..? ಕಾಯ್ದೆ ಹೇಳುವುದೇನು? - ವಾಣಿಜ್ಯ ಸುದ್ದಿ

ಈಗಿನ ಲಾಕ್‌ಡೌನ್ ಗಮನಿಸಿದರೆ ಕೆಲ ತಿಂಗಳ ತನಕ ವ್ಯವಹಾರ ಚಟುವಟಿಕೆ ಆರಂಭ ಆಗದಿರಬಹುದು. ಕೆಲವು ಕಂಪನಿ/ ಸಂಸ್ಥೆಗಳು ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರಬಹುದು. ಅಂತಿಮವಾಗಿ ವಹಿವಾಟು ಮುಂದುವರಿಯದೆ ಸ್ಥಗಿತಗೊಳ್ಳಬಹುದು. ಇಂತಹ ಸಮಯದಲ್ಲಿ ಕೆಲಸಗಾರರಿಗೆ ಕುತ್ತು ಬರುವುದು ಸಹಜ. ಈ ವೇಳೆ ಕೈಗಾರಿಕಾ ವಿವಾದ ಕಾಯ್ದೆ ಹೇಳುವುದೇನು ಎಂಬುದರ ಸಂಕ್ಷೀಪ್ತ ಪರಿಚಯ ಇಲ್ಲಿದೆ.

lockdown
ಲಾಕ್‌ಡೌನ್
author img

By

Published : Apr 6, 2020, 11:07 PM IST

ನವದೆಹಲಿ: ಕೈಗಾರಿಕಾ ವಿವಾದ ಕಾಯ್ದೆ, 1947ರ ನಿಬಂಧನೆಗಳ ಪ್ರಕಾರ, ಕೆಲಸದಿಂದ ತೆಗೆದು ಹಾಕಿದ ಮೊದಲ 45 ದಿನಗಳ ಅವಧಿ ಮುಗಿದ ನಂತರ ಉದ್ಯೋಗದಾತರು ಯಾವುದೇ ಸಮಯದಲ್ಲಿ ಕಾರ್ಮಿಕರು ಅಥವಾ ಉದ್ಯೋಗಿಗಳನ್ನು ಹಿಂಪಡೆಯುವುದು ಕಾನೂನುಬದ್ಧವಾಗಿರುತ್ತದೆ.

ಈಗಿನ ಲಾಕ್‌ಡೌನ್ ಗಮನಿಸಿದರೆ ಕೆಲ ತಿಂಗಳ ತನಕ ವ್ಯವಹಾರ ಚಟುವಟಿಕೆ ಆರಂಭ ಆಗದಿರಬಹುದು. ಕೆಲವು ಕಂಪನಿ/ ಸಂಸ್ಥೆಗಳು ಉದ್ಯೋಗಿಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದಿರಬಹುದು. ಅಂತಿಮವಾಗಿ ವಹಿವಾಟು ಮುಂದುವರಿಯದೇ ಸ್ಥಗಿತಗೊಳ್ಳಬಹುದು. ಇಂತಹ ಸಮಯದಲ್ಲಿ ಕೆಲಸಗಾರರಿಗೆ ಕುತ್ತು ಬರುವುದು ಸಹಜ. ಈ ವೇಳೆ ಕೈಗಾರಿಕಾ ವಿವಾದ ಕಾಯ್ದೆ ಹೇಳುವುದೇನು ಎಂಬುದರ ಸಂಕ್ಷೀಪ್ತ ಪರಿಚಯ ಇಲ್ಲಿದೆ.

ಗುರುಗ್ರಾಮ್​ನ ಸೆಂಟ್ರಮ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್​ನ ಅನುಪಮ್ ಮಲಿಕ್ ಮಾತನಾಡಿ, ಮುಂದಿನ 5 ರಿಂದ 6 ತಿಂಗಳವರೆಗೆ ಯಾವುದೇ ವ್ಯವಹಾರ ನಡೆಯುದಿಲ್ಲ ಎಂದು ಅಂದಾಜಿಸಲಾಗಿದೆ. ಈ ಬಳಿಕ ಲಾಭದಾಯಕತೆ ಉಳಿಸಿಕೊಳ್ಳಲು ನಿಧಾನಗತಿಯ (ಟ್ರಿಕ್ಲಿಂಗ್) ವ್ಯವಹಾರ ಸಾಕಾಗುವುದಿಲ್ಲ. ಕೈಗಾರಿಕಾ ವಿವಾದಗಳ ಅಡಿಯಲ್ಲಿ ವಿವಿಧ ಆಯ್ಕೆಗಳನ್ನು ನೀಡಲಾಗಿದೆ ಎಂದರು.

ನೈಸರ್ಗಿಕ ವಿಪತ್ತಿನ ಪರಿಸ್ಥಿತಿಯಲ್ಲಿ ಉದ್ಯೋಗದಾತ ಕಂಪನಿ/ ಸಂಸ್ಥೆಗೆ ಕೆಲಸ ನೀಡಲು ಆಗದಿದ್ದರೇ ಅಸಮರ್ಥತೆಯ ಕಾಯ್ದೆಯ ಸೆಕ್ಷನ್ 2ರ (ಕೆಕೆಕೆ) ಅಡಿಯಲ್ಲಿ "ಲೇ-ಆಫ್" ಎಂಬ ವ್ಯಾಖ್ಯಾನದ ಪ್ರಕಾರ ನೌಕರರನ್ನು ವಜಾಗೊಳಿಸಲಾಗಿದೆ ಎಂದು ಪರಿಗಣಿಸಲಾಗುತ್ತದೆ.

ಆದರೆ, ಪ್ರಸ್ತುತ ಸನ್ನಿವೇಶದಲ್ಲಿ ಪರಿಸ್ಥಿತಿ ಭಿನ್ನವಾಗಿದ್ದು, ಕಾರ್ಮಿಕರು ತಮ್ಮ ಕರ್ತವ್ಯಕ್ಕೆ ಹಾಜರಿ ಆಗಲು ಸಾಧ್ಯವಿಲ್ಲ. ಅವರ ಸುರಕ್ಷತೆ ಮೊದಲ ಆದ್ಯತೆಯಾಗಿದೆ. ಉದ್ಯೋಗದಾತರು ಕಾರ್ಮಿಕರ ಮತ್ತು ಗ್ರಾಹಕರ ಆರೋಗ್ಯ ಮತ್ತು ಸುರಕ್ಷತೆಯ ಜವಾಬ್ದಾರಿ ಹೊರಬೇಕಾದ ಕೆಟ್ಟ ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ, ಸದ್ಯ ಜಾರಿಯಲ್ಲಿರುವ ಲಾಕ್​ಡೌನ್ ಮತ್ತು ಕರ್ಫ್ಯೂನಲ್ಲಿ ಕಾರ್ಮಿಕರನ್ನು ವಜಾಗೊಳಿಸಲಾಗಿದೆ ಎಂಬುದುನ್ನು ಪರಿಗಣಿಸಲಾಗಿದೆ ಎಂದು ಹೇಳಿದರು.

ನೈಸರ್ಗಿಕ ವಿಪತ್ತುಗಳಿಂದ ಉಂಟಾಗುವ ಬಿಕ್ಕಟ್ಟುಗಳನ್ನು ನಿಭಾಯಿಸಲು ಉದ್ಯೋಗದಾತರ ಮತ್ತು ಕಾರ್ಮಿಕರ ಹಕ್ಕು ಹಾಗೂ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಸಮಗ್ರ ನಿಬಂಧನೆಗಳಿವೆ.

ಹನ್ನೆರಡು ತಿಂಗಳ ಯಾವುದೇ ಅವಧಿಯಲ್ಲಿ ಒಬ್ಬ ಕೆಲಸಗಾರನನ್ನು 45 ದಿನಗಳಿಗಿಂತ ಹೆಚ್ಚು ಕಾಲ ವಜಾಗೊಳಿಸಲಾಗುತ್ತದೆ ಎಂಬುದನ್ನು ನಿಬಂಧನೆಗಳು ಸ್ಪಷ್ಟಪಡಿಸುತ್ತವೆ. ಮೊದಲ 45 ದಿನಗಳ ಅವಧಿ ಮುಗಿದ ನಂತರ ವಜಾಗೊಳಿಸುವ ಯಾವುದೇ ಅವಧಿಗೆ ಸಂಬಂಧಿಸಿದಂತೆ ಯಾವುದೇ ಪರಿಹಾರ ಪಾವತಿಸಲಾಗುವುದಿಲ್ಲ.

ಕೆಲಸದಿಂದ ಹೊರಗುಳಿಯುವ ಮೊದಲ 45 ದಿನಗಳ ಅವಧಿ ಮುಗಿದ ನಂತರ ಯಾವುದೇ ಸಮಯದಲ್ಲಿ ಸೆಕ್ಷನ್ 25-ಎಫ್‌ ನ ನಿಬಂಧನೆಗಳಿಗೆ ಅನುಗುಣವಾಗಿ ಕೆಲಸಗಾರನನ್ನು ಹಿಂಪಡೆಯುವುದು ಕಾನೂನುಬದ್ಧವಾಗಿರುತ್ತದೆ ಎಂದು ಮಲಿಕ್ ಹೇಳಿದರು.

ವಜಾಗೊಳಿಸುವ ಅವಧಿಯಲ್ಲಿ ಕಾರ್ಮಿಕನಿಗೆ ಪರಿಹಾರ ನೀಡಬೇಕಾದ ಅರ್ಹತೆಯನ್ನು ಈ ಕಾಯ್ದೆಯ ಸೆಕ್ಷನ್ 25ಸಿಯಲ್ಲಿ ಉಲ್ಲೇಖಿಸಲಾಗಿದೆ. ಕೆಲಸದ ದಿನಗಳವರೆಗೆ (ಸಾಪ್ತಾಹಿಕ ರಜೆ ಹೊರತುಪಡಿಸಿ) ಅರ್ಧದಷ್ಟು ವೇತನ ನೀಡಬೇಕಾಗತ್ತದೆ.

ಮಾನವೀಯತೆ ಆಧಾರದ ಮೇಲೆ ಕಾರ್ಮಿಕರೊಂದಿಗಿನ ಸಂಬಂಧದ ಹಿತದೃಷ್ಟಿಯಿಂದ ಮಾರ್ಚ್ 31ರವರೆಗೆ ಕಾರ್ಮಿಕರು ಕನಿಷ್ಠ ವೇತನ ನೀಡಬೇಕೆನ್ನುವ ಸರ್ಕಾರದ ಸಲಹೆ ಪಾಲಿಸುವುದು ಸ್ಪಷ್ಟವಾಗಿದೆ ಎಂದರು.

ಲಾಕ್​ಡೌನ್​ ಅವಧಿಯಲ್ಲಿ ವೇತನವನ್ನು ಪಾವತಿಸಲು "ಆದೇಶ" ಅಥವಾ "ಸುಗ್ರೀವಾಜ್ಞೆ" "ನಿರ್ದೇಶನ "ಇಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಂಪನ್ಮೂಲಗಳನ್ನು ಹೊಂದಿರುವವರಿಗೆ ಇದು ಸಾಮಾಜಿಕ ಮತ್ತು ರಾಷ್ಟ್ರೀಯ ಹಿತಾಸಕ್ತಿ ಅನುಸರಿಸಬೇಕಾದ ಸಲಹೆ ಮಾತ್ರ ಆಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.