ETV Bharat / business

ನಕಲಿ ದಾಖಲೆಗಳ ಮೇಲೆ ಇಲ್ಲದ ಕಂಪನಿ ಸೃಷ್ಟಿಸಿ 190 ಕೋಟಿ ರೂ. ತೆರಿಗೆ ವಂಚನೆ! - DGGI

ಶಮ್‌ಶಾದ್ ಸೈಫಿ ಅವರು ಅಸ್ತಿತ್ವದಲ್ಲಿ ಇಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಖೊಟ್ಟಿ ದಾಖಲೆಗಳ ಆಧಾರದ ಮೇಲೆ ನವದೆಹಲಿ ಮೂಲದ ಮೆ /ಎಸ್​ ಟೆಕ್ನೋ ಎಲೆಕ್ಟ್ರಿಕಲ್ ಮತ್ತು ಎಂ/ಎಸ್​ ಲತಾ ಸೇಲ್ಸ್ ಸಂಸ್ಥೆ ಹುಟ್ಟುಹಾಕಿದ್ದರು ಎಂಬುದು ತನಿಖೆಯಿಂದ ತಿಳಿದು ಬಂದಿದೆ.

tax credit case
ತೆರಿಗೆ ಕೇಸ್
author img

By

Published : Oct 10, 2020, 6:51 PM IST

ನವದೆಹಲಿ: ನಕಲಿ ದಾಖಲೆಗಳ ಮೇಲೆ ಅಸ್ತಿತ್ವದಲ್ಲಿ ಇಲ್ಲದ ಸಂಸ್ಥೆಗಳ ಹೆಸರಿನಡಿ ಸರಕು ಮತ್ತು ಸೇವೆಗಳ ಆರ್ಡರ್​ ಸ್ವೀಕೃತಿ ಹಾಗೂ ಪೂರೈಕೆಯ ತೆರಿಗೆ ವಂಚನೆ ಎಸಗಿದ ಆರೋಪದಡಿ ಜಿಎಸ್‌ಟಿ ಇಂಟೆಲಿಜೆನ್ಸ್‌ನ (ಡಿಜಿಜಿಐ) ಗುರುಗ್ರಾಮ್ ವಲಯ ಘಟಕದ ನಿರ್ದೇಶನಾಲಯ (ಜಿಜಿಯು) ದೆಹಲಿ ನಿವಾಸಿಗಳನ್ನು ಬಂಧಿಸಿದೆ.

ಶಮ್‌ಶಾದ್ ಸೈಫಿ ಅವರು ಅಸ್ತಿತ್ವದಲ್ಲಿ ಇಲ್ಲದ ವ್ಯಕ್ತಿಗಳ ಹೆಸರಿನಲ್ಲಿ ಖೊಟ್ಟಿ ದಾಖಲೆಗಳ ಆಧಾರದ ಮೇಲೆ ನವದೆಹಲಿ ಮೂಲದ ಮೆ /ಎಸ್​ ಟೆಕ್ನೋ ಎಲೆಕ್ಟ್ರಿಕಲ್ ಮತ್ತು ಎಂ/ಎಸ್​ ಲತಾ ಸೇಲ್ಸ್ ಸಂಸ್ಥೆ ಹುಟ್ಟುಹಾಕಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ಎಂ / ಎಸ್​ ಟೆಕ್ನೋ 98.09 ಕೋಟಿ ರೂ. ವಂಚನೆಯ ಇನ್​ಪುಟ್​ ಟ್ಯಾಕ್ಸ್ ಕ್ರೆಡಿಟ್​ ಅನ್ನು ಎಂ / ಎಸ್​ ಲತಾ ಕಂಪನಿಗೆ ರವಾನಿಸಿದ್ದಾರೆ. ಇದೇ ರೀತಿಯಾಗಿ ಅಸ್ತಿತ್ವದಲ್ಲಿಲ್ಲದ ವಿವಿಧ ಸಂಸ್ಥೆಗಳಿಗೆ ಸುಮಾರು 69.59 ಕೋಟಿ ರೂ. ವರ್ಗಾಯಿಸಿದ್ದಾರೆ ಎಂದು ತನಿಖಾ ತಂಡ ತಿಳಿಸಿದೆ.

ಸೈಫಿ ಅವರು ಇನ್ನೂ ನಾಲ್ಕು ನಕಲಿ ಸಂಸ್ಥೆಗಳನ್ನು ಸ್ಥಾಪಿಸಿದ ಆರೋಪವಿದೆ. ಎಂ / ಎಸ್​ ಗ್ಯಾಲಕ್ಸಿ ಎಂಟರ್‌ಪ್ರೈಸಸ್, ಎಂ / ಎಸ್​ ಮೂನ್, ಎಂ /ಎಸ್​ ಸಿದ್ಧಾರ್ಥ್ ಎಂಟರ್‌ಪ್ರೈಸಸ್ ಮತ್ತು ಎಂ / ಎಸ್​ ಸನ್ ಎಂಟರ್‌ಪ್ರೈಸಸ್ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಮೇಲಿನ ಎಲ್ಲ ಸಂಸ್ಥೆಗಳು ಸರಕುಗಳ ನೈಜ ಪೂರೈಕೆ ಇಲ್ಲದೆ ಇನ್‌ವಾಯ್ಸ್‌ಗಳನ್ನು ಮಾತ್ರ ಪೂರೈಸುತ್ತವೆ. ಈ ಮೂಲಕ 190 ಕೋಟಿ ರೂ.ಗಳಿಗಿಂತ ಅಧಿಕ ನಕಲಿ ಐಟಿಸಿ ಎಸಗಿದ್ದಾರೆ. ದೆಹಲಿಯ ಅನೇಕ ಸ್ಥಳಗಳಲ್ಲಿ ಶೋಧ ಕಾರ್ಯ ನಡೆದಿದ್ದು, ಸಾಕ್ಷ್ಯ ಮತ್ತು ದಾಖಲೆಗಳನ್ನು ಕಲೆಹಾಕಲಾಗುತ್ತಿದೆ. ಈ ದಂಧೆಯಲ್ಲಿ ಸೈಫಿ ಪ್ರಮುಖ ಆರೋಪಿ ಎಂದು ತಿಳಿದು ಬಂದಿದೆ.

ಅಕ್ಟೋಬರ್ 9 ರಂದು ಸೈಫಿ ಅವರನ್ನು ಬಂಧಿಸಿ, ಗುರುಗ್ರಾಮ್​ನ ಹೆಚ್ಚುವರಿ ಸಿಜೆಎಂ ಮುಂದೆ ಹಾಜರುಪಡಿಸಲಾಯಿತು. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.