ನವದೆಹಲಿ: ಕೇಂದ್ರ ಸರ್ಕಾರ ಇತ್ತೀಚೆಗೆ ಘೋಷಿಸಿದ ಆರ್ಥಿಕ ಸುಧಾರಣೆಗಳಿಂದ ಚಾಲ್ತಿ ಖಾತೆ ಏರಿಕೆಗೆ ಸಾಕ್ಷಿ ಆಗಬಹುದು ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಹೇಳಿದ್ದಾರೆ.
ಸಿಐಐನ ಎಂಎನ್‌ಸಿ ಕಾನ್ಫರೆನ್ಸ್ 2020 ಉದ್ದೇಶಿಸಿ ಮಾತನಾಡಿದ ಅವರು, ಕಾರ್ಮಿಕ ಕಾಯ್ದೆ ಸುಧಾರಣೆಗಳ ಅನುಷ್ಠಾನ, ಎಂಎಸ್‌ಎಂಇ ವ್ಯಾಖ್ಯಾನದ ಬದಲಾವಣೆ ಮತ್ತು ಸುಲಭ ಹಿಂಪಡೆಯುವಿಕೆ ನಿಯಮಗಳ ಪಾಲನೆಯು ಉದ್ಯಮಿ ಸ್ನೇಹಿಯಾಗಿವೆ ಎಂದರು.
ಇದನ್ನೂ ಓದಿ: ಮಂಗಳೂರು-ಮೈಸೂರು ನಡುವೆ ವಿಮಾನಯಾನ ಸೇವೆ ಆರಂಭಕ್ಕೆ ಮುಹೂರ್ತ ಫಿಕ್ಸ್
ಕೇಂದ್ರ ಸರ್ಕಾರ ತೆಗೆದುಕೊಂಡ ಆರ್ಥಿಕ ಸುಧಾರಣಾ ಕ್ರಮಗಳಿಂದಾಗಿ ಕೋವಿಡ್ ಬಿಕ್ಕಟ್ಟಿನೊಂದಿಗೆ ಹೋರಾಡಿದರೂ ಭಾರತೀಯ ಆರ್ಥಿಕತೆಯ ಚಾಲ್ತಿ ಖಾತೆಯ ಪ್ರಮಾಣ ಏರಿಕೆಗೆ ಸಾಕ್ಷಿ ಆಗಬಹುದು ಎಂದು ಹೇಳಿದರು.
ನಿರಂತರವಾದ ಬೆಳವಣಿಗೆ ಕಾಯ್ದುಕೊಳ್ಳಲು ಸ್ಥೂಲ ಆರ್ಥಿಕ ರಚನೆಯನ್ನು ವ್ಯಾಪಕ ಉದ್ಯೋಗ ಒದಗಿಸುವ ವಲಯಗಳಿಗೆ ಬದಲಾಯಿಸಲಾಗುತ್ತಿದೆ ಎಂದರು.
ಎಫ್‌ಐಡಿಐ ನೀತಿಗಳಲ್ಲಿ ಉದಾರೀಕರಣದ ಸುಧಾರಣಾ ಕ್ರಮಗಳು, ಕೃಷಿ ಮತ್ತು ಕಾರ್ಮಿಕ ಕಾಯ್ದೆಗಳ ಸರಳೀಕರಣ, ಪಿಎಲ್‌ಐ ಯೋಜನೆಗಳು ವಿದೇಶಿ ಹೂಡಿಕೆ ಮನೋಭಾವಕ್ಕೆ ಉತ್ತೇಜನ ನೀಡಿವೆ ಎಂದು ಸಿಐಐ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಸೌಮಿತ್ರ ಭಟ್ಟಾಚಾರ್ಯ ತಿಳಿಸಿದ್ದಾರೆ.