ETV Bharat / business

ಸಹಕಾರಿ ಬ್ಯಾಂಕ್​ಗಳಲ್ಲಿ ಹಣದ ಬಿಕ್ಕಟ್ಟು... ಮಹೇಂದ್ರ ದೇವ್ ಬಿಚ್ಚಿಟ್ಟರು ಪರಿಹಾರದ ಗುಟ್ಟು..! - ಕೇಂದ್ರ ಸರ್ಕಾರ

ಪಿಎಂಸಿ ಬ್ಯಾಂಕ್​ ಹಗರಣವು ಸಹಕಾರಿ ಬ್ಯಾಂಕ್​ಗಳ ನಡೆಗಳತ್ತ ದೇಶವೇ ನೋಡುವಂತಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಹಿವಾಟು ಮತ್ತು ಗ್ರಾಹಕ ಸೇವೆಗಳ ಮೇಲೆ ನಿರ್ಬಂಧ ವಿಧಿಸಿದ ಬಳಿಕ ಬ್ಯಾಂಕ್ ಗ್ರಾಹಕರು ಭಯಭೀತರಾಗಿದ್ದಾರೆ. ಸಹಕಾರಿ ಬ್ಯಾಂಕ್​ಗಳಲ್ಲಿನ ಆಡಳಿತ ಕಮರಿಹೋಗಿದೆ. ಇದಕ್ಕೆಲ್ಲ ಬ್ಯಾಂಕ್ ಬೋರ್ಡ್‌ಗಳು, ಲೆಕ್ಕ ಪರಿಶೋಧಕರು, ಬ್ಯಾಂಕ್ ನಿರ್ವಹಣೆ, ರೇಟಿಂಗ್ ಏಜೆನ್ಸಿಗಳು, ನಿಯಂತ್ರಕರ ಆಡಳಿತದ ಕೊರತೆ, ಕಳಪೆ ನಿಯಂತ್ರಣವೇ ಕಾರಣವಾಗಿದೆ. ಇದನ್ನು ಉತ್ತಮ ಆಡಳಿತದ ಜೊತೆಗೆ ಠೇವಣಿದಾರರಲ್ಲಿ ವಿಶ್ವಾಸ ಮೂಡಿಸಬೇಕಿದೆ.

ಪಿಎಂಸಿ
author img

By

Published : Oct 25, 2019, 11:38 PM IST

ಮಹಾರಾಷ್ಟ್ರ ಮತ್ತು ಪಂಜಾಬ್ ಸಹಕಾರಿ ಬ್ಯಾಂಕ್ ಲಿಮಿಟೆಡ್​ನ (ಪಿಎಂಸಿ) ಹಗರಣವು ಸಹಕಾರಿ ಬ್ಯಾಂಕ್​ಗಳ ನಡೆಯತ್ತ ದೇಶವೇ ನೋಡುವಂತಾಗಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ವಹಿವಾಟು ಮತ್ತು ಗ್ರಾಹಕ ಸೇವೆಗಳ ಮೇಲೆ ನಿರ್ಬಂಧ ವಿಧಿಸಿದ ಬಳಿಕ ಬ್ಯಾಂಕ್ ಗ್ರಾಹಕರು ಭಯಭೀತರಾದರು. ಕೆಲವರು ಠೇವಣಿ ಹಿಂಪಡೆಯಲು ಆಗದೆ ಸಾವನ್ನಪ್ಪಿದರು. ‘ಭಾರತೀಯ ಬ್ಯಾಂಕ್​ ಕ್ಷೇತ್ರ ಸುರಕ್ಷಿತ ಮತ್ತು ಸ್ಥಿರವಾಗಿದೆ ಯಾರೂ ಆತಂಕಪಡುವ ಅಗತ್ಯವಿಲ್ಲ' ಎಂದು ಆರ್‌ಬಿಐ ಸಾರ್ವಜನಿಕರಿಗೆ ಅಭಯ ನೀಡಿತು. ಇಂತಹ ಸನ್ನಿವೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಿ ಆರ್ಥಿಕ ಕ್ಷೇತ್ರದ ಒಟ್ಟಾರೆ ಆರೋಗ್ಯವನ್ನು ಮರುಸ್ಥಾಪಿಸಬೇಕಿದೆ. ಬ್ಯಾಂಕ್​ ವಲಯದ ಮುಂದಿರುವ ಪ್ರಸ್ತುತ ಸ್ಥಿತಿಗತಿ, ಸವಾಲು ಮತ್ತು ಮುಂದಿನ ದಾರಿಗಳತ್ತ ಪರಿಶೀಲಿಸುವುದು ಈಗ ಮುಖ್ಯವಾಗಿದೆ.

ಪ್ರಸ್ತುತ ಸ್ಥಿತಿಗತಿ ಮತ್ತು ಸವಾಲುಗಳು
ಸಾಲದ ವಿತರಣೆಯಲ್ಲಿ ಸಹಕಾರಿ ಸಂಸ್ಥೆಗಳು ಪ್ರಮುಖ ಪಾತ್ರವಹಿಸುತ್ತವೆ. ಬ್ಯಾಂಕ್​ಗಳಿರದ ಕಡಿಮೆ ಜನಸಂಖ್ಯೆ ಪ್ರದೇಶದಲ್ಲಿ ಇವುಗಳ ಕಾರ್ಯಚರಣೆ ಅಗತ್ಯವಾಗಿದೆ. ಸಹಕಾರಿ ಬ್ಯಾಂಕ್​ಗಳು ಸಣ್ಣ ಸಾಲಗಾರರು, ಕಿರು ವ್ಯವಹಾರಗಳು, ಚಿಕ್ಕ ಸಮುದಾಯಗಳ ಸುತ್ತ ಕೇಂದ್ರೀಕೃತವಾಗಿವೆ. ಹೆಚ್ಚಿನ ಬಡ್ಡಿದರ ಮತ್ತು ವೈಯಕ್ತಿಕ ಹಿತಾಸಕ್ತಿಯಿಂದಾಗಿ ಠೇವಣಿದಾರರು ಈ ಬ್ಯಾಂಕ್​ಗಳತ್ತ ಆಕರ್ಷಿತರಾಗುತ್ತಾರೆ. 2018ರ ಸಹಕಾರಿ ವ್ಯಸ್ಥೆಯಲ್ಲಿ 1,551 ನಗರ ಸಹಕಾರಿ ಬ್ಯಾಂಕ್​ಗಳು (ಯುಸಿಬಿ) ಮತ್ತು 96,612 ಗ್ರಾಮೀಣ ಸಹಕಾರಿ ಬ್ಯಾಂಕ್​ಗಳಿವೆ. ಆರ್‌ಬಿಐ ದತ್ತಾಂಶದ ಅನ್ವಯ, ನಗರ ಸಹಕಾರಿ ಸಂಸ್ಥೆಗಳು ಆಸ್ತಿಯ ಗುಣಮಟ್ಟ ಸುಧಾರಿಸಿದರೂ ಒಟ್ಟಾರೆ ಲಾಭಾಂಶ ಮಧ್ಯಮಗತಿಯಲ್ಲಿದೆ ಎಂದಿದೆ. 1,551 ಬ್ಯಾಂಕ್​ಗಳಲ್ಲಿ 26 ನಿಯಂತ್ರಕ ‘ನಿರ್ದೇಶನ’ದ ಅಡಿ ಮತ್ತು 46 ಋಣಾತ್ಮಕ ಮೌಲ್ಯಗಳನ್ನ ಹೊಂದಿವೆ ಎಂದು ಹೇಳಿದೆ. ನಗರ ಸಹಕಾರಿ ಬ್ಯಾಂಕ್​ಗಳಲ್ಲಿ ಹಗರಣಗಳು ಹೆಚ್ಚಾಗಿ ನಡೆಯುತ್ತಿವೆ. ಉದಾ: 2001ರಲ್ಲಿ ಗುಜರಾತ್‌ನಲ್ಲಿ ನಡೆದ ಮಾಧವ್‌ಪುರ ಕೋಆಪರೇಟಿವ್ ಬ್ಯಾಂಕ್ ಹಗರಣ. ಇತ್ತೀಚಿನ ಪಿಎಂಸಿ ಬ್ಯಾಂಕ್​ ಹಗರಣ ಮೂರು ಸಮಸ್ಯೆಗಳನ್ನು ಒಳಗೊಂಡಿದೆ. 1. ಹಣಕಾಸಿನ ಅಕ್ರಮಗಳು, 2. ಆಂತರಿಕ ನಿಯಂತ್ರಣ ಮತ್ತು ಬ್ಯಾಂಕಿಂಗ್​ ವ್ಯವಸ್ಥೆಗಳ ವೈಫಲ್ಯ ಮತ್ತು 3. ಅದರ ಮಾನ್ಯತೆಗಳಲ್ಲಿನ ತಪ್ಪು/ ನಗದಿಗಿಂತ ಕಡಿಮೆ ವರದಿ. ಪಿಎಂಸಿ ತನ್ನ ಆಸ್ತಿಯ ಶೇ 73ರಷ್ಟು ಎಚ್‌ಡಿಐಎಲ್​ಗೆ (ಹೌಸಿಂಗ್ ಡೆವಲಪ್‌ಮೆಂಟ್ ಮತ್ತು ಇನ್​ಫ್ರಾಸ್ಟ್ರಕ್ಚರ್​ ಲಿಮಿಟೆಡ್) ಹಂಚಿಕೊಂಡಿದೆ. ಈ ಬ್ಯಾಂಕ್ ಆರ್‌ಬಿಐನ ಮೇಲ್ವಿಚಾರಣೆಯನ್ನು ಮರೆಮಾಚಲು 21,000ಕ್ಕೂ ಅಧಿಕ ನಕಲಿ ಖಾತೆಗಳನ್ನು ಸೃಜಿಸಿತ್ತು. ರಿಯಲ್ ಎಸ್ಟೇಟ್ ವಲಯದ ಒಂದು ಘಟಕಕ್ಕೆ ಭಾರಿ ಪ್ರಮಾಣದ ಲಾಭ ಮಾಡಿಕೊಡಲು ನಕಲಿ ಖಾತೆಗಳನ್ನು ಬಳಸಿಕೊಂಡಿದೆ ಎಂಬುದು ಈಗ ಬಹಿರಂಗವಾಗಿದೆ.

ಸಹಕಾರಿ ಬ್ಯಾಂಕ್​ಗಳು 1966ರಲ್ಲಿ ನೇರವಾಗಿ ಆರ್‌ಬಿಐ ಕಣ್ಗಾವಲಿನಡಿ ಬಂದವು. ಆದರೆ, ಇವುಗಳು ಉಭಯ ನಿಯಂತ್ರಣ ಸಮಸ್ಯೆಗಳನ್ನು ಎದುರಿಸುತ್ತಿವೆ. ನಗರ ಸಹಕಾರಿ ಬ್ಯಾಂಕ್​ಗಳನ್ನು ಆರ್‌ಬಿಐ ನಿಯಂತ್ರಿಸಿದರೇ ಸಹಕಾರಿ ಸಂಘಗಳನ್ನು ರಾಜ್ಯ ರಿಜಿಸ್ಟ್ರಾರ್‌ಗಳು ಸೇರಿದಂತೆ ಇತರರು ನಿಯಂತ್ರಿಸುತ್ತಾರೆ. ಆರ್‌ಸಿಎಸ್ ಚುನಾವಣೆಗಳ ನಿರ್ವಹಣೆ ಮತ್ತು ಅನೇಕ ಆಡಳಿತಾತ್ಮಕ ವಿಷಯಗಳ ಜೊತೆಗೆ ಆಡಿಟಿಂಗ್‌ನ ನಿಯಂತ್ರಣದಲ್ಲಿವೆ. ಆರ್‌ಬಿಐನದ್ದು ಮೇಲ್ವಿಚಾರಣೆಯ ಪರವಾನಗಿ ನೀಡುವುದು, ನಗದು ಮೀಸಲು, ಶಾಸನಬದ್ಧ ದ್ರವ್ಯತೆ ಮತ್ತು ಬಂಡವಾಳದ ಸಮರ್ಪಕ ಹಂಚಿಕೆ ಸೇರಿದಂತೆ ಬ್ಯಾಂಕ್​ಗಳ ಪರಿಶೀಲನೆಯಂತಹ ನಿಯಂತ್ರಕ ಅಂಶಗಳಿಗಷ್ಟೆ ಸೀಮಿತವಾಗಿದೆ. ಸಹಕಾರಿ ಬ್ಯಾಂಕ್​ಗಳ ಮೇಲೆ ಆರ್​ಬಿಐಗೆ ಹೆಚ್ಚಿನ ನಿಯಂತ್ರಣ ಅಧಿಕಾರ ಹೊಂದಿಲ್ಲ.

ಆರ್‌ಬಿಐ 1993-2004ರ ಅವಧಿಯಲ್ಲಿ ಯುಸಿಬಿಗಳಿಗಾಗಿ ಸಕ್ರಿಯ ಪರವಾನಗಿ ನೀತಿ ಪರಿಚಯಿಸಿತು. ಸಹಕಾರಿ ಬ್ಯಾಂಕ್​ಗಳ ಸಂಖ್ಯೆ ಏರಿಕೆಯಾದಂತೆ ಈ ಕ್ಷೇತ್ರದಲ್ಲಿ ಸಮಸ್ಯೆಗಳು ಮತ್ತು ಒತ್ತಡಗಳು ಹೆಚ್ಚಾದವು. ಆರ್‌ಬಿಐ ತಕ್ಷಣವೇ ಹೊಸ ಪರವಾನಗಿ ನೀಡುವುದನ್ನು ನಿಲ್ಲಿಸಿತು. ದುರ್ಬಲ ವಹಿವಾಟು, ಕಾರ್ಯಸಾಧುವಲ್ಲದ ಯುಸಿಬಿಗಳ ವಿಲೀನ/ ಸಂಯೋಜನೆ, ಮುಚ್ಚುವಿಕೆಯಂತಹ ಕ್ರಮಗಳಿಗೆ ಅದು ಮೊರೆ ಹೋಯಿತು.

ನಿಯಂತ್ರಕ ಪರಿಶೀಲನೆಗಳ ಹೊರತಾಗಿಯೂ ದುರ್ಬಲವಾದ ಕಾರ್ಪೊರೇಟ್​ ಆಡಳಿತ, ವೃತ್ತಿಪರತೆಯ ಕೊರತೆ ಮತ್ತು ತಂತ್ರಜ್ಞಾನ ಅಳವಡಿಕೆಯಲ್ಲಿನ ಹಿಂಜರಿಕೆ ಇವುಗಳನ್ನು ಹೈರಾಣಾಗಿಸಿತ್ತು. ವಾಣಿಜ್ಯ ಬ್ಯಾಂಕ್​ಗಳಂತೆ ವಿಸ್ತರಣೆ ಮತ್ತು ತಂತ್ರಜ್ಞಾನ ಅನುಷ್ಠಾನದಲ್ಲಿ ಸಹಕಾರಿ ಬ್ಯಾಂಕ್​ಗಳು ಹಿಂದುಳಿದವು. ಪಾವತಿ ಬ್ಯಾಂಕ್​ಗಳು, ಸಣ್ಣ ಹಣಕಾಸು ಬ್ಯಾಂಕ್​ಗಳು ಮತ್ತು ಎನ್‌ಬಿಎಫ್‌ಸಿಗಳಿಂದ ಪ್ರಬಲವಾದ ಸ್ಪರ್ಧೆ ಎದುರಿಸಬೇಕಾಯಿತು. ಬಂಡವಾಳಕ್ಕೆ ಸಂಬಂಧಿಸಿದ ಸಮಸ್ಯೆಗಳೂ ಸಹ ಇವೆ. ನಗರ ಸಹಕಾರ ಸಂಘಗಳು ಸಾರ್ವಜನಿಕ ಸಂಚಿಕೆ ಅಥವಾ ಪ್ರೀಮಿಯಂ ಷೇರು ವಿತರಣೆಯ ಮೂಲಕ ಬಂಡವಾಳ ಸಂಗ್ರಹಿಸಲು ಸಾಧ್ಯವಿಲ್ಲ.

ಸಹಕಾರಿ ಬ್ಯಾಂಕ್​ಗಳ ಆಡಳಿತ ರಚನೆಯ ಸಮಸ್ಯೆ ಎಂದರೆ ವೃತ್ತಿಪರ ಮಂಡಳಿ ಹೊಂದಲು ಸಾಧ್ಯವಿಲ್ಲ. ಸಹಕಾರಿ ಬ್ಯಾಂಕ್​ನ ನಿರ್ದೇಶಕರ ಮಂಡಳಿಯನ್ನು ಬ್ಯಾಂಕ್​ನ ಸದಸ್ಯರು ಆಯ್ಕೆ ಮಾಡುತ್ತಾರೆ. ಬ್ಯಾಂಕ್​ ನಿಯಂತ್ರಣಕ್ಕೆ ಪಡೆಯಲು ರಾಜಕಾರಣಿಗಳಿಂದ ಒತ್ತಡ ತಂತ್ರ ಹೆಚ್ಚಾಗಿ ನಡೆಯುತ್ತದೆ. ಅನೇಕ ರಾಜ್ಯಗಳಲ್ಲಿ ಈ ಸಂಸ್ಥೆಗಳ ರಾಜಕೀಯ ನಿಯಂತ್ರಣಕ್ಕೆ ಒಳಪಟ್ಟಿವೆ. ಆಡಳಿತಾತ್ಮಕ ಅಭಿವ್ಯಕ್ತಿ, ಸಾಲಗಳ ಹಂಚಿಕೆ, ಸಂಸ್ಥೆಗಳಲ್ಲಿ ಉದ್ಯೋಗ ನೀಡಿಕೆಯಲ್ಲಿ ಅವರು ಪ್ರಭಾವ ಬೀರುತ್ತಾರೆ.

ಮುಂದಿನ ನಡೆ ಏನು?

ಠೇವಣಿದಾರರ ಮತ್ತು ಷೇರು ಮಧ್ಯಸ್ಥಗಾರರ ಮೇಲೆ ವಿಶ್ವಾಸ ಮೂಡಲು ಸಹಕಾರಿ ಬ್ಯಾಂಕ್​ಗಳ ನಿಯಂತ್ರಣ ಮತ್ತು ಆಡಳಿತವನ್ನು ಮರುಪರಿಶೀಲಿಸುವ ಅವಶ್ಯಕತೆಯಿದೆ. ಸರ್ಕಾರವು ಪ್ರಸ್ತುತ ಹಣಕಾಸು ಹಾಗೂ ಸಹಕಾರಿ ಬ್ಯಾಂಕ್​ಗಳ ಮಹತ್ವವನ್ನು ಮರು ಮೌಲ್ಯಮಾಪನ ಮಾಡುವುದು ಉತ್ತಮ. ಕೆಲವು ಸಹಕಾರಿ ಬ್ಯಾಂಕ್​ಗಳಲ್ಲಿನ ಆಡಳಿತ ಕಮರಿಹೋಗಿದೆ ಎಂಬ ಅರ್ಥವಿದೆ. ಇದಕ್ಕೆಲ್ಲ ಬ್ಯಾಂಕ್ ಬೋರ್ಡ್‌ಗಳು, ಲೆಕ್ಕ ಪರಿಶೋಧಕರು, ಬ್ಯಾಂಕ್ ನಿರ್ವಹಣೆ, ರೇಟಿಂಗ್ ಏಜೆನ್ಸಿಗಳು, ನಿಯಂತ್ರಕರ ಆಡಳಿತದ ಕೊರತೆ, ಕಳಪೆ ನಿಯಂತ್ರಣವೇ ಕಾರಣವಾಗಿದೆ. ಇದನ್ನು ಉತ್ತಮ ಆಡಳಿತದ ಜೊತೆಗೆ ಠೇವಣಿದಾರರಲ್ಲಿ ವಿಶ್ವಾಸ ಮೂಡಿಸಬೇಕಿದೆ.

ಆರ್‌ಬಿಐ ರಾಜ್ಯ ಸರ್ಕಾರಗಳೊಂದಿಗೆ 'ಎಂಒಯು' ಮಾಡಿಕೊಂಡಿದ್ದರೂ ನಿಯಮಗಳನ್ನು ಜಾರಿಗೆ ತರಲು ರಾಜ್ಯ ಸರ್ಕಾರಗಳು ಸಹಕರಿಸದ ಹೊರತು ಮೇಲ್ವಿಚಾರಣೆ ಪರಿಣಾಮಕಾರಿಯಾಗಿ ನಡೆಯದು. ಆರ್‌ಬಿಐ ಸಹಕಾರ ಸಾಲ ನೀಡುವವರನ್ನು ವೃತ್ತಿಪರವಾಗಿ ವರ್ತಿಸುವಂತೆ ಒತ್ತಾಯಿಸುತ್ತಿದೆ. ಎಚ್. ಮಾಲೆಗಂ ನೇತೃತ್ವದ ಒಂದು ಸಮಿತಿ ರಚಿಸಿತ್ತು. ಅದು ನಿರ್ದೇಶಕರ ಮಂಡಳಿ ಹೊರತುಪಡಿಸಿ ಯೋಗ್ಯ ಮತ್ತು ಅರ್ಹರ ನಿರ್ವಹಣಾ ಮಂಡಳಿಗೆ ಶಿಫಾರಸು ಮಾಡಿತು. ಚುನಾಯಿತ ನಿರ್ದೇಶಕರಿಗೆ ವಿರುದ್ಧವಾಗಿ ಕಾರ್ಯಾಚರಣೆಗಳ ಮೇಲೆ ನೈಜವಾಗಿ ನಿಯಂತ್ರಣ ತೆಗೆದುಕೊಳ್ಳುವ ನಿರ್ವಹಣಾ ಮಂಡಳಿ ಹೊಂದಬೇಕೆಂಬ ಆಲೋಚನೆ ಇರಿಸಿತ್ತು. ನಿರ್ದೇಶಕರ ಆಯ್ಕೆಯಲ್ಲಿ ಬದಲಾವಣೆಗಳು ಆಗಬೇಕು. ವಿಶೇಷ ಜ್ಞಾನ ಮತ್ತು ವೃತ್ತಿಪರ ನಿರ್ವಹಣಾ ಕೌಶಲ್ಯ ಹೊಂದಿರುವವರು ಸದಸ್ಯರಾಗಿ ಬರಬೇಕು ಎಂದು ಒತ್ತಿ ಹೇಳಿತ್ತು.

ಆರ್. ಗಾಂಧಿ ಅಧ್ಯಕ್ಷತೆಯ ಉನ್ನತಾಧಿಕಾರಗಳ ಸಮಿತಿಯ ಶಿಫಾರಸಿನಂತೆ ಅರ್ಹ ನಗರ ಸಹಕಾರಿ ಬ್ಯಾಂಕ್​​ಗಳನ್ನು ಸಣ್ಣ ಹಣಕಾಸು ಬ್ಯಾಂಕ್​ಗಳಾಗಿ ಸ್ವಯಂಪ್ರೇರಿತವಾಗಿ ಪರಿವರ್ತಿಸುವ ಯೋಜನೆಯನ್ನು 2018ರಲ್ಲಿ ಆರ್‌ಬಿಐ ಘೋಷಿಸಿತು. ಯುಸಿಬಿಗಳು ಕನಿಷ್ಠ ನಿವ್ವಳ ಮೌಲ್ಯ ರೂ. 50 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನದ್ದು ಹೊಂದಿದ್ದವುಗಳು ಸ್ವಯಂಪ್ರೇರಿತ ಪರಿವರ್ತನೆಗೆ ಅರ್ಹತೆ ಪಡೆದಿದ್ದವು. ಆದರೆ, ಸಣ್ಣ ಹಣಕಾಸು ಬ್ಯಾಂಕ್​ಗಳಾಗಲು ಈ ವಲಯದಿಂದ ತೀವ್ರವಾದ ಪ್ರತಿರೋಧ ಉಂಟಾಗಿದ್ದು ಆಶ್ಚರ್ಯಕರವಾಗಿದೆ. ಸಹಭಾಗಿತ್ವ ಷೇರು ಕಂಪನಿಯಾಗಿ ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸಲು ನಗರ ಸಹಕಾರಿ ಬ್ಯಾಂಕ್​ಗಳಿಗೆ ಇತರ ಬ್ಯಾಂಕ್​ಗಳು ಸ್ವತಃ ಉತ್ತೇಜಿಸುವ ಸಂಸ್ಥೆಯನ್ನು ಹೊಂದಬಹುದು ಎಂದು ಆರ್‌ಬಿಐ ಹೇಳಿದೆ. ದುರ್ಬಲ ಬ್ಯಾಂಕ್​ಗಳನ್ನು ಬಲವಾದ ಬ್ಯಾಂಕ್​ಗಳೊಂದಿಗೆ ವಿಲೀನಗೊಳಿಸುವುದನ್ನು ಪ್ರೋತ್ಸಾಹಿಸಬೇಕು. ಇತರ ಬ್ಯಾಂಕ್​ಗಳೊಂದಿಗೆ ಸ್ಪರ್ಧಿಸಲು ಸಹಕಾರಿ ಬ್ಯಾಂಕ್​ಗಳಲ್ಲಿ ತಂತ್ರಜ್ಞಾನದ ಬಳಕೆ ಉತ್ತೇಜಿಸಬೇಕಾಗಿದೆ.

ನಗರ ಸಹಕಾರಿ ಬ್ಯಾಂಕ್ ಇತರ ನಗರ ಸಹಕಾರಿ ಬ್ಯಾಂಕ್​ಗಳ ಠೇವಣಿಗಳನ್ನು ಸ್ವೀಕರಿಸಬೇಕೆ ಎಂಬುದರ ಕುರಿತು ಪರಿಶೀಲಿಸುವ ಸಮಯ ಇದಾಗಿದೆ. ದೊಡ್ಡ ಯುಸಿಬಿಯಲ್ಲಿ ಠೇವಣಿಗಳ ವೈಫಲ್ಯ ಗಮನಾರ್ಹವಾಗಿದೆ. ಠೇವಣಿದಾರರ ಆಸಕ್ತಿ ಮತ್ತು ಆರ್ಥಿಕ ಸ್ಥಿರತೆಯ ಸಮಸ್ಯೆಯನ್ನು ಗಮನದಲ್ಲಿ ಇಟ್ಟುಕೊಂಡು ಅಂತರ್ ಯುಸಿಬಿ ಠೇವಣಿ ನೀತಿಯನ್ನು ಮರುಪರಿಶೀಲಿಸುವುದು ಈಗ ಸೂಕ್ತ. ಠೇವಣಿಗಳ ವಿಮೆ ಭಾರತೀಯ ಬ್ಯಾಂಕಿಂಗ್‌ನ ಮತ್ತೊಂದು ಪ್ರಮುಖ ವಿಷಯವಾಗಿದೆ. ಪ್ರಸ್ತುತ, ಠೇವಣಿ ವಿಮೆ ಮತ್ತು ಸಾಲ ಖಾತರಿ ನಿಗಮ (ಡಿಐಜಿಸಿ) ಸೇರಿ ಪ್ರತಿ ಠೇವಣಿದಾರರಿಗೆ 1 ಲಕ್ಷ ರೂ. ಠೇವಣಿ ವಿಮಾ ರಕ್ಷಣೆ ಒದಗಿಸಲಾಗುತ್ತಿದೆ. ಭಾರತದ ಬ್ಯಾಂಕ್ ಠೇವಣಿ ವಿಮಾ ರಕ್ಷಣೆಯಲ್ಲಿನ ಪರಿಷ್ಕರಣೆಯು ಸರಾಸರಿಗಿಂತ ಕಡಿಮೆಯಾಗಿದೆ.

ಭಾರತದಲ್ಲಿ ಸಮಸ್ಯೆಗೆ ಸಿಲುಕಿರುವ ಬ್ಯಾಂಕ್​ಗಳಲ್ಲಿನ ಠೇವಣಿದಾರರು ಕೆಲವು ವರ್ಷಗಳ ಕಾಲ ಇದನ್ನು ಸಹಿಸಿಕೊಳ್ಳುತ್ತಾರೆ. ವಿಮಾ ಹಣದ ಮೇಲೆ ಕೈ ಹಾಕುವ ಮೊದಲು ಅಡೆತಡೆಗಳನ್ನು ಮೀರಿ ನಿಲ್ಲುತ್ತಾರೆ. ಆರ್‌ಬಿಐ ಹಾಗೂ ಸರ್ಕಾರವು ಹೆಚ್ಚುತ್ತಿರುವ ವಿಮೆ ಮತ್ತು ತ್ವರಿತ ಇತ್ಯರ್ಥದ ಕಡೆ ಗಮನಹರಿಸಬೇಕಾಗಿದೆ. ಬ್ಯಾಂಕ್ ಠೇವಣಿಗಳ ವಿಮಾ ರಕ್ಷಣೆಯನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂಬುದು ವರದಿಯಾಗಿದೆ. ರೋಗ ಪೀಡಿತ ಬ್ಯಾಂಕ್​ನಲ್ಲಿರುವ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಬೇಕು. ಇಲ್ಲದಿದ್ದರೇ ಠೇವಣಿದಾರರು ತಮ್ಮ ಠೇವಣಿಗಳನ್ನು ಅಷ್ಟೆ ವೇಗವಾಗಿ ಹಿಂಪಡೆಯಬಹುದು.

ಸಹಕಾರಿ ಬ್ಯಾಂಕ್​ಗಳಲ್ಲಿನ ಇತ್ತೀಚಿನ ಬೆಳವಣಿಗೆಗಳು ಸಮಗ್ರ ಚೌಕಟ್ಟಿನೊಂದಿಗೆ ಹೊರ ಬರಲು ಇದೊಂದು ಉತ್ತಮ ಅವಕಾಶ. ಜನಸಾಮಾನ್ಯರ ಉಳಿತಾಯ ರಕ್ಷಿಸಲು ಭಾರತವು ಸಾಕಷ್ಟು ಸದೃಢವಾದ ಆರ್ಥಿಕ ವ್ಯವಸ್ಥೆಯನ್ನು ಹೊಂದಿಲ್ಲ. 'ಪರಿಣಾಮಕಾರಿಯಾದ ನಿಯಂತ್ರಣವನ್ನು ಜಾರಿಗೆ ತರಲು ಕಾಯ್ದೆಗಳಿಗೆ ತಿದ್ದುಪಡಿ ತರುವ ಅಗತ್ಯವಿದ್ದರೆ ಸರ್ಕಾರ ಅವುಗಳನ್ನು ಮೌಲ್ಯಮಾಪನ ಮಾಡಲಿದೆ' ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. ಸಹಕಾರಿ ವಲಯದ ಸಮಸ್ಯೆಗಳ ಬೆಳವಣಿಗೆಗಳನ್ನು ವಿವರವಾಗಿ ಅಧ್ಯಯನ ಮಾಡುವಂತೆ ಅವರು ಆರ್‌ಬಿಐ ಜೊತೆಗೆ ಸಚಿವಾಲಯದ ಕಾರ್ಯದರ್ಶಿಗಳನ್ನು ಅವರು ಕೋರಿದ್ದಾರೆ. ಕಾಯ್ದೆಗಳನ್ನು ತಿದ್ದುಪಡಿ ಮಾಡುವ ವಿಧಾನಗಳ ಬಗ್ಗೆಯೂ ಚರ್ಚಿಸಿ ಪಿಎಂಸಿ ಬಿಕ್ಕಟ್ಟಿನಿಂದ ಹೊರತಂದು ಸಹಕಾರಿ ಬ್ಯಾಂಕ್​ಗಳ ಗ್ರಾಹಕರ ವಿಶ್ವಾಸವನ್ನು ಮರುಸ್ಥಾಪಿಸಲಿ ಎಂದು ಆಶಿಸುತ್ತೇನೆ.

ಎಸ್. ಮಹೇಂದ್ರ ದೇವ್, ಉಪಕುಲಪತಿ ಐಜಿಐಡಿಆರ್ ಮುಂಬೈ

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.