ETV Bharat / business

ಈ ಬಾರಿಯ ಬಜೆಟ್ ಮಂಡನೆ ಪ್ರಕ್ರಿಯೆಯಲ್ಲಿ ಐತಿಹಾಸಿಕ ಬದಲಾವಣೆ.. ಏನದು?

author img

By

Published : Jan 11, 2021, 3:00 PM IST

1860ರ ಏಪ್ರಿಲ್​ 7ರಂದು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಬಜೆಟ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಅಂದಿನ ಹಣಕಾಸು ಸಚಿವ ಜೇಮ್ಸ್​ ವಿಲ್ಸನ್​ ಅವರು ರಚಿಸಿದ್ದರು. ಅಲ್ಲಿಂದ ಇಲ್ಲಿಯ ತನಕ ಬಜೆಟ್ ಪ್ರತಿಗಳನ್ನು ಮುದ್ರಿಸಿ ಮಂಡನೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕಾಗದ ರಹಿತವಾಗಿ ಮಂಡನೆ ಆಗಲಿದೆ.

Budget
ಬಜೆಟ್

ನವದೆಹಲಿ: ಸಾಂಕ್ರಾಮಿಕ ರೋಗದ ಮಧ್ಯೆ ಬಜೆಟ್ ದಾಖಲೆಗಳನ್ನು ಮುದ್ರಿಸದಿರಲು ಹಣಕಾಸು ಸಚಿವಾಲಯ ನಿರ್ಧರಿಸಿದ್ದರಿಂದ ಫೆಬ್ರವರಿ 1ರ ಬಜೆಟ್ ಕಾಗದರಹಿತವಾಗಿರಲಿದೆ.

ಇದು ಐತಿಹಾಸಿಕ ಕ್ರಮವಾಗಿದ್ದು, ಸ್ವತಂತ್ರ ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ಪತ್ರಿಕೆಗಳನ್ನು ಮುದ್ರಿಸಲಾಗುವುದಿಲ್ಲ. ಸಂಸತ್ತಿನ ಉಭಯ ಸದನಗಳಿಂದ ಸರ್ಕಾರ ಇದಕ್ಕೆ ಅನುಮತಿ ಪಡೆದಿದೆ ಎಂದು ಮೂಲಗಳು ತಿಳಿಸಿವೆ.

1860ರ ಏಪ್ರಿಲ್​ 7ರಂದು ಬ್ರಿಟಿಷ್ ಆಳ್ವಿಕೆಯಲ್ಲಿ ಭಾರತದ ಬಜೆಟ್ ಅನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು. ಅಂದಿನ ಹಣಕಾಸು ಸಚಿವ ಜೇಮ್ಸ್​ ವಿಲ್ಸನ್​ ಅವರು ಬಜೆಟ್ ರಚಿಸಿದ್ದರು. ಅಲ್ಲಿಂದ ಇಲ್ಲಿಯ ತನಕ ಬಜೆಟ್ ಪ್ರತಿಗಳನ್ನು ಮುದ್ರಿಸಿ ಮಂಡನೆ ಮಾಡಲಾಗುತ್ತಿತ್ತು. ಇದೇ ಮೊದಲ ಬಾರಿಗೆ ಕಾಗದ ರಹಿತವಾಗಿ ಮಂಡನೆ ಆಗಲಿದೆ.

ಇದನ್ನೂ ಓದಿ: ಮಹಿಳೆಯರಿಂದ 16,000 ಕಿ.ಮೀ. ತಡೆರಹಿತಿ​ ಫ್ಲೈಟ್ ಚಾಲನೆ: ನೀವು ದೇಶದ ಹೆಮ್ಮೆ- ರಾಹುಲ್ ಗಾಂಧಿ

ಕೊರೊನಾ ವೈರಸ್ ಭಯದ ನಡುವೆ ಮುದ್ರಣ ಪ್ರಕ್ರಿಯೆಯು ಹಲವು ಜನರು ಹದಿನೈದು ದಿನಗಳ ಕಾಲ ಇರಬೇಕಾಗಿದ್ದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಜೆಟ್ ದಾಖಲೆಗಳನ್ನು ಸಾಮಾನ್ಯವಾಗಿ ನಾರ್ಥ್​ ಬ್ಲಾಕ್‌ನಲ್ಲಿರುವ ಹಣಕಾಸು ಸಚಿವಾಲಯದ ಆಂತರಿಕ ಮುದ್ರಣಾಲಯದಲ್ಲಿ ಮುದ್ರಿಸಲಾಗುತ್ತದೆ.

ಸಾಂಪ್ರದಾಯಿಕ 'ಹಲ್ವಾ' ಸಮಾರಂಭ ಸಹ ಈ ವರ್ಷ ಸ್ಥಗಿತವಾಗಬಹುದು ಅಥವಾ ಸೀಮಿತ ಸಭೆ ಸದಸ್ಯರ ಅಧೀನ ಕಾರ್ಯದಲ್ಲಿ ನಡೆಸಬಹುದು ಎಂದು ಮೂಲಗಳು ಹೇಳಿವೆ. 2021-22ರ ಆರ್ಥಿಕ ವರ್ಷದ ಈ ಬಜೆಟ್‌ನಲ್ಲಿ ಹಲವು ಹಳೆಯ ಸಂಪ್ರದಾಯಗಳು ಮುರಿದುಹೋಗಬಹುದು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.