ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ವಿಧಿಸಿದ್ದರಿಂದ ಮೋಟಾರ್ ವಾಹನ ಕಾಯ್ದೆ ಮತ್ತು ಕೇಂದ್ರ ಮೋಟಾರ ವಾಹನ ನಿಯಮಗಳಿಗೆ ಸಂಬಂಧಿಸಿದ ದಾಖಲೆಗಳ ಮಾನ್ಯತೆಯನ್ನು ಜೂನ್ 30ರವರೆಗೆ ಸರ್ಕಾರ ವಿಸ್ತರಿಸಿದೆ.
2020ರ ಫೆಬ್ರವರಿ 1 ಮತ್ತು 2020ರ ಜೂನ್ 30ರ ನಡುವೆ ಮಾನ್ಯತೆ ಅವಧಿ ಮುಗಿಯುವ ದಾಖಲೆಗಳಿಗೆ ಮಾನ್ಯತೆ ವಿಸ್ತರಣೆ ವ್ಯಾಪ್ತಿಗೆ ಒಳಪಡುತ್ತವೆ.
ಲಾಕ್‌ಡೌನ್ ಸಮಯದಲ್ಲಿ ದಾಖಲೆಗಳನ್ನು ನವೀಕರಿಸಲು ಸಾಧ್ಯವಿಲ್ಲದ ಕಾರಣ, ಎಂವಿ ಆಕ್ಟ್ 1988 ಮತ್ತು ಸಿಎಂವಿ ನಿಯಮ 1989ಗೆ ಸಂಬಂಧಿಸಿದ ವಿವಿಧ ದಾಖಲೆಗಳು 2020ರ ಫೆಬ್ರವರಿ 1ರಿಂದ 2020ರ ಜೂನ್ 30ರ ನಡುವೆ ಮುಕ್ತಾಯಗೊಳ್ಳುತ್ತವೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದರು.