ನವದೆಹಲಿ: ಪೆಟ್ರೋಲ್ ಮೇಲಿನ ಅಬಕಾರಿ ಸುಂಕ ಲೀಟರ್‌ಗೆ 10 ರೂ. ಮತ್ತು ಡೀಸೆಲ್ ಮೇಲಿನ ಸುಂಕ ಲೀಟರ್‌ಗೆ 13 ರೂ. ಮಂಗಳವಾರ ತಡರಾತ್ರಿ ಏರಿಸಲಾಗಿದೆ. ಮುಂದಿನ ದಿನಗಳಲ್ಲಿ ಮತ್ತೆ 3 - 6 ರೂ. ಸುಂಕ ಏರಿಕೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಲಾಕ್ಡೌನ್ನಿಂದ ದೊಡ್ಡ ವಿನಾಯತಿ ಸಿಕ್ಕಿದ ಬೆನ್ನಲ್ಲೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಅಬಕಾರಿ ಸುಂಕ ಹೆಚ್ಚಳ ಮಾಡಿ ಆರ್ಥಿಕತೆಗೆ ಆದಾಯ ತುಂಬಿಸುವ ಕೆಲಸ ಮಾಡಿದೆ. ಈ ವರ್ಷ ಹೆಚ್ಚುವರಿ ಆದಾಯಕ್ಕಾಗಿ ಎರಡು ಪೆಟ್ರೋಲಿಯಂ ಉತ್ಪನ್ನಗಳ ಆದಾಯಕ್ಕೆ ಕಡಿತ ಆಗಬಹುದು.
ಕೋವಿಡ್ -19 ಸಂಬಂಧಿತ ಅಡೆ ತಡೆಗಳನ್ನು ಎದುರಿಸಲು ಮತ್ತು ಹೆಚ್ಚುವರಿ ಆರ್ಥಿಕ ಚೇತರಿಕೆಯ ಪ್ಯಾಕೇಜ್‌ಗಳಿಗೆ ಹಣಕಾಸು ಒದಗಿಸಲು ಹೆಚ್ಚಿನ ಸಂಪನ್ಮೂಲಗಳನ್ನು ಒಟ್ಟುಗೂಡಿಸುವ ಅವಶ್ಯಕತೆಯಿದೆ ಎಂದು ಕೇಂದ್ರ ಭಾವಿಸಿದರೆ, ಈ ವರ್ಷದ ಮುಂದಿನ ಮಧ್ಯಂತರ ಅವಧಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕದಲ್ಲಿ 3-6 ರೂ. ಹೆಚ್ಚಳ ಆಗಬಹುದು ಎಂದು ಮೂಲಗಳು ಹೇಳುತ್ತಿವೆ.
ಈ ಮಟ್ಟದ ಏರಿಕೆಯು ವರ್ಷಕ್ಕೆ 60,000 ಕೋಟಿ ರೂ.ಯಷ್ಟು ಸರ್ಕಾರಕ್ಕೆ ಹೆಚ್ಚುವರಿ ಆದಾಯ ತಂದು ಕೊಡಲಿದೆ.
ಮಾರ್ಚ್ನಲ್ಲಿ ಪೆಟ್ರೋಲ್ಗೆ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ಲೀಟರ್‌ಗೆ 18 ರೂ. ಮತ್ತು ಡೀಸೆಲ್ಗೆ 12 ರೂ. ಹೆಚ್ಚಿಸಲು ಕೇಂದ್ರವು ಸಂಸತ್ತಿನ ಅನುಮೋದನೆ ಪಡೆದಿತ್ತು. ಆದರೆ, ಆಗ ವಿಧಿಸಿದ ತೆರಿಗೆಯನ್ನು ಬದಲಾಯಿಸಲಿಲ್ಲ. ಮಂಗಳವಾರ ವಿಶೇಷ ಹೆಚ್ಚುವರಿ ಅಬಕಾರಿ ಸುಂಕವಾಗಿ ಪೆಟ್ರೋಲ್ ಮೇಲೆ 12 ರೂ. ಮತ್ತು ಡೀಸೆಲ್ ಮೇಲೆ 9 ರೂ.ಗೆ ಏರಿಸಲಾಗಿದೆ. ಇದರಿಂದಾಗಿ ಪೆಟ್ರೋಲ್‌ನ ಅಬಕಾರಿ ಸುಂಕ ಲೀಟರ್‌ಗೆ ಇನ್ನೂ 6 ರೂ. ಮತ್ತು ಡೀಸೆಲ್ ಮೇಲೆ ಲೀಟರ್‌ಗೆ 3 ರೂ. ಹೆಚ್ಚಿಸಲು ಸರ್ಕಾರಕ್ಕೆ ಅವಕಾಶವಿದೆ.