ETV Bharat / business

ಮರುಬಳಕೆಯ ಮಾಸ್ಕ್​ ಶೋಧನೆ ಕಾರ್ಯ ಪ್ರಗತಿಯಲ್ಲಿದೆ.. ಸಿಪೆಟ್ ಸಂಸ್ಥೆ

ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಕಾರ್ಯದರ್ಶಿ ಆರ್ ಕೆ ಚತುರ್ವೇದಿ ಅವರು, ಕೋವಿಡ್-19ನ ಈ ಸಂದರ್ಭದಲ್ಲಿ ಬ್ಯಾಕ್ಟೀರಿಯಾ ನಿರೋಧಕ/ಆಂಟಿಮೈಕ್ರೊಬಿಯಲ್ ಮರುಬಳಕೆ ಮಾಡಬಹುದಾದ ಮುಖಗವಸುಗಳು, ವೆಂಟಿಲೇಟರ್ ಸ್ಪ್ಲಿಂಟರ್​ ಮತ್ತು ಪಿಪಿಇ ಕಿಟ್​ ಸಂಬಂಧಿತ ನಡೆಯುತ್ತಿರುವ ಪ್ರಗತಿಗಳ ಬಗ್ಗೆ ಸಚಿವರಿಗೆ ವಿರಿಸಿದರು.

Sadananda Gowda
ಸದಾನಂದ ಗೌಡ
author img

By

Published : Jun 19, 2020, 9:04 PM IST

ನವದೆಹಲಿ : ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ ವಿ ಸದಾನಂದ ಗೌಡ ಅವರು ಇಂದು ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನದ ಕೇಂದ್ರೀಯ ಸಂಸ್ಥೆಯ (ಸಿಪೆಟ್) ಚಟುವಟಿಕೆಗಳನ್ನು ವಿಡಿಯೋ ಕಾನ್ಫರೆನ್ಸ್​ ಮೂಲಕ ಪರಿಶೀಲಿಸಿದರು.

ಕೋವಿಡ್-19 ಸಾಂಕ್ರಾಮಿಕ ವೇಳೆ ಕೌಶಲ್ಯ, ತಂತ್ರಜ್ಞಾನ ಬೆಂಬಲಿತ ಸೇವೆಗಳು ಮತ್ತು ಸಂಶೋಧನೆಗೆ ಸಂಬಂಧ ಸಿಪೆಟ್ ಕೈಗೊಂಡ ಚಟುವಟಿಕೆಗಳ ಬಗ್ಗೆ ಸಿಪೆಟ್ ನಿರ್ದೇಶಕರು ಸಚಿವರಿಗೆ ತಿಳಿಸಿದರು. ಪೆಟ್ರೋಕೆಮಿಕಲ್ ವಲಯದಲ್ಲಿ ಎಂಎಸ್ಎಂಇಗಳ ಬೆಳವಣಿಗೆ ಬೆಂಬಲಿಸಲು ಆತ್ಮ ನಿರ್ಭರ ಭಾರತ್ ಅಭಿಯಾನಕ್ಕೆ ಅನುಗುಣವಾಗಿ ಸಿಪೆಟ್, ತನ್ನ ಗ್ರಾಹಕರ ಜಾಲದ ಸಾಮರ್ಥ್ಯ ಬಳಸಿಕೊಳ್ಳಬೇಕು. ವೈದ್ಯಕೀಯ ವೃತ್ತಿಪರರಿಗೆ ಅನುಕೂಲವಾಗುವ ಪಿಪಿಇ ಕಿಟ್ ಅಭಿವೃದ್ಧಿಪಡಿಸುವಂತೆ ಸಿಪೆಟ್ ನಿರ್ದೇಶಕರಿಗೆ ಸೂಚಿಸಿದರು.

ರಾಸಾಯನಿಕ ಮತ್ತು ಪೆಟ್ರೋಕೆಮಿಕಲ್ಸ್ ಕಾರ್ಯದರ್ಶಿ ಆರ್ ಕೆ ಚತುರ್ವೇದಿ ಅವರು, ಕೋವಿಡ್-19ನ ಈ ಸಂದರ್ಭದಲ್ಲಿ ಬ್ಯಾಕ್ಟೀರಿಯಾ ನಿರೋಧಕ/ಆಂಟಿಮೈಕ್ರೊಬಿಯಲ್ ಮರುಬಳಕೆ ಮಾಡಬಹುದಾದ ಮುಖಗವಸುಗಳು, ವೆಂಟಿಲೇಟರ್ ಸ್ಪ್ಲಿಂಟರ್​ ಮತ್ತು ಪಿಪಿಇ ಕಿಟ್​ ಸಂಬಂಧಿತ ನಡೆಯುತ್ತಿರುವ ಪ್ರಗತಿಗಳ ಬಗ್ಗೆ ಸಚಿವರಿಗೆ ವಿರಿಸಿದರು.

ವೈದ್ಯಕೀಯ ರೋಗನಿರ್ಣಯ ಮತ್ತು ವೈದ್ಯಕೀಯ ಸಂಶೋಧನೆಯಂತಹ ಇತರ ಕ್ಷೇತ್ರಗಳಲ್ಲಿ ಈಗಾಗಲೇ ಸಿಪೆಟ್ ಕೆಲಸ ಮಾಡುತ್ತಿದೆ. ಪಾಲಿಮರ್ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ವೈದ್ಯಕೀಯ ಸಾಧನ ಪಾರ್ಕ್​ಗಳ ಅಭಿವೃದ್ಧಿಗೆ ತಾಂತ್ರಿಕ ಪರಿಣತಿಯ ಮೂಲಕ ಬೆಂಬಲ ನೀಡಬಹುದು ಎಂದು ಪೆಟ್ರೋ ಕೆಮಿಕಲ್ಸ್ ಜಂಟಿ ಕಾರ್ಯದರ್ಶಿ ಕಾಶಿನಾಥ್ ಝಾ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.