ETV Bharat / business

ಇಂದಿನಿಂದ ಕೇಂದ್ರ ಬಜೆಟ್​ ಅಧಿವೇಶನ.. ಸಂಸತ್​ನಲ್ಲಿ ಪೆಗಾಸಸ್​ ರಿಂಗಣ ಸಾಧ್ಯತೆ!

ರಾಷ್ಟ್ರಪತಿ ರಾಮನಾಥ ಕೋವಿಂದ್​​ ಇಂದು ಬೆಳಗ್ಗೆ ಸಂಸತ್​​ನ ಬಜೆಟ್​ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಅಧಿವೇಶನವು 2 ಭಾಗಗಳಲ್ಲಿ ನಡೆಯಲಿದೆ.

Central Budget 2022 session to start from today
ಕೇಂದ್ರ ಜಜೆಟ್​ ಅಧಿವೇಶನ
author img

By

Published : Jan 31, 2022, 8:11 AM IST

ನವದೆಹಲಿ: ದೇಶದಲ್ಲಿ ಸದ್ಯ ಕೋವಿಡ್​ 3ನೇ ಅಲೆಯ ನಡುವೆಯೇ ಇಂದಿನಿಂದ 2022-23ನೇ ಸಾಲಿನ ಕೇಂದ್ರ ಬಜೆಟ್ ಅಧಿವೇಶನ ಆರಂಭವಾಗಲಿದೆ. ನಾಳೆ ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಆಯವ್ಯಯ ಮಂಡನೆ ಮಾಡಲಿದ್ದಾರೆ.

ರಾಷ್ಟ್ರಪತಿ ರಾಮನಾಥ ಕೋವಿಂದ್​​ ಇಂದು ಬೆಳಗ್ಗೆ ಸಂಸತ್​​ನ ಬಜೆಟ್​ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ. ಅಧಿವೇಶನವು 2 ಭಾಗಗಳಲ್ಲಿ ನಡೆಯಲಿದ್ದು, ಮೊದಲ ಭಾಗ ಫೆಬ್ರವರಿ 11ರಂದು ಮುಕ್ತಾಯವಾಗಲಿದ್ದು, 2ನೇ ಭಾಗವು ಮಾರ್ಚ್​​ 14ರಿಂದ ಏಪ್ರಿಲ್​ 8ರವರೆಗೆ ನಡೆಯಲಿದೆ.

ಅಪಾರ ನಿರೀಕ್ಷೆ: ಸಾಂಕ್ರಾಮಿಕದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿ ಜರ್ಜರಿತರಾಗಿರುವ ಸಾಮಾನ್ಯ ಜನರು ಬಜೆಟ್​ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ತರಕಾರಿಗಳು, ಹಣ್ಣುಗಳು, ಧಾನ್ಯಗಳು, ಕಾಳುಗಳು, ಮಸಾಲೆ ಪದಾರ್ಥಗಳು, ಖಾದ್ಯ ತೈಲ ಸೇರಿದಂತೆ ಆಹಾರ ಪದಾರ್ಥಗಳು, ಪ್ರಯಾಣ ದರ, ಬಟ್ಟೆ, ಶಿಕ್ಷಣ, ವಸತಿ ವೆಚ್ಚ ಕಡಿಮೆಯಾಗಬಹುದು ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ತೆರಿಗೆಗಳು ಮತ್ತು ಇಂಧನ ದರಗಳಲ್ಲಿ ಕಡಿತವಾಗಬಹುದು, ಪಿಂಚಣಿ ಹೆಚ್ಚಾಗಬಹುದು, ಉದ್ಯೋಗಕ್ಕೆ ಉತ್ತೇಜನ ನೀಡಬಹುದು ಎಂದು ಜನರು ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಬಹು ಮುಖ್ಯವಾಗಿ ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚಿನ ಸೌಲಭ್ಯಗಳನ್ನು ಜನರು ಬಯಸಿದ್ದಾರೆ. ವೈದ್ಯಕೀಯ ವೆಚ್ಚ ಹಾಗೂ ಔಷಧ ಬೆಲೆಗಳಲ್ಲಿ ಇಳಿಕೆಯಾಗಿರಬಹುದು ಎಂದು ಭಾವಿಸಿದ್ದಾರೆ. ಕೋವಿಡ್​ ಎರಡನೇ ಅಲೆಯಲ್ಲಿ ಎಷ್ಟೋ ಜನರು ಆಸ್ಪತ್ರೆಯ ಬೆಡ್​ ಚಾರ್ಜ್​ ಹಾಗೂ ಚಿಕಿತ್ಸಾ ವೆಚ್ಚ ಭರಿಸಲಾಗದೆ ಕ್ರೌಡ್​ ಫಂಡಿಂಗ್​ ಮೊರೆ ಹೋದ ಉದಾಹರಣೆಗಳೂ ನಮ್ಮ ಮುಂದಿದೆ.

ಸಾಮಾನ್ಯ ಜೀವನಕ್ಕೆ ಅಗತ್ಯವಿರುವ ಮೂಲಭೂತ ವಸ್ತುಗಳ ಬೆಲೆಗಳು ನಿರಂತರವಾಗಿ ಹೆಚ್ಚುತ್ತಿರುವುದು ಇಂದಿನ ಅಧಿವೇಶನದ ಚರ್ಚೆಯ ಪ್ರಮುಖ ವಿಷಯವಾಗಿರಲಿದೆ. ಕುಸಿದಿರುವ ಆರ್ಥಿಕತೆಗೆ ಚೇತರಿಕೆ ಸಿಗಬಹುದೇ ಎಂಬುದು ಎಲ್ಲರಲ್ಲಿ ಮೂಡಿರುವ ಪ್ರಶ್ನೆಯಾಗಿದೆ.

ಈ ಬಾರಿಯ ಬಜೆಟ್​ ಸಂಬಂಧಿತ ಕೆಲ ಅಂಶಗಳು ಹೀಗಿವೆ:

  1. ಕಳೆದ ವರ್ಷದಂತೆ ಈ ಸಲದ ಬಜೆಟ್​ ಕೂಡ ಕಾಗದ ರಹಿತವಾಗಿ ಮಂಡನೆಯಾಗಲಿದೆ. ಆದರೆ, ಡಿಜಿಟಲ್​ ರೂಪಕ್ಕೆ ಮತ್ತಷ್ಟು ಪುಷ್ಠಿ ನೀಡುವ ನಿಟ್ಟಿನಲ್ಲಿ ಮೊಬೈಲ್​ ಅಪ್ಲಿಕೇಶನ್​​​ ತಯಾರಿಸಲಾಗಿದೆ. 'ಯೂನಿಯನ್​ ಬಜೆಟ್​' ಹೆಸರಿನಲ್ಲಿ ಮೊಬೈಲ್​ ಅಪ್ಲಿಕೇಶನ್​ ಲಭ್ಯವಿದ್ದು, ರಾಷ್ಟ್ರೀಯ ಮಾಹಿತಿ, ಎಲೆಕ್ಟ್ರಾನಿಕ್ಸ್​ ಮತ್ತು ಐಟಿ ಸಚಿವಾಲಯ ಇದನ್ನ ಅಭಿವೃದ್ಧಿಪಡಿಸಿದೆ. ಸಂಸತ್​​ನಲ್ಲಿ ಬಜೆಟ್ ಮಂಡನೆಯಾದ ಬಳಿಕ ಇದು ಲಭ್ಯವಾಗಲಿದೆ.
  2. ಎರಡೂ ಸದನಗಳು ಪ್ರತಿ ಸೆಷನ್‌ಗೆ ಒಂದು ಗಂಟೆಯಂತೆ 27 ಅಧಿವೇಶನಗಳಲ್ಲಿ ಸದಸ್ಯರು ಕುಳಿತುಕೊಳ್ಳಲಿದ್ದಾರೆ.
  3. ಅಧಿವೇಶನದ ಮೊದಲ ದಿನವಾದ ಇಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಉಭಯ ಸದನ ಉದ್ದೇಶಿಸಿ ಮಾತನಾಡಲಿದ್ದಾರೆ.
  4. ನಾಳೆ 2022-23ರ ಕೇಂದ್ರ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಮಂಡಿಸಲಿದ್ದಾರೆ.
  5. ಬಜೆಟ್ ಅಧಿವೇಶನದ ಮೊದಲ ಭಾಗವು, ಅಂದರೆ 10 ಕಲಾಪಗಳು ಇಂದಿನಿಂದ ಫೆಬ್ರವರಿ 11ರವರೆಗೆ ನಡೆಯಲಿವೆ. ಮಾರ್ಚ್ 14 ಮತ್ತು ಏಪ್ರಿಲ್ 8ರ ನಡುವೆ ಎರಡನೇ ಭಾಗ (ಉಳಿದ 19 ಅಧಿವೇಶನಗಳು) ನಿಗದಿಪಡಿಸಲಾಗಿದೆ.
  6. ರಾಜ್ಯಸಭೆಯು ಶೂನ್ಯ ಅವಧಿಯನ್ನು ದಿನಕ್ಕೆ 30 ನಿಮಿಷಕ್ಕೆ ಕಡಿಮೆ ಮಾಡಿದ್ದು, ಒಟ್ಟು 13 ಗಂಟೆ 30 ನಿಮಿಷವನ್ನು ಇಡೀ ಅಧಿವೇಶನಕ್ಕೆ ಮೀಸಲಿಡಲಾಗಿದೆ.
  7. ಈ ಬಜೆಟ್ ಅಧಿವೇಶನವು ಜನವರಿ 2020ರಲ್ಲಿ ಕೋವಿಡ್​-19 ಸಾಂಕ್ರಾಮಿಕ ಹರಡಿದ ನಂತರ ನಡೆಯಲಿರುವ 6ನೇ ಅಧಿವೇಶನವಾಗಿದೆ.
  8. ಈ ಬಾರಿಯ ಬಜೆಟ್ ಅಧಿವೇಶನದ ಕಾರ್ಯಸೂಚಿಯನ್ನು ಚರ್ಚಿಸಲು ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಇಂದು ಸಂಜೆ 5 ಗಂಟೆಗೆ ಸರ್ವಪಕ್ಷ ಮತ್ತು ಹಲವು ನಾಯಕರ ವರ್ಚುವಲ್ ಸಭೆಯನ್ನು ಕರೆದಿದ್ದಾರೆ.

ಈ ನಡುವೆ ಪೆಗಾಗಸಸ್​​ ಹಗರಣ ಮತ್ತೆ ಸದ್ದು ಮಾಡುತ್ತಿದೆ. ಅಮೆರಿಕದ ಪ್ರಮುಖ ಪತ್ರಿಕೆಯೊಂದರಲ್ಲಿ ಬಂದ ವರದಿ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. ಇಸ್ರೇಲ್​ ಜೊತೆಗಿನ ರಕ್ಷಣಾ ಒಪ್ಪಂದದ ಜೊತೆಗೆ ಪೆಗಾಸಸ್​​​​​​​( ಬೇಹುಗಾರಿಕಾ) ಆ್ಯಪ್​​ ಖರೀದಿ ಒಪ್ಪಂದವೂ ನಡೆದಿತ್ತು ಎಂಬ ವರದಿ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಕೇಂದ್ರದ ವಿರುದ್ಧ ಮುಗಿ ಬಿದ್ದಿದೆ.

ಬಜೆಟ್​ ಅಧಿವೇಶದನಲ್ಲಿ ಈ ವಿಷಯ ಪ್ರಸ್ತಾಪ ಮಾಡಲು ಕಾಂಗ್ರೆಸ್ ಮುಂದಾಗಿದ್ದು, ಪೆಗಾಸಸ್​ ಸಂಬಂಧ ಕೇಂದ್ರ ಮಾಹಿತಿ ಖಾತೆ ಸಚಿವರು ಸಂಸತ್​ಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಕಾರಣಕ್ಕಾಗಿ ಅವರ ವಿರುದ್ಧ ಹಕ್ಕು ಚ್ಯುತಿ ಮಂಡಿಸಲು ನಿರ್ಧರಿಸಿದೆ.

ಈ ಸಂಬಂಧ ಮಾತನಾಡಿರುವ ಕಾಂಗ್ರೆಸ್​ ಸಂಸದೀಯ ಪಕ್ಷದ ನಾಯಕ ಅಧೀರ್​ ರಂಜನ್​ ಚೌಧರಿ ಸದನದಲ್ಲಿ ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡುವಂತೆ ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: ಪಂಜಾಬ್​ನಲ್ಲಿ ಕೈ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ: ಎರಡು ಕ್ಷೇತ್ರಗಳಿಂದ ಸಿಎಂ ಚನ್ನಿ ಸ್ಪರ್ಧೆ, ಕೇಜ್ರಿವಾಲ್ ವ್ಯಂಗ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.