ನವದೆಹಲಿ: ಸಾರ್ವಜನಿಕ ಖರ್ಚು ಮತ್ತು ಖಾಸಗಿ ಬಳಕೆಯ ಪ್ರಮಾಣ ಕ್ಷೀಣಿಸುತ್ತಿರುವ ಕಾರಣ, ಕೇಂದ್ರ ಸರ್ಕಾರವು ಮುಂಬರುವ ಬಜೆಟ್‌ನಲ್ಲಿ ಹೆಚ್ಚುವರಿ ಖರ್ಚು ಮಾಡಬೇಕಾಗಿದೆ ಎಂದು ಹಣಕಾಸು ತಜ್ಞರು ಸಲಹೆ ನೀಡಿದ್ದಾರೆ.
ಕೋವಿಡ್ -19 ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ಹಾನಿ ಮಾಡುತ್ತಿದ್ದಂತೆ ಸಾರ್ವಜನಿಕ ಆಡಳಿತ, ರಕ್ಷಣಾ ಮತ್ತು ಇತರ ಸೇವೆಗಳ' ಮೇಲಿನ ಸರ್ಕಾರದ ವೆಚ್ಚವು ಶೇ 12.2ರಷ್ಟು ಕುಗ್ಗಿತು. ಕಳೆದ ಜುಲೈ-ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಖಾಸಗಿ ಬಳಕೆಯ ವೆಚ್ಚವು ಶೇ 54.2ಕ್ಕೆ ಇಳಿದಿದೆ ಎಂದು 14ನೇ ಹಣಕಾಸು ಆಯೋಗದ ಸದಸ್ಯ ಎಂ ಗೋವಿಂದ ರಾವ್ ಹೇಳಿದರು.
ಆರೂವರೆ ಗಂಟೆಯಲ್ಲಿ ಭಾರತೀಯರ 7 ಲಕ್ಷ ಕೋಟಿ ರೂ. ಸಂಪತ್ತು ನುಂಗಿದ ಬ್ರಿಟನ್ ವೈರಸ್
ಮೇಲಿನ ಮಾಹಿತಿಯು ಆರ್ಥಿಕತೆಯಲ್ಲಿ ದುರ್ಬಲ ಬೇಡಿಕೆ ಸೂಚಿಸುತ್ತದೆ. ಸರ್ಕಾರವು ಆದಾಯ ಮತ್ತು ಬಂಡವಾಳ ವೆಚ್ಚಗಳನ್ನು ಹೆಚ್ಚಿಸುವ ಮೂಲಕ ತನ್ನ ಬೆಂಬಲವನ್ನು ವಿಸ್ತರಿಸಬೇಕು. ಹೆಚ್ಚಿನ ಹೂಡಿಕೆ ಆದಾಯವು ಹೂಡಿಕೆಯ ಪ್ರಕ್ರಿಯೆಯ ಮೂಲಕ ಹೆಚ್ಚಿದ ಸಾಲ ಮತ್ತು ಸ್ವತ್ತುಗಳ ಹಣಗಳಿಕೆಯಿಂದ ಬರಬಹುದು. ನಿರಂತರ ಆರ್ಥಿಕ ಚೇತರಿಕೆಯ ಹಾದಿಯನ್ನು ವಿಸ್ತರಿಸಲು ಹಣಕಾಸಿನ ಬಲವರ್ಧನೆಯನ್ನು 2022-23ರ ಹಣಕಾಸು ವರ್ಷಕ್ಕೆ ಮುಂದೂಡುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.
ಪ್ರಸಕ್ತ ವರ್ಷದ ಹಣಕಾಸಿನ ಕೊರತೆಯು ಜಿಡಿಪಿಯ ಶೇ 7ರಷ್ಟಿದೆ ಎಂದು ಬಜೆಟ್‌ನಲ್ಲಿ ಅಂದಾಜಿಸಲಾಗಿದೆ. ಮುಂದಿನ ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಕೋವಿಡ್ ಪೂರ್ವ ಮಟ್ಟದ ಉತ್ಪಾದನೆ ತಲುಪುವ ಸಾಧ್ಯತೆ ಇದೆ. ಹಣಕಾಸಿನ ಬಲವರ್ಧನೆಯ ಕಲ್ಪನೆಯನ್ನು ಸರ್ಕಾರವು ಇನ್ನೂ ಒಂದು ವರ್ಷದವರೆಗೆ ಮುಂದೂಡಬೇಕು ಎಂದರು.
14ನೇ ಹಣಕಾಸು ಆಯೋಗವು ಶಿಫಾರಸು ಮಾಡಿದಂತೆ, ಬಜೆಟ್ ಅನ್ನು ಪಾರದರ್ಶಕ ಮತ್ತು ಜವಾಬ್ದಾರಿಯುತವಾಗಿಸಲು ಹಣಕಾಸಿನ ಮಂಡಳಿಯನ್ನು ಸ್ಥಾಪಿಸಬೇಕು. ಆ ಮಂಡಳಿ ಸ್ವತಂತ್ರ ಸಂಸ್ಥೆ ಆಗಿರಬೇಕು. ಅದನ್ನು ನೇಮಕ ಮಾಡಿ ಸಂಸತ್ತಿಗೆ ಮಾತ್ರ ವರದಿ ಮಾಡಬೇಕು. ಕೌನ್ಸಿಲ್, ಕಾರ್ಯಕ್ರಮಗಳ ವೆಚ್ಚ ಮತ್ತು ಮುನ್ಸೂಚನೆಗಳ ಮೌಲ್ಯಮಾಪನ, ನೀತಿಗಳು ಮತ್ತು ಕಾರ್ಯಕ್ರಮಗಳ ಪಾರದರ್ಶಕ ವೆಚ್ಚ ಮತ್ತು ಪಕ್ಷಪಾತವಿಲ್ಲದ ವರದಿಗಳನ್ನು ಸಂಸತ್ತಿಗೆ ಸಲ್ಲಿಸುವಂತಹ ಕೆಲಸ ಮಾಡಬೇಕು ಎಂದು ಗೋವಿಂದ್ ರಾಜು ಸೂಚಿಸಿದರು.