ETV Bharat / business

ಶಾಕ್​ ನಂ-3: ಸೆಪ್ಟೆಂಬರ್​​ ತನಕ ನಿತ್ಯ ಬಳಕೆಯ ವಸ್ತುಗಳ ಬೆಲೆ ಏರಿಕೆ... ಜನಸಾಮಾನ್ಯರಿಗೆ ತಪ್ಪದ ಕಣ್ಣೀರು - ಆರ್​ಬಿಐ ಅಂದಾಜಿತ ಹಣದುಬ್ಬರ ಅವಧಿ

ವಿತ್ತೀಯ ನೀತಿ ಸಮಿತಿ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಗ್ರಾಹಕರ ಹಣದುಬ್ಬರವು ಉತ್ತುಂಗಕ್ಕೇರಿರುವ ಸಾಧ್ಯತೆಯಿದೆ. ಚಳಿಗಾಲ ಇರುವುದರಿಂದ ಹಾಳಾಗುವ ವಸ್ತುಗಳ ಕಡಿಮೆ ಬೆಲೆಯ ಕಾರಣದಿಂದಾಗಿ ಅಸ್ಥಿರತೆಗೆ ತಡೆಯಾಗಿದೆ ಎಂದರು.

Rupee
ರೂಪಾಯಿ
author img

By

Published : Dec 4, 2020, 9:37 PM IST

ಹೈದರಾಬಾದ್: ಕಳೆದ 20 ದಿನಗಳಿಂದ ಇಂಧನದ ಚಿಲ್ಲರ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದೆ. ಎರಡು ದಿನಗಳ ಹಿಂದೆಯಷ್ಟೇ ಸಬ್ಸಿಡಿ ರಹಿತ ಸಿಲಿಂಡರ್ ದರದ ಮೇಲೆ 50 ರೂ. ಹೆಚ್ಚಳ ಮಾಡಲಾಗಿದೆ. ಇದರ ಮಧ್ಯೆ ಚಿಲ್ಲರ ಹಣದುಬ್ಬರ ಬೆಲೆ ಏರಿಕೆಯು ಮುಂದುವರಿಯಲಿದೆ ಎಂದು ಕೇಂದ್ರೀಯ ಬ್ಯಾಂಕ್ ಒಪ್ಪಿಕೊಂಡಿದೆ.

ಚಿಲ್ಲರೆ ಬೆಲೆ ಏರಿಕೆಯು ಮುಂದಿನ ಸೆಪ್ಟೆಂಬರ್ ತನಕ ಮುಂದುವರಿಯಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಹೇಳಿದೆ.

ವಿತ್ತೀಯ ನೀತಿ ಸಮಿತಿ ಸಭೆಯ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿದ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್, ಗ್ರಾಹಕರ ಹಣದುಬ್ಬರವು ಉತ್ತುಂಗಕ್ಕೇರಿರುವ ಸಾಧ್ಯತೆಯಿದೆ. ಚಳಿಗಾಲ ಇರುವುದರಿಂದ ಹಾಳಾಗುವ ವಸ್ತುಗಳ ಕಡಿಮೆ ಬೆಲೆಯ ಕಾರಣದಿಂದಾಗಿ ಅಸ್ಥಿರತೆಗೆ ತಡೆಯಾಗಿದೆ ಎಂದರು.

ರೈತರ ಆದಾಯ ದ್ವಿಗುಣಗೊಳಿಸಲು ಮೋದಿಯಿಂದ ಸಾಧ್ಯವಿಲ್ಲ: ಅಭಿಜಿತ್​ ಸೇನ್​​​​​​ ವಿಶ್ಲೇಷಣೆ!

2020-21ರ 3ನೇ ತ್ರೈಮಾಸಿಕದಲ್ಲಿ ಸಿಪಿಐ ಹಣದುಬ್ಬರವು ಶೇ 6.8ರಷ್ಟು, 4ನೇ ತ್ರೈಮಾಸಿಕದಲ್ಲಿ ಶೇ 5.8ರಷ್ಟು ಇರಲಿದೆ ಎಂಬ ನಿರೀಕ್ಷೆ ಇದೆ. 2021-22ರ ಅರ್ಧ ವಾರ್ಷಿಕದಲ್ಲಿ ಶೇ 5.2ರಿಂದ 4.6ರಷ್ಟಿದೆ ಎಂದು ಇತ್ತೀಚಿನ ಹಣಕಾಸು ನೀತಿ ತಿಳಿಸಿದೆ.

ದ್ವಿದಳ ಧಾನ್ಯ, ಖಾದ್ಯ ತೈಲ, ತರಕಾರಿ ಮತ್ತು ಮೊಟ್ಟೆಗಳ ಬೆಲೆ ಏರಿಕೆಯಿಂದಾಗಿ ಗ್ರಾಹಕ ದರ ಏರಿಕೆ ಮಾಪನದ ಗ್ರಾಹಕ ಬೆಲೆ ಸೂಚ್ಯಂಕ (ಸಿಪಿಐ) ಆರನೇ ಮತ್ತು ಅರ್ಧ ವಾರ್ಷಿಕದಲ್ಲಿ ಗರಿಷ್ಠ ಶೇ 7.61ಕ್ಕೆ ತಲುಪಿದೆ. ಸಿಪಿಐ ಕಳೆದ ಏಪ್ರಿಲ್‌ನಿಂದ ಆರ್‌ಬಿಐನ ಮಿತಿಯಾದ ಶೇ 6ಕ್ಕಿಂತ ಹೆಚ್ಚಿದೆ.

ಪ್ರಸ್ತುತ ಹಣದುಬ್ಬರ ಗುರಿಯಾಗಿಸಿಕೊಂಡು ಚಿಲ್ಲರೆ ಹಣದುಬ್ಬರವನ್ನು ಶೇ 4ರಷ್ಟು ಪ್ಲಸ್ ಅಥವಾ ಮೈನಸ್ 2ರಲ್ಲಿ ಇರಿಸಲು ಕೇಂದ್ರೀಯ ಬ್ಯಾಂಕ್ ಸೂಚಿಸಿದೆ.

ಹಣದುಬ್ಬರ ಹೆಚ್ಚಳಕ್ಕೆ ಕಾರಣ ಏನು?

ಆರ್‌ಬಿಐ ಪ್ರಕಾರ, ಪ್ರಸ್ತುತ ಹಣದುಬ್ಬರವು ಪೂರೈಕೆ ಸರಪಳಿ ಅಡೆತಡೆಗಳಿಂದ ಉತ್ತೇಜಿತಗೊಂಡಿದೆ. ಕೋವಿಡ್ ಪೂರ್ವದಲ್ಲಿ ಆರ್ಥಿಕತೆ ಕಾರ್ಯನಿರ್ವಹಿಸಲು ಅನುಮತಿಸಿದ್ದರೂ ಕಾರ್ಮಿಕ ಕೊರತೆ ಮತ್ತು ರಾಜಸ್ಥಾನ, ದೆಹಲಿ, ಮಧ್ಯಪ್ರದೇಶ ಇತ್ಯಾದಿಗಳಲ್ಲಿ ಸೋಂಕಿನ ಎರಡನೇ ಅಲೆ ನಿರೀಕ್ಷಿತ ಚೇತರಿಕೆಗೆ ಕಾರ್ಮೋಡಗಳಾಗಿವೆ.

ಸಗಟು ಮತ್ತು ಚಿಲ್ಲರೆ ಹಣದುಬ್ಬರದ ನಡುವಿನ ಗಣನೀಯ ಏರಿಕೆಯು ಪೂರೈಕೆ ವಿಭಾಗದ ಅಡಚಣೆ ಮತ್ತು ಅಂಚಿನ ಗ್ರಾಹಕರಿಗೆ ಹೊರೆಯಾಗುತ್ತಿವೆ ಎಂದು ಹಣದುಬ್ಬರ ದೃಷ್ಟಿಕೋನದ ಕುರಿತು ಆರ್‌ಬಿಐ ಅಂದಾಜಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.