ನವದೆಹಲಿ : ಅಪರಾಧವನ್ನು ನಿರ್ಣಯಿಸುವ ಬದಲು ಕೇಂದ್ರ ಸರ್ಕಾರ ವರ್ಗಾವಣೆಯ ಲಿಖಿತಗಳ ಅಧಿನಿಯಮದ (ನೆಗೋಶಿಯೇಬಲ್ ಇನ್ಸುಟ್ರುಮೆಂಟ್ ಮಸೂದೆ) ಅಡಿ ಚೆಕ್ಬೌನ್ಸ್ಗೆ ಸಂಬಂಧಿಸಿದ ಅಪರಾಧಗಳನ್ನು ಮೇಲ್ದರ್ಜೆಗೇರಿಸುವಂತೆ ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ (ಎಐಬಿಇಎ) ಸೂಚಿಸಿದೆ.
ವರ್ಗಾವಣೆಯ ಲಿಖಿತಗಳ ಅಧಿನಿಯಮ (ನೆಗೋಶಿಯೇಬಲ್ ಇನ್ಸುಟ್ರುಮೆಂಟ್ ಮಸೂದೆ)1881(ತಿದ್ದುಪಡಿ) ಪ್ರಕಾರ, ಚೆಕ್ ನೀಡಿದ ವ್ಯಕ್ತಿಯ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದಿದ್ರೆ, ಚೆಕ್‌ಬೌನ್ಸ್ ಆದ್ರೆ ಅದು ಕಾನೂನು ರೀತ್ಯಾ ಅಪರಾಧವಾಗುತ್ತದೆ. ಅನೇಕ ಅಪರಾಧಿಗಳು ಸುರಕ್ಷಿತವಾಗಿ ತಪ್ಪಿಸಿಕೊಂಡು ಸಾರ್ವಜನಿಕರಿಗೆ, ಕಂಪನಿಗಳಿಗೆ, ಬ್ಯಾಂಕ್ಗಳಿಗೆ ಮೋಸ ಮಾಡುತ್ತಿದ್ದಾರೆ. ಆದ್ದರಿಂದ ಸೆಕ್ಷನ್ 138 ಮತ್ತು ಸೆಕ್ಷನ್ 143 (1)ಗಳನ್ನು ಕ್ರಿಮಿನಲ್ ಕಾನೂನಿನಡಿ ಜವಾಬ್ದಾರಿಯುತ ಶಿಕ್ಷಾರ್ಹರನ್ನಾಗಿ ಮಾಡಬೇಕಿದೆ ಎಂದು ಎಐಬಿಇಎನ ಪ್ರಧಾನ ಕಾರ್ಯದರ್ಶಿ ಸಿ ಹೆಚ್ ವೆಂಕಟಾಚಲಂ ಅವರ ಸಹಿ ಒಳಗೊಂಡ ಪತ್ರದ ಮುಖೇನ ಒಕ್ಕೂಟ ಸರ್ಕಾರಕ್ಕೆ ತಿಳಿಸಿದೆ.
ಈ ವಿಭಾಗಗಳನ್ನು ದುರ್ಬಲಗೊಳಿಸುವುದರಿಂದ ಅಪರಾಧ ಮತ್ತು ಪ್ರೇರಿತ ಉದ್ದೇಶಗಳೊಂದಿಗೆ ಅಂತಹ ಕೃತ್ಯ ಹೆಚ್ಚಿಸಲು ಅನುಕೂಲವಾಗುತ್ತದೆ. ವ್ಯಕ್ತಿ ಮತ್ತು ಕಂಪನಿಗಳಿಗೆ ಅದು ಕ್ರಿಮಿನಲ್ ಮೊಕದ್ದಮೆ ಆಕರ್ಷಿಸುವ ಮಿತಿ ನಿಗದಿಪಡಿಸಿದಂತಾಗುತ್ತದೆ. ವ್ಯಕ್ತಿಗಳಿಗೆ ಹಿಂದಿರುಗಿದ ಚೆಕ್ ಮೊತ್ತ 1 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತ ನಿಗದಿಪಡಿಸಲಾಗುತ್ತದೆ. ಕಂಪನಿಗಳ ಹಿಂದಿರುಗಿದ ಚೆಕ್ ಮೊತ್ತ 10 ಲಕ್ಷ ರೂ.ಗಿಂತ ಹೆಚ್ಚಿಗೆ ಇದ್ದರೇ ಅದನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್ ಅಡಿ ವಿಚಾರಣೆಗೊಳಪಡಿಸಲಾಗುತ್ತದೆ. 1881ರ ನೆಗೋಶಿಯೇಬಲ್ ಇನ್ಸುಟ್ರುಮೆಂಟ್ ಆ್ಯಕ್ಟ್ನ ಸೆಕ್ಷನ್ 138 ಮತ್ತು ಸೆಕ್ಷನ್ 143 (1) ಮೇಲ್ದರ್ಜೆಗೆ ಮಾರ್ಪಡಿಸಬೇಕಿದೆ ಎಂದು ಎಐಬಿಇಎ ತಿಳಿಸಿದೆ.
ಹಣಕಾಸು ಸೇವೆಗಳ ಇಲಾಖೆ (ಡಿಎಫ್‌ಎಸ್), ಹಣಕಾಸು ಸಚಿವಾಲಯ ಪಟ್ಟಿಮಾಡಿದ ವಿವಿಧ ಕಾನೂನುಗಳ ದಂಡದ ನಿಬಂಧನೆ ಬಗ್ಗೆ ಸ್ಟೇಕ್ ಹೋಲ್ಡರ್ಸ್ಗಳ ಅಭಿಪ್ರಾಯ ಕೇಳುವಾಗ, ಸಣ್ಣ ಅಪರಾಧಗಳನ್ನು ನ್ಯಾಯಸಮ್ಮತಗೊಳಿಸುವುದು ಸರ್ಕಾರದ ಒತ್ತಡದ ವ್ಯಾಪ್ತಿಗಳಲ್ಲಿ ಒಂದಾಗಿದೆ ಎಂದು ಸ್ಪಷ್ಟನೆ ನೀಡಿದೆ. ಜೈಲು ಶಿಕ್ಷೆಯ ವಿಧಿಸುವ ಮೋಸವಲ್ಲದ ಕ್ರಮಗಳಿಂದ ಹೂಡಿಕೆಗಳನ್ನು ಆಕರ್ಷಿಸುವಲ್ಲಿ ದೊಡ್ಡ ಅಡಚಣೆಯಾಗಿದೆ ಎಂದು ಡಿಎಫ್ಎಸ್ ಹೇಳಿದೆ.
ವಿಮಾ ಕಾಯ್ದೆ, ಸರ್ಫೇಸಿ ಕಾಯ್ದೆ, ಪಿಎಫ್‌ಆರ್‌ಡಿಎ ಕಾಯ್ದೆ, ಆರ್‌ಬಿಐ ಕಾಯ್ದೆ, ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯ್ದೆ, ನಬಾರ್ಡ್ ಕಾಯ್ದೆ, ಎನ್‌ಹೆಚ್‌ಬಿ ಕಾಯ್ದೆ, ರಾಜ್ಯ ಹಣಕಾಸು ನಿಗಮ ಕಾಯ್ದೆ, ಸಾಲ ಮಾಹಿತಿ ಕಂಪನಿಗಳ (ನಿಯಂತ್ರಣ) ಕಾಯ್ದೆ, ಅಪವರ್ತನ (ಫ್ಯಾಕ್ಟೊರಿಂಗ್) ನಿಯಂತ್ರಣ ಕಾಯ್ದೆ, ಆ್ಯಕ್ಟುರಿಯಸ್ ಕಾಯ್ದೆ, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ, ಸಾಮಾನ್ಯ ವಿಮಾ ವ್ಯವಹಾರ (ರಾಷ್ಟ್ರೀಕರಣ) ಕಾಯ್ದೆ, ಎಲ್‌ಐಸಿ ಕಾಯ್ದೆ, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ, ಚಿಟ್ ಫಂಡ್ಸ್ ಕಾಯ್ದೆ, ಡಿಐಜಿಸಿಸಿ ಕಾಯ್ದೆ, ನೆಗೋಶಿಯೇಬಲ್ ಇನ್ಸುಟ್ರುಮೆಂಟ್, ಬಹುಮಾನ (ಪ್ರೈಜ್) ಚಿಟ್ ಮತ್ತು ಹಣ ಚಲಾವಣೆ ಯೋಜನೆಗಳ (ನಿಷೇಧ) ಕಾಯ್ದೆಗಳು ಡಿಎಫ್‌ಎಸ್ ದಂಡದ ನಿಬಂಧನೆಗಳನ್ನು ತಿದ್ದುಪಡಿಗಾಗಿ ಪಟ್ಟಿ ಮಾಡಿದೆ.
ಬ್ಯಾಂಕ್ಗಳು ಜನರ ಕಷ್ಟಪಟ್ಟು ಸಂಪಾದಿಸಿದ ಉಳಿತಾಯದೊಂದಿಗೆ ವ್ಯವಹರಿಸುತ್ತಿವೆ. ಒಟ್ಟು 137 ಲಕ್ಷ ಕೋಟಿ ರೂ. ಒಟ್ಟು ಠೇವಣಿಗಳನ್ನು ಒಟ್ಟುಗೂಡಿಸಿದೆ. ಈ ಜನರ ಹಣದಿಂದ ಮಾತ್ರ ಬ್ಯಾಂಕ್ಗಳು ಸಾಲವನ್ನು ವಿಸ್ತರಿಸುತ್ತವೆ ಎಂದು ಎಐಬಿಇಎ ಹೇಳಿದೆ. ಕೆಟ್ಟ ಸಾಲ/ಕಾರ್ಯನಿರ್ವಹಿಸದ ಸಾಲ/ಉದ್ದೇಶಪೂರ್ವಕ ಬ್ಯಾಂಕ್ಗಳ ಸಾಲ ವಂಚನೆಯನ್ನು ಕಟ್ಟುನಿಟ್ಟಾಗಿ ನಿಯಂತ್ರಿಸದಿದ್ರೇ ಬ್ಯಾಂಕುಗಳಲ್ಲಿನ ಕೆಟ್ಟ ಸಾಲದ ಪ್ರಮಾಣ ಮತ್ತಷ್ಟು ದ್ವಿಗುಣಗೊಳ್ಳುತ್ತದೆ. ಸಾರ್ವಜನಿಕ ಉಳಿತಾಯದ ಮುಕ್ತ ಲೂಟಿ ಕೂಡ ಮುಂದುವರಿಯುತ್ತದೆ ಎಂದು ಯೂನಿಯನ್ ಎಚ್ಚರಿಸಿದೆ.
ಆದ್ದರಿಂದ ಉದ್ದೇಶಪೂರ್ವಕ ಡೀಫಾಲ್ಟರ್‌ಗಳನ್ನು (ವಂಚನೆ) ಕ್ರಿಮಿನಲ್ ಅಪರಾಧಿಗಳ ವ್ಯಾಪ್ತಿಗೆ ತರಲು ಕಾನೂನು ಮತ್ತು ನಿಯಮಗಳಿಗೆ ತಿದ್ದುಪಡಿ ತರಬೇಕು. ಬ್ಯಾಂಕ್ ಸಾಲವನ್ನು ಉದ್ದೇಶಪೂರ್ವಕವಾಗಿ ವಂಚನೆ ಮಾಡುವುದನ್ನು ಕ್ರಿಮಿನಲ್ ಅಪರಾಧ ಎಂದು ಕರೆಯುವಂತೆ ಪುನರುಚ್ಚರಿಸುತ್ತೇವೆ ಎಂದು ಎಐಬಿಇಎ ಸಲ್ಲಿಸಿದೆ.
ವಿವಿಧ ನಿಬಂಧನೆಗಳನ್ನು ತಿದ್ದುಪಡಿ ಮಾಡುವ ಕೇಂದ್ರ ಸರ್ಕಾರದ ಕ್ರಮವನ್ನು ಎಐಬಿಇಎ ವಿರೋಧಿಸಿದೆ. ಅವುಗಳು ಸಂಸತ್ತಿನಿಂದ ಜಾರಿಗೆ ಬಂದವು. ಪ್ರಶಸ್ತಿ ಚಿಟ್ ಮತ್ತು ಹಣ ಚಲಾವಣೆ ಯೋಜನೆಗಳ (ನಿಷೇಧ) ಕಾಯ್ದೆ 1978, ಚಿಟ್ ಫಂಡ್ಸ್ ಆ್ಯಕ್ಟ್ 1982 ಹಾಗೂ ಅನಿಯಂತ್ರಿತ ಠೇವಣಿ ಯೋಜನೆಗಳ ಕಾಯ್ದೆ 2019 ತಿದ್ದುಪಡಿ ಮಾಡುವುದರಿಂದ ಹಣದ ದುರುಪಯೋಗಕ್ಕೆ ಕಾರಣವಾಗುತ್ತದೆ ಎಂದು ಎಐಬಿಇಎ ತಿಳಿಸಿದೆ.
ಏನಿದು ನೆಗೋಶಿಯೇಬಲ್ ಇನ್ಸುಟ್ರುಮೆಂಟ್ ಮಸೂದೆ ?: ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ವರ್ಗಾವಣೆಯ ಲಿಖಿತಗಳ ಅಧಿನಿಯಮ (ನೆಗೋಶಿಯೇಬಲ್ ಇನ್ಸುಟ್ರುಮೆಂಟ್ ಮಸೂದೆ) (ತಿದ್ದುಪಡಿ)2015ಕ್ಕೆ ಅಧಿಸೂಚನೆ ಹೊರಡಿಸಿತ್ತು. ವರ್ಗಾವಣೆಯ ಲಿಖಿತಗಳ ಅಧಿನಿಯಮ (ತಿದ್ದುಪಡಿ) ಮಸೂದೆ, 2015 ಸಂಸತ್ತಿನ 2016ರ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಅನುಮೋದಿಸಲಾಗಿತ್ತು. ಈ ಮಸೂದೆಯನ್ನು ಜೂನ್ 15, 2015ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ತರಲಾಯಿತು. 'ಉದ್ದೇಶಿತ ತಿದ್ದುಪಡಿ ಕಾಯ್ದೆಯಿಂದ ಚೆಕ್‌ಬೌನ್ಸ್ ಪ್ರಕರಣಗಳನ್ನು ದಾಖಲಿಸಲು ಚೆಕ್‌ದಾರರಿಗೆ ಇರುವ ತೊಂದರೆ ನಿವಾರಿಸಿ ಪ್ರಯೋಜನ ಮಾಡಿಕೊಡಲಾಗಿದೆ. ದೂರುದಾರನು ತನ್ನ ಸ್ಥಳದಲ್ಲಿಯೇ ಕೇಸ್ ದಾಖಲಿಸಿ ನ್ಯಾಯ ಪಡೆಯಲು ಅನುಕೂಲ ಮಾಡಲಾಗಿದೆ' ಎಂದು ಕೇಂದ್ರ ಸ್ಪಷ್ಟನೆ ನೀಡಿತ್ತು.