ETV Bharat / business

2021ರ ಮಾರ್ಚ್​ ವೇಳೆಗೆ ಬ್ಯಾಂಕ್​ಗಳ ಕೆಟ್ಟ ಸಾಲ ಶೇ 11.6ಕ್ಕೆ ಏರಿಕೆ: ಐಸಿಆರ್‌ಎ - ಬ್ಯಾಂಕ್​ಗಳ ಎನ್​ಪಿಎ ಏರಿಕೆ

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಘೋಷಿಸಿದ ನಿಷೇಧದ ಅಡಿ ವಿವಿಧ ಬ್ಯಾಂಕ್​ಗಳಲ್ಲಿನ ಸುಮಾರು 30-40ರಷ್ಟು ಸಾಲದ ದಾಖಲೆಯು ಬ್ಯಾಂಕ್​ಗಳ ಆಸ್ತಿ ಗುಣಮಟ್ಟದ ಮೇಲಿನ ಅನಿಶ್ಚಿತತೆ ಹೆಚ್ಚಾಗಿದೆ. 2021ರ ಮಾರ್ಚ್​ ವೇಳೆಗೆ ಬ್ಯಾಂಕ್​ಗಳ ಒಟ್ಟು ಎನ್‌ಪಿಎ ಶೇ11.3ರಿಂದ11.6ಕ್ಕೆ ಏರಿಕೆ ಆಗಬಹುದು ಎಂದು ಐಸಿಆರ್​ಎ ಅಂದಾಜಿಸಿದೆ.

Non performing asset
ಎನ್​ಪಿಎ
author img

By

Published : Jun 4, 2020, 7:43 PM IST

ನವದೆಹಲಿ: 2021ರ ಮಾರ್ಚ್​ ವೇಳೆಗೆ ಬ್ಯಾಂಕ್​ಗಳ ಒಟ್ಟು ಎನ್‌ಪಿಎ (ಕೆಟ್ಟ ಸಾಲ/ ಅನುತ್ಪಾದಕ ಆಸ್ತಿ) ಶೇ11.3ರಿಂದ11.6ಕ್ಕೆ ಏರಿಕೆಯಾಗಲಿದೆ ಎಂದು ರೇಟಿಂಗ್ಸ್ ಏಜೆನ್ಸಿ ಐಸಿಆರ್​​ಎ ಅಂದಾಜಿಸಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್​ಬಿಐ) ಘೋಷಿಸಿದ ನಿಷೇಧದ ಅಡಿ ವಿವಿಧ ಬ್ಯಾಂಕ್​ಗಳಲ್ಲಿನ ಸುಮಾರು 30-40ರಷ್ಟು ಸಾಲದ ದಾಖಲೆಯು ಬ್ಯಾಂಕ್​ಗಳ ಆಸ್ತಿ ಗುಣಮಟ್ಟದ ಮೇಲಿನ ಅನಿಶ್ಚಿತತೆ ಹೆಚ್ಚಾಗಿದೆ ಎಂದು ಐಸಿಆರ್​ಎ ಪ್ರಕಟಣೆಯಲ್ಲಿ ತಿಳಿಸಿದೆ.

ರೇಟಿಂಗ್ ಏಜೆನ್ಸಿಯ ಪ್ರಕಾರ, ಲಾಕ್‌ಡೌನ್ ಜಾರಿಯು ಸಾಲಗಾರರ ಸಾಲ ಸೇವೆಯ ಸಾಮರ್ಥ್ಯದ ಮೇಲೆ ತೀವ್ರ ಪರಿಣಾಮ ಬೀರಿದೆ. ನಿರ್ಬಂಧಗಳು ಸಡಿಲಗೊಂಡು ಆರ್ಥಿಕ ಚಟುವಟಿಕೆಗಳ ಪುನರುಜ್ಜೀವನದ ವ್ಯಾಪ್ತಿಯು ಬ್ಯಾಂಕ್​ಗಳ ಆಸ್ತಿ ಗುಣಮಟ್ಟದ ಮೇಲೆ ಅಂತಿಮ ಪರಿಣಾಮ ಬೀರುತ್ತದೆ ಎಂದಿದೆ.

ಈ ಸಾಲಗಾರರ ಪೈಕಿ 10-20 ಪ್ರತಿಶತದಷ್ಟು ಜನ ಡೀಫಾಲ್ಟ್ ಆಗಿದ್ದರೂ ಬ್ಯಾಂಕ್​ಗಳ ಆಸ್ತಿ ಇಳಿಕೆಯ ಪ್ರಮಾಣವು 3-8 ಪ್ರತಿಶತದಷ್ಟು ಏರಬಹುದು ಎಂದು ಹೇಳಿದೆ.

ಸಾಲಗಾರರಿಗೆ ಆರ್‌ಬಿಐ ನಿಷೇಧವನ್ನು 2020ರ ಆಗಸ್ಟ್ 31ರ ತನಕ ಗಡುವು ನೀಡಿ ಇನ್ನೂ ಮೂರು ತಿಂಗಳು ವಿಸ್ತರಿಸಿದೆ. ಆಸ್ತಿ ಗುಣಮಟ್ಟದ ಒತ್ತಡವು 2021ರ ಹಣಕಾಸು ವರ್ಷದ 3ನೇ ಹಾಗೂ 4ನೇ ತ್ರೈಮಾಸಿಕಗಳ ಫಲಿತಾಂಶಗಳಲ್ಲಿ ಮಾತ್ರವೇ ಪ್ರತಿಫಲಿಸುತ್ತದೆ ಎಂದು ನಾವು ನಿರೀಕ್ಷಿಸುತ್ತೇವೆ ಎಂದು ಐಸಿಆರ್‌ಎ ವಲಯ ಮುಖ್ಯಸ್ಥ ಅನಿಲ್ ಗುಪ್ತಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.