ಮುಂಬೈ: ಬ್ಯಾಂಕ್ಗಳು ದ್ರವ್ಯತೆ ಮತ್ತು ಬಡ್ಡಿದರಗಳು ಗಮನಾರ್ಹವಾಗಿ ಕಡಿಮೆಗೊಳಿಸಿದ್ದರೂ ಪ್ರಸಕ್ತ ಹಣಕಾಸು ವರ್ಷದ (2020-21) ಮೊದಲಾರ್ಧದಲ್ಲಿ ಬ್ಯಾಂಕ್ಗಳಿಂದ ಸಾಲ ಪಡೆಯುವುದು ತೀರಾ ಕೆಳಮಟ್ಟ ಹಾಗೂ ದುರ್ಬಲವಾಗಿದೆ.
ಸಾಂಕ್ರಾಮಿಕ ರೋಗದ ಮಧ್ಯೆ ದುರ್ಬಲವಾದ ಬೇಡಿಕೆ ಮತ್ತು ನಿರಂತರ ಅನಿಶ್ಚಿತತೆಯಿಂದಾಗಿ ಕಡಿಮೆ ಕ್ರೆಡಿಟ್ ಪರಿಣಾಮಕ್ಕೆ ಕಾರಣವಾಗಿದೆ.
2020-21ರ ಎಚ್ 1 ಅವಧಿಯಲ್ಲಿ ಸಾಂಕ್ರಾಮಿಕ ರೋಗದಿಂದಾಗಿ ದುರ್ಬಲವಾದ ಬೇಡಿಕೆ ಮತ್ತು ಅನಿಶ್ಚಿತತೆಯನ್ನು ಪ್ರತಿಬಿಂಬಿಸುವ ಬ್ಯಾಂಕ್ ಕ್ರೆಡಿಟ್ ಪರಿಣಾಮ ದುರ್ಬಲವಾಗಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಬಿಡುಗಡೆ ಮಾಡಿದ 2020ರ ಅಕ್ಟೋಬರ್ ಮಾಸಿಕದ ಹಣಕಾಸು ನೀತಿ ವರದಿ ಎತ್ತಿ ತೋರಿಸಿದೆ.
ಆಹಾರೇತರ ಸಾಲದ ಬೆಳವಣಿಗೆ (ವರ್ಷದಿಂದ ವರ್ಷಕ್ಕೆ) 2020ರ ಸೆಪ್ಟೆಂಬರ್ 25ರ ವೇಳೆಗೆ ಶೇ 5.1ರಷ್ಟಿತ್ತು. ಇದು ವರ್ಷದ ಹಿಂದೆ ಶೇ 8.6ಕ್ಕಿಂತ ಕಡಿಮೆಯಾಗಿದೆ. ಇದು ದುರ್ಬಲ ವೇಗ ಮತ್ತು ಮೂಲ ಪರಿಣಾಮಗಳಿಂದ ಪ್ರೇರಿತವಾಗಿದೆ. ಸಾಲದ ಬೆಳವಣಿಗೆಯ ಕುಸಿತವು ಎಲ್ಲಾ ಬ್ಯಾಂಕ್ ಗುಂಪುಗಳಲ್ಲಿ, ಅದರಲ್ಲೂ ವಿಶೇಷವಾಗಿ ವಿದೇಶಿ ಬ್ಯಾಂಕ್ಗಳಲ್ಲಿ ಹಬ್ಬಿತ್ತು.
ಸಾರ್ವಜನಿಕ ವಲಯದ ಬ್ಯಾಂಕ್ಗಳ ಸಾಲದ ಬೆಳವಣಿಗೆ ಸಾಧಾರಣವಾಗಿಯೇ ಇತ್ತು, ಆದರೂ ಮಾರ್ಚ್ 2020ರಿಂದ ಕೆಲವಷ್ಟು ಮಾತ್ರವೇ ಏರಿಕೆಯಾಗಿದೆ.
ವರ್ಗೀಕೃತ ವಾಣಿಜ್ಯ ಬ್ಯಾಂಕ್ಗಳು (ಎಸ್‌ಸಿಬಿ) ವರ್ಷದಿಂದ ವರ್ಷಕ್ಕೆ (2019ರ ಸೆಪ್ಟೆಂಬರ್ 27ರಿಂದ 2020ರ ಸೆಪ್ಟೆಂಬರ್ 25ರವರೆಗೆ) ಸಾಲದ ಪ್ರಮಾಣದಲ್ಲಿ ಏರಿಕೆ ಆಗುತ್ತಿದೆ. ಸಾರ್ವಜನಿಕ ವಲಯದ ಬ್ಯಾಂಕ್ಗಳದ್ದು ಶೇ 62.3 ರಷ್ಟು ಮತ್ತು ಶೇ 41.2ರಷ್ಟು ಖಾಸಗಿ ವಲಯದ ಬ್ಯಾಂಕ್ಗಳು ಹಾಗೂ ವಿದೇಶಿ ಬ್ಯಾಂಕ್ಗಳ ಪಾಲು ನಕಾರಾತ್ಮಕವಾಗಿದೆ ಎಂದು ವರದಿ ತಿಳಿಸಿದೆ.
ಆಹಾರೇತರ ಸಾಲದ ಬೆಳವಣಿಗೆಯಲ್ಲಿನ ಕುಸಿತವು ವಿಶಾಲವಾಗಿದೆ. ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲಿ ಕ್ರೆಡಿಟ್ ಪಡೆಯುವುದು ನಿಧಾನವಾಗುತ್ತಿದೆ. ವೈಯಕ್ತಿಕ ಸಾಲ ಮತ್ತು ಕೃಷಿ ಸಾಲವು 2020ರ ಜುಲೈನಲ್ಲಿ ಸ್ವಲ್ಪ ಸುಧಾರಣೆ ದಾಖಲಿಸಿದ್ದರೂ, ಆಗಸ್ಟ್‌ನಲ್ಲಿ ಆ ವೇಗ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ.
ಆಹಾರೇತರ ಕ್ರೆಡಿಟ್ ಬ್ಯಾಂಕ್ಗಳ ಕೃಷಿ ಮುಂಗಡದ ಉತ್ತೇಜನವಾಗಿದೆ. ಆಹಾರ ಸಂಬಂಧಿತ ಸಾಲಕ್ಕಾಗಿ ಬ್ಯಾಂಕ್ ಹಣಕಾಸಿನ ನೇರವು ನೀಡಿದರೆ, ಅದನ್ನು ಕೃಷಿ ವಲಯದ ಅಡಿಯಲ್ಲಿ ಆಹಾರ ಸಾಲ ಎಂದು ಕರೆಯಲಾಗುತ್ತದೆ.