ETV Bharat / business

ರಕ್ಷಣೆ, ಬಾಹ್ಯಾಕಾಶ, ವಿಮಾನ ಕ್ಷೇತ್ರದಲ್ಲಿ ಹೂಡಿಕೆ ಮಾಡಿ: ಅಮೆರಿಕ ಕಂಪನಿಗಳಿಗೆ ಮೋದಿ ಆಹ್ವಾನ - ಭಾರತ ಪರಿಕಲ್ಪನಾ ಸಮಾವೇಶ

ಅಮೆರಿಕ- ಭಾರತ ಉದ್ಯಮ ಮಂಡಳಿ ಸ್ಥಾಪನೆಯ 45ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿರುವ 2 ದಿನಗಳ ಭಾರತ ಪರಿಕಲ್ಪನಾ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಪ್ರಧಾನಿ, ಇಂದು ಭಾರತದ ಬಗ್ಗೆ ಜಾಗತ್ತಿಗೆ ಆಶಾವಾದವಿದೆ. ಇದಕ್ಕೆ ಕಾರಣ ಭಾರತವು ಮುಕ್ತವಾದ ಅವಕಾಶಗಳು ಮತ್ತು ಆಯ್ಕೆಗಳ ಪರಿಪೂರ್ಣ ಸಂಯೋಜನೆ ನೀಡುತ್ತದೆ ಎಂದರು.

Pm Modi
ಮೋ
author img

By

Published : Jul 22, 2020, 10:12 PM IST

ನವದೆಹಲಿ: ಹೂಡಿಕೆದಾರರಿಗೆ ಅನುಕೂಲ ಆಗುವಂತಹ ವಿಧಾನ ಮತ್ತು ಮೂಲಸೌಕರ್ಯಗಳು, ರಕ್ಷಣಾ ಮತ್ತು ಬಾಹ್ಯಾಕಾಶ ಸಂಶೋಧನೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಭರವಸೆಯ ಬೆಳವಣಿಗೆಗೆ ಕೇಂದ್ರ ಸರ್ಕಾರ ಕಾರಣವಾಗಿದೆ. ಹಾಗಾಗಿ, ಭಾರತದಲ್ಲಿ ಹೂಡಿಕೆ ಮಾಡುವಂತೆ ಅಮೆರಿಕದ ಕಂಪನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದರು.

ಅಮೆರಿಕ- ಭಾರತ ಉದ್ಯಮ ಮಂಡಳಿ ಸ್ಥಾಪನೆಯ 45ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿರುವ 2 ದಿನಗಳ ಭಾರತ ಪರಿಕಲ್ಪನಾ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಪ್ರಧಾನಿ, ಇಂದು ಭಾರತದ ಬಗ್ಗೆ ಜಾಗತಿಕ ಆಶಾವಾದವಿದೆ. ಇದಕ್ಕೆ ಕಾರಣ ಭಾರತವು ಮುಕ್ತವಾದ ಅವಕಾಶಗಳು ಮತ್ತು ಆಯ್ಕೆಗಳ ಪರಿಪೂರ್ಣ ಸಂಯೋಜನೆ ನೀಡುತ್ತದೆ ಎಂದರು.

ಭಾರತವು ಪ್ರಮುಖ ವ್ಯವಹಾರ ಶ್ರೇಣಿಯಲ್ಲಿ ಏರಿಕೆಯಾಗಿ ಆಗಿದ್ದು, ನೀವು ಆಶಾವಾದವನ್ನು ನೋಡಬಹುದು. ವಿಶ್ವ ಬ್ಯಾಂಕಿನ ಸುಲಭ ವಹಿವಾಟು ರಾಷ್ಟ್ರಗಳಲ್ಲಿ ಭಾರತ ಮೇಲ್ಮುಖವಾಗಿದೆ. ಪ್ರತಿ ವರ್ಷ ವಿದೇಶಿ ನೇರ ಹೂಡಿಕೆಯಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ನಾವು ತಲುಪುತ್ತಿದ್ದೇವೆ. 2019-20ರಲ್ಲಿ ಭಾರತದಲ್ಲಿ ಎಫ್‌ಡಿಐ ಒಳಹರಿವು 74 ಬಿಲಿಯನ್ ಡಾಲರ್​ ಆಗಿತ್ತು. ಇದು ಹಿಂದಿನ ವರ್ಷಕ್ಕಿಂತ 20 ಪ್ರತಿಶತದಷ್ಟು ಹೆಚ್ಚಾಗಿದೆ ಎಂದರು.

ನಾಗರಿಕ ವಿಮಾನಯಾನ ಕ್ಷೇತ್ರವು ಹೆಚ್ಚಿನ ಸಂಭಾವ್ಯ ಬೆಳವಣಿಗೆಯ ಮತ್ತೊಂದು ಕ್ಷೇತ್ರವಾಗಿದೆ. ಮುಂದಿನ 8 ವರ್ಷಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಭಾರತದ ಖಾಸಗಿ ವಿಮಾನಯಾನ ಸಂಸ್ಥೆಗಳು ಮುಂಬರುವ ದಶಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲು ಬಯಸುತ್ತಿವೆ ಎಂದರು.

ಆರೋಗ್ಯ ರಕ್ಷಣೆಯಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ಭಾರತದಲ್ಲಿ ಆರೋಗ್ಯ ಕ್ಷೇತ್ರವು ಪ್ರತಿವರ್ಷ ಶೇ 22ಕ್ಕಿಂತ ವೇಗವಾಗಿ ಬೆಳೆಯುತ್ತಿದೆ. ನಮ್ಮ ಕಂಪನಿಗಳು ವೈದ್ಯಕೀಯ-ತಂತ್ರಜ್ಞಾನ, ಟೆಲಿಮೆಡಿಸಿನ್ ಮತ್ತು ರೋಗನಿರ್ಣಯದ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸುತ್ತಿವೆ ಎಂದು ಮೋದಿ ಶ್ಲಾಘಿಸಿದರು.

ಭಾರತವು ಅವಕಾಶಗಳ ಭೂಮಿಯಾಗಿ ಹೊರಹೊಮ್ಮುತ್ತಿದೆ. ಟೆಕ್ ಕ್ಷೇತ್ರದ ಒಂದು ಉದಾಹರಣೆಯಾಗಿದೆ. ಇತ್ತೀಚೆಗೆ ಭಾರತದಲ್ಲಿ ಒಂದು ಕುತೂಹಲಕಾರಿ ವರದಿ ಹೊರಬಂದಿತು. ನಗರ ಅಂತರ್ಜಾಲ ಬಳಕೆದಾರರಿಗಿಂತ ಗ್ರಾಮೀಣ ಅಂತರ್ಜಾಲ ಬಳಕೆದಾರರು ಮುಂದಿದ್ದಾರೆ ಎಂಬುದು ವರದಿ ತಿಳಿಸಿತು ಎಂದರು.

ಕಳೆದ ಆರು ವರ್ಷಗಳಲ್ಲಿ ನಮ್ಮ ಆರ್ಥಿಕತೆಯನ್ನು ಹೆಚ್ಚು ಮುಕ್ತ ಮತ್ತು ಸುಧಾರಣಾ ಆಧಾರಿತವಾಗಿಸಲು ನಾವು ಅನೇಕ ಪ್ರಯತ್ನಗಳನ್ನು ಮಾಡಿದ್ದೇವೆ. ಸುಧಾರಣೆಗಳು ಹೆಚ್ಚಿದ ‘ಸ್ಪರ್ಧಾತ್ಮಕತೆ’, ‘ಪಾರದರ್ಶಕತೆ’, ‘ಡಿಜಿಟಲೀಕರಣ’, ‘ನಾವೀನ್ಯತೆ’ ಮತ್ತು ‘ನೀತಿಗಳ ಸ್ಥಿರತೆಯನ್ನು’ ಖಚಿತಪಡಿಸಿದ್ದೇವೆ.

ರಕ್ಷಣಾ ಮತ್ತು ಬಾಹ್ಯಾಕಾಶದಲ್ಲಿ ಹೂಡಿಕೆ ಮಾಡಲು ಭಾರತ ನಿಮ್ಮನ್ನು ಆಹ್ವಾನಿಸುತ್ತದೆ. ನಾವು ರಕ್ಷಣಾ ಕ್ಷೇತ್ರದಲ್ಲಿ ಹೂಡಿಕೆಗಾಗಿ ಎಫ್‌ಡಿಐ ಬಂಡವಾಳವನ್ನು ಶೇ 74ಕ್ಕೆ ಹೆಚ್ಚಿಸುತ್ತಿದ್ದೇವೆ. ರಕ್ಷಣಾ ಉಪಕರಣಗಳ ಉತ್ಪಾದನೆಯನ್ನು ಉತ್ತೇಜಿಸಲು ಭಾರತ ಎರಡು ರಕ್ಷಣಾ ಕಾರಿಡಾರ್‌ಗಳನ್ನು ಸ್ಥಾಪಿಸಿದೆ ಎಂದು ಮೋದಿ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.