ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ 65 ಲಕ್ಷಕ್ಕೂ ಹೆಚ್ಚು ಜನರು ಅಟಲ್ ಪಿಂಚಣಿ ಯೋಜನೆಗೆ ಚಂದಾದಾರರಾಗಿದ್ದಾರೆ. ಈ ಮೂಲಕ ಒಟ್ಟು ಚಂದಾದಾರರ ಸಂಖ್ಯೆ 3.68 ಕೋಟಿಗೆ ತಲುಪಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಅಷ್ಟೇ ಅಲ್ಲಿ ಪಿಂಚಣಿ ಯೋಜನೆಯ ಒಟ್ಟಾರೆ ಆಸ್ತಿ 20,000 ಕೋಟಿ ರೂ.ಗೆ ಏರಿಕೆಯಾಗಿದೆ. ಒಟ್ಟು ಚಂದಾದಾರರಲ್ಲಿ 56 ಪ್ರತಿಶತದಷ್ಟು ಪುರುಷರಿದ್ದರೆ, ಶೇ 44ರಷ್ಟು ಮಹಿಳೆಯರು ಯೋಜನೆಯ ಚಂದಾದಾರರಾಗಿದ್ದಾರೆ.
ಅಟಲ್ ಪಿಂಚಣಿ ಯೋಜನೆ (APY) 18 - 40 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕರು ಬ್ಯಾಂಕ್ ಖಾತೆಯನ್ನು ಹೊಂದಿರುವವರು ಚಂದಾದಾರರಾಗಬಹುದು ಹಾಗೂ ಮೂರು ವಿಶಿಷ್ಟ ಪ್ರಯೋಜನಗಳನ್ನು ಪಡೆಯಬಹುದು.
ಮೊದಲನೆಯದಾಗಿ ಯೋಜನೆಯ ಚಂದಾದಾರರಾಗಿರುವವರು 60 ವರ್ಷಗಳನ್ನು ತಲುಪಿದಾಗ ರೂ. 1000 ರಿಂದ ರೂ 5000 ರವರೆಗಿನ ಕನಿಷ್ಠ ಖಾತರಿ ಪಿಂಚಣಿ ಪಡೆಯಬಹುದು. ಎರಡನೆಯದಾಗಿ ಚಂದಾದಾರರ ಮರಣದ ನಂತರ ಸಂಗಾತಿಗೆ ಪಿಂಚಣಿಯ ಮೊತ್ತವನ್ನು ಜೀವಿತಾವಧಿಯಲ್ಲಿ ಖಾತರಿಪಡಿಸಲಾಗುತ್ತದೆ ಮತ್ತು ಕೊನೆಯದಾಗಿ ಚಂದಾದಾರರಿಬ್ಬರ ಮರಣದ ಸಂದರ್ಭದಲ್ಲಿ ಮತ್ತು ಸಂಗಾತಿಗೆ, ಸಂಪೂರ್ಣ ಪಿಂಚಣಿ ಕಾರ್ಪಸ್ ಅನ್ನು ವಾರಸುದಾರರಿಗೆ ಪಾವತಿಸಲಾಗುತ್ತದೆ.
ಭಾರತ ಸರ್ಕಾರದ ಈ ಪ್ರಮುಖ ಸಾಮಾಜಿಕ ಭದ್ರತಾ ಯೋಜನೆಯನ್ನು ಮೇ 9, 2015 ರಂದು ಪ್ರಧಾನಿ ನರೇಂದ್ರ ಮೋದಿ ಜಾರಿಗೆ ತಂದಿದ್ದರು.
ಇದನ್ನೂ ಓದಿ:ಹಣದ ಉಳಿತಾಯ, ಹೂಡಿಕೆ ಮಾಡಿ ಲಾಭ ಪಡೆಯುವುದು ಹೇಗೆ? ಇಲ್ಲಿವೆ ಕೆಲವು ಟಿಪ್ಸ್