ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಪ್ರಗತಿ ಜಿಡಿಪಿ ಶೇ. 7ರ ಕೆಳಮಟ್ಟದಲ್ಲಿ ಬೆಳವಣಿಗೆ ಕಾಣಲಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ವಿಶ್ಲೇಷಿಸಿದೆ.
ಭಾರತದ ಜಿಡಿಪಿ ಬೆಳವಣಿಗೆ ದರವು 2019ರಲ್ಲಿ ಶೇ. 7ರಷ್ಟು (2020ನೇ ಹಣಕಾಸು ವರ್ಷ) ಮತ್ತು 2020ರಲ್ಲಿ ಶೇ 7.2ರಷ್ಟು (2021ನೇ ಹಣಕಾಸು ವರ್ಷ) ಏರಿಕೆಯಾಗುವ ನಿರೀಕ್ಷೆಯಿದೆ ಎಂದು ಅಂದಾಜಿಸಿತ್ತು. 2018ರ ಹಣಕಾಸಿನ ಹೊರಹರಿವು ಕಡಿಮೆಯಾಗಿದ್ದು, ಎಪ್ರಿಲ್‌ನಲ್ಲಿ ನಿರೀಕ್ಷಿಸಿದ್ದಕ್ಕಿಂತ ಸ್ವಲ್ಪ ನಿಧಾನವಾಗಿದೆ ಎಂದು ಎಡಿಬಿ ಹೇಳಿದೆ.
ಈ ವರ್ಷದ ಎಪ್ರಿಲ್‌ನಲ್ಲಿ ಮನಿಲಾ ಮೂಲದ ಮಲ್ಟಿ-ಲ್ಯಾಟರಲ್ ಫಂಡಿಂಗ್ ಏಜೆನ್ಸಿ, 2020ರ ಹಣಕಾಸು ವರ್ಷದ ಭಾರತದ ಬೆಳವಣಿಗೆಯ ಮುನ್ಸೂಚನೆಯನ್ನು ಅಂದಾಜು ಶೇ7.6 ರಿಂದ ಶೇ. 7.2ಕ್ಕೆ ಇಳಿಸಿತ್ತು.