ETV Bharat / business

ಆರೋಗ್ಯ, ಆರ್ಥಿಕ ಪುನಶ್ಚೇತನಕ್ಕೆ 188 ಲಕ್ಷ ಕೋಟಿ ರೂ. ಮೀಸಲಿಡಿ: ಅಮರ್ತ್ಯ ಸೇನ್, ಸತ್ಯಾರ್ಥಿ - ಕೊರೊನಾ ವೈರಸ್ ಆರೋಗ್ಯ ಚೇತರಿಕೆ

ಕೋವಿಡ್​-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಹಾಗೂ ಜಾಗತಿಕ ಚೇತರಿಕೆ ಯೋಜನೆ ರೂಪಿಸಲು ಜಿ-20 ಶೃಂಗಸಭೆಯನ್ನು ತುರ್ತಾಗಿ ಕರೆಯಬೇಕು ಎಂದು ವಿಶ್ವದಾದ್ಯಂತ 225ಕ್ಕೂ ಅಧಿಕ ಚಿಂತಕರ ಚಾವಡಿ ಹಾಗೂ ನಾಯಕರು ಸಹಿ ಮಾಡಿದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

Amartya Sen
ಅಮರ್ತ್ಯ ಸೇನ್
author img

By

Published : Jun 3, 2020, 4:56 PM IST

ನ್ಯೂಯಾರ್ಕ್​ (ವಿಶ್ವಸಂಸ್ಥೆ): ಭಾರತೀಯ ನೊಬೆಲ್ ಪ್ರಶಸ್ತಿ ವಿಜೇತರಾದ ಅಮರ್ತ್ಯ ಸೇನ್ ಮತ್ತು ಕೈಲಾಶ್ ಸತ್ಯಾರ್ಥಿ ಹಾಗೂ ಅರ್ಥಶಾಸ್ತ್ರಜ್ಞ ಕೌಶಿಕ್ ಬಸು ಸೇರಿ 225ಕ್ಕೂ ಅಧಿಕ ಜಾಗತಿಕ ನಾಯಕರು ಒಗ್ಗೂಡಿ ಜಿ-20 ಗ್ಲೋಬಲ್​ ಲೀಡರ್​ ಮುಂದೆ ಕೋವಿಡ್​-19 ಸಂಬಂಧಿತ ತಮ್ಮ ಅಹವಾಲು ಇರಿಸಿದ್ದಾರೆ.

ಜಿ- 20 ರಾಷ್ಟ್ರಗಳು ಜಂಟಿಯಾಗಿ 2.5 ಟ್ರಿಲಿಯನ್ ಯುಎಸ್ ಡಾಲರ್ (188 ಲಕ್ಷ ಕೋಟಿ ರೂ.) ನಷ್ಟು ನಿಧಿ ಕೊರೊನಾ ವೈರಸ್​ ತಂದಿಟ್ಟ ಜಾಗತಿಕ ಆರೋಗ್ಯ ಮತ್ತು ಆರ್ಥಿಕ ಚೇತರಿಕೆ ಯೋಜನೆಗೆ ಮೀಸಲಿಡಬೇಕು ಎಂದು ಸಲಹೆ ನೀಡಿದ್ದಾರೆ.

ಕೋವಿಡ್​-19 ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟುಗಳನ್ನು ಪರಿಹರಿಸಲು ಹಾಗೂ ಜಾಗತಿಕ ಚೇತರಿಕೆ ಯೋಜನೆ ರೂಪಿಸಲು ಜಿ-20 ಶೃಂಗಸಭೆಯನ್ನು ತುರ್ತಾಗಿ ಕರೆಯಬೇಕು ಎಂದು ವಿಶ್ವದಾದ್ಯಂತ 225ಕ್ಕೂ ಅಧಿಕ ಚಿಂತಕರ ಚಾವಡಿ ಹಾಗೂ ನಾಯಕರು ಸಹಿ ಮಾಡಿದ ಪತ್ರದಲ್ಲಿ ಒತ್ತಾಯಿಸಿದ್ದಾರೆ.

ತೀವ್ರ ಆರ್ಥಿಕ ಹಿಂಜರಿತದ ಮುನ್ಸೂಚನೆಗಳ ಮಧ್ಯೆ ಸಾಂಕ್ರಾಮಿಕ ರೋಗದ ಪರಿಣಾಮ ಎದುರಿಸಲು ಜಿ- 20 ದೇಶಗಳು ಮಾರ್ಚ್ 26ರಂದು 5 ಟ್ರಿಲಿಯನ್ ಯುಎಸ್​ ಡಾಲರ್​​ ತೆಗೆದಿರಿಸುವ ವಾಗ್ದಾನ ಮಾಡಿದ್ದವು.

ಕೋವಿಡ್​-19 ಸಾಂಕ್ರಾಮಿಕವು ವಿಶ್ವಾದ್ಯಂತ 3,75,000 ಜನರನ್ನು ಬಲಿಪಡೆದಿದ್ದು, ಜಾಗತಿಕ ಆರ್ಥಿಕತೆಯನ್ನು ಧ್ವಂಸ ಮಾಡಿದೆ. ಲಕ್ಷಾಂತರ ಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದೆ.

ಮಾಜಿ ಪ್ರಧಾನಿ ಮಂತ್ರಿಗಳಾದ ಗಾರ್ಡನ್ ಬ್ರೌನ್ ಮತ್ತು ಟೋನಿ ಬ್ಲೇರ್, ಯುಎನ್ ಮಾಜಿ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್, ಯುಎನ್ ಜನರಲ್ ಅಸೆಂಬ್ಲಿಯ ಮಾಜಿ ಅಧ್ಯಕ್ಷ ಮಾರಾ ಫರ್ನಾಂಡಾ ಎಸ್ಪಿನೋಸಾ, ನೊಬೆಲ್​​ ಪುರಸ್ಕೃತರಾದ ಅಮರ್ತ್ಯ ಸೇನ್​, ಸತ್ಯಾರ್ಥಿ ಮತ್ತು ಬಸು ಅವರು ಪತ್ರಕ್ಕೆ ಸಹಿ ಹಾಕಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.