ETV Bharat / business

ಗಡಿಯಲ್ಲಿ ಯುದ್ಧೋನ್ಮಾದ: ಚೀನಾದ ಎಐಐ ಬ್ಯಾಂಕ್​ನಿಂದ​ ಭಾರತಕ್ಕೆ ₹ 5,714 ಕೋಟಿ ರೂ. ಸಾಲ...! - ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್​ಮೆಂಟ್​

ಏಷ್ಯನ್ ಡೆವಲಪ್​ಮೆಂಟ್​ ಬ್ಯಾಂಕ್​ ಜತೆಗೆ ಸಹಕರಿಸಿದ ಬಜೆಟ್ ಬೆಂಬಲವು ಅನೌಪಚಾರಿಕ ವಲಯ ಸೇರಿದಂತೆ ವ್ಯವಹಾರಗಳಿಗೆ ಆರ್ಥಿಕ ನೆರವು ನೀಡಲು ಬಳಸಬಹುದು. ಅಗತ್ಯವಿರುವವರಿಗೆ ಸಾಮಾಜಿಕ ಸುರಕ್ಷತೆಗೆ ಹಾಗೂ ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸಲು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್​ಮೆಂಟ್​ ಬ್ಯಾಂಕ್ ತಿಳಿಸಿದೆ.

Asian Infrastructure Investment Bank
ಎಐಐಬಿ
author img

By

Published : Jun 17, 2020, 5:12 PM IST

ನವದೆಹಲಿ: ಲಡಾಖ್ ಗಡಿಯಲ್ಲಿ ಉದ್ಧಟತನ ತೋರುತ್ತಿರುವ ಚೀನಾದ ಸೈನಿಕರು 20 ಭಾರತೀಯ ಯೋಧರನ್ನು ಹುತಾತ್ಮರಾಗಿಸಿದ್ದಾರೆ. ಇನ್ನೊಂದು ಕಡೆ ಚೀನಾ ಮೂಲದ ಬ್ಯಾಂಕೊಂದು ಭಾರತಕ್ಕೆ ಸಾಲ ನೀಡಲು ಅನುಮೋದನೆ ನೀಡಿದೆ.

ಚೀನಾದ ಬೀಜಿಂಗ್ ಮೂಲದ ಏಷ್ಯನ್ ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್​​ಮೆಂಟ್​ ಬ್ಯಾಂಕ್ (ಎಐಐಬಿ) ಬುಧವಾರ ಭಾರತಕ್ಕೆ 750 ಮಿಲಿಯನ್ ಡಾಲರ್ (ಸುಮಾರು 5,714 ಕೋಟಿ ರೂ.) ಸಾಲ ನೀಡಲು ಅನುಮೋದಿಸಿದೆ.

ಪೂರ್ವ ಲಡಾಖ್‌ನ ಗಾಲ್ವನ್ ಕಣಿವೆ ಪ್ರದೇಶದ ಭಾರತ-ಚೀನಾ ವಾಸ್ತವ ಗಡಿ ರೇಖೆಯಲ್ಲಿ (ಎಲ್‌ಎಸಿ) ಭಾರತೀಯ ಸೇನೆಯೊಂದಿಗೆ ಸೋಮವಾರ ರಾತ್ರಿ ನಡೆಸಿದ ಹಿಂಸಾತ್ಮಕ ಸಂಘರ್ಷದಲ್ಲಿ ಚೀನಾದ 43 ಸೈನಿಕರ ಸಾವು-ನೋವಾಗಿದೆ ಎಂದು ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ. ಇದೇ ಸಂಘರ್ಷದಲ್ಲಿ ಭಾರತದ 20 ಯೋಧರು ಹುತಾತ್ಮರಾಗಿದ್ದಾರೆ.

ಬಡ ಮತ್ತು ದುರ್ಬಲ ಕುಟುಂಬಗಳ ಮೇಲೆ ಕೋವಿಡ್​ -19 ಸೋಂಕಿನ ದುಷ್ಪರಿಣಾಮದ ವಿರುದ್ಧ ಸರ್ಕಾರದ ಹೋರಾಟಕ್ಕೆ ಈ ಸಾಲದ ನೆರವು ಅದಕ್ಕೆ ಇನ್ನಷ್ಟು ಬಲ ನೀಡಲಿದೆ ಎಂದು ಬ್ಯಾಂಕ್​​ ಹೇಳಿದೆ.

ಏಷ್ಯನ್ ಡೆವಲಪ್​ಮೆಂಟ್​ ಬ್ಯಾಂಕ್​ ಜತೆಗೆ ಸಹಕರಿಸಿದ ಬಜೆಟ್ ಬೆಂಬಲವು ಅನೌಪಚಾರಿಕ ವಲಯ ಸೇರಿದಂತೆ ವ್ಯವಹಾರಗಳಿಗೆ ಆರ್ಥಿಕ ನೆರವು ನೀಡಲು ಬಳಸಬಹುದು. ಅಗತ್ಯವಿರುವವರಿಗೆ ಸಾಮಾಜಿಕ ಸುರಕ್ಷತೆಗೆ ಹಾಗೂ ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಗಳನ್ನು ಬಲಪಡಿಸಲು ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಬ್ಯಾಂಕ್​ ಪ್ರಕಟಣೆಯಲ್ಲಿ ತಿಳಿಸಿದೆ.

ವಿಶ್ವ ಬ್ಯಾಂಕ್​ನ ಪ್ರಕಾರ, ಸುಮಾರು 270 ಮಿಲಿಯನ್ ಜನರು ರಾಷ್ಟ್ರೀಯ ಬಡತನ ರೇಖೆಗಿಂತ ಕೆಳಗಿದ್ದಾರೆ. ಸುಮಾರು 81 ಮಿಲಿಯನ್ ಜನರು ಆರೋಗ್ಯ ಸೇವೆಗಳಿಗೆ ಸೀಮಿತ ಪ್ರವೇಶ ಪಡೆಯದೇ ಜನನಿಬಿಡ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇಲ್ಲಿನ ಬಹುತೇಕರು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆ ಎಂದಿದೆ.

ಇದರ ಮಧ್ಯೆ ದೇಶದಲ್ಲಿ ಬುಧವಾರ ಅತಿ ಹೆಚ್ಚು 2,003 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ 11,903ಕ್ಕೆ ತಲುಪಿದ್ದು, ಒಟ್ಟು ಪೀಡಿತರ ಸಂಖ್ಯೆ 3,54,065ಕ್ಕೆ ಏರಿದೆ. 10,974 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.