ETV Bharat / business

ರತ್ನ, ಚಿನ್ನಾಭರಣ ರಫ್ತು ಶೇ. 71ರಷ್ಟು ಹೆಚ್ಚಳ - ರತ್ನ, ಚಿನ್ನಾಭರಣ ರಫ್ತು ಶೇ. 71ರಷ್ಟು ಏರಿಕೆ

ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಮುಂಚಿನ ಅದೇ ಅವಧಿಗೆ ಹೋಲಿಸಿದರೆ, ರತ್ನಗಳು ಮತ್ತು ಆಭರಣ ವಲಯವು ಏಪ್ರಿಲ್ - ಡಿಸೆಂಬರ್ 2019 ರಲ್ಲಿ ಸಾಧಿಸಿದ ₹28 ಶತಕೋಟಿಗಿಂತ ಶೇ. 3ರಷ್ಟು ಏರಿಕೆಯನ್ನು ಮತ್ತೆ ದಾಖಲಿಸಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
author img

By

Published : Jan 26, 2022, 7:40 AM IST

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕಗಳಲ್ಲಿ (ಏಪ್ರಿಲ್-ಡಿಸೆಂಬರ್) ಭಾರತದ ರತ್ನಗಳು ಮತ್ತು ಚಿನ್ನಾಭರಣಗಳ ರಫ್ತು ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ. 71 ರಷ್ಟು ಏರಿಕೆ ಕಂಡಿದೆ.

ಮೌಲ್ಯದ ಲೆಕ್ಕದಲ್ಲಿ 2020ರಲ್ಲಿ ಇದೇ ಅವಧಿಯಲ್ಲಿ ₹16.9 ಶತಕೋಟಿ ಡಾಲರ್‌ಗೆ ಹೋಲಿಸಿದರೆ ಬಾರಿ ₹28.9 ಶತಕೋಟಿ ರಫ್ತು ಮಾಡಿದೆ. ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಮುಂಚಿನ ಅದೇ ಅವಧಿಗೆ ಹೋಲಿಸಿದರೆ, ರತ್ನಗಳು ಮತ್ತು ಆಭರಣ ವಲಯವು ಏಪ್ರಿಲ್-ಡಿಸೆಂಬರ್ 2019 ರಲ್ಲಿ ಸಾಧಿಸಿದ ₹28 ಶತಕೋಟಿಗಿಂತ ಶೇ. 3ರಷ್ಟು ಏರಿಕೆಯನ್ನು ಮತ್ತೆ ದಾಖಲಿಸಿದೆ.

ಡಿಸೆಂಬರ್ 2021ರಲ್ಲಿ ಭಾರತವು ₹2.99 ಶತಕೋಟಿ ಮೌಲ್ಯದ ರತ್ನಗಳು ಮತ್ತು ಆಭರಣಗಳನ್ನು ರಫ್ತು ಮಾಡಿದೆ. ಡಿಸೆಂಬರ್ 2020 ರಲ್ಲಿ ₹2.57 ಶತಕೋಟಿಗಿಂತ 16.38 ರಷ್ಟು ಏರಿಕೆ ದಾಖಲಿಸಿದೆ.

ಇಂಜಿನಿಯರಿಂಗ್ ಸರಕುಗಳು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ನಂತರ ಮೂರನೇ ಅತಿದೊಡ್ಡ ಸರಕು ಪಾಲನ್ನು ಹೊಂದಿರುವ ರತ್ನಗಳು ಮತ್ತು ಆಭರಣ ವಲಯವು ಏಪ್ರಿಲ್ - ಡಿಸೆಂಬರ್ 2021ಅವಧಿಯಲ್ಲಿ ಭಾರತದ ಸಂಪೂರ್ಣ ರಫ್ತು ಪಟ್ಟಿಯಲ್ಲಿ ಶೇ.9.6 ರಷ್ಟು ಪಾಲನ್ನು ಹೊಂದಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಏಪ್ರಿಲ್-ನವೆಂಬರ್ 2021 ರಲ್ಲಿ ಅಗ್ರ 5 ರಫ್ತು ರಾಷ್ಟ್ರಗಳೆಂದರೆ:

  1. ಅಮೆರಿಕ​​(38.7%)
  2. ಹಾಂಕಾಂಗ್ (24.6%)
  3. ಯುಎಇ (11.9%)
  4. ಬೆಲ್ಜಿಯಂ (6.6%)
  5. ಇಸ್ರೇಲ್ (3.9%).

ರತ್ನಗಳು ಮತ್ತು ಆಭರಣ ಉದ್ಯಮವು ಭಾರತದ ಒಟ್ಟು ಜಿಡಿಪಿಗೆ ಶೇ.7 ರಷ್ಟು ಕೊಡುಗೆ ನೀಡುತ್ತದೆ. ಜತೆಗೆ 50 ಲಕ್ಷಕ್ಕೂ ಹೆಚ್ಚು ಕಾರ್ಮಿಕರನ್ನು ಹೊಂದಿರುವ ದೊಡ್ಡ ಕೌಶಲ್ಯ ಮತ್ತು ಅರೆ - ಕುಶಲ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. 450 ಕ್ಕೂ ಹೆಚ್ಚು ಸಂಘಟಿತ ಆಭರಣ ತಯಾರಕರು, ಆಮದುದಾರರು ಮತ್ತು ರಫ್ತುದಾರರು ಸೂರತ್‌ನಲ್ಲಿ ನೆಲೆಸಿದ್ದಾರೆ. ಗುಜರಾತ್ ನಗರ ವಿಶ್ವದ ಆಭರಣ ಉತ್ಪಾದನಾ ಕೇಂದ್ರವಾಗಿದೆ.

ಇದನ್ನೂ ಓದಿ: ಪಾಲಿಸಿಬಜಾರ್​, ನೈಕಾ ಷೇರುಗಳಿಗೆ ಭಾರಿ ನಷ್ಟ.. ಆದರೂ ಚೇತರಿಕೆ!!

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.