ವಾಷಿಂಗ್ಟನ್: ಮಾರ್ಚ್ ಮೊದಲ ಎರಡು ವಾರಗಳಲ್ಲಿ ಅಮೆರಿಕದ ಉದ್ಯೋಗದಾತರು 7 ಲಕ್ಷ ಉದ್ಯೋಗಗಳನ್ನು ಕಡಿತಗೊಳಿಸಿದ್ದಾರೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸರ್ಕಾರ ಆಡಳಿತದ ಅವಧಿಯಲ್ಲಿನ ಕೊರೊನಾ ವೈರಸ್ ಸಾಂಕ್ರಾಮಿಕ ಕೆಟ್ಟ ಹಂತಕ್ಕೆ ತಲುಪಿದ್ದು, ಈ ಉದ್ಯೋಗ ಕಡಿತ 2009ರ ಮೇ ತಿಂಗಳ ಆರ್ಥಿಕ ಬಿಕ್ಕಟ್ಟಿನ ಗರಿಷ್ಠ 8,00,000 ಉದ್ಯೋಗ ನಷ್ಟಗಳಿಗೆ ಹತ್ತಿರದಲ್ಲಿದೆ.
ಹೆಚ್ಚಿನ ಉದ್ಯೋಗ ಕಡಿತಗಳು ರೆಸ್ಟೋರೆಂಟ್, ಬಾರ್ ಮತ್ತು ಚಿಲ್ಲರೆ ವ್ಯಾಪಾರ ಕ್ಷೇತ್ರಗಳಲ್ಲಿ ಉಂಟಾಗಿದೆ ಎಂದು ವರದಿಯಾಗಿವೆ. ಇದು 2010ರ ಸೆಪ್ಟೆಂಬರ್ ನಂತರ ವೇತನದಾರರ ಅತ್ಯಧಿಕ ಕುಸಿತವಾಗಿದೆ ಎಂದು ಸಿಎನ್‌ಬಿಸಿ ವರದಿ ಮಾಡಿದೆ.
ನಿರುದ್ಯೋಗ ದರವು ಶೇ 4.4 ಕ್ಕೆ ಏರಿದೆ. ಕಳೆದ ಒಂದು ದಶಕದಲ್ಲಿ ಶೇ 3.5ರಷ್ಟಿದೆ ಉದ್ಯೋಗ ಕುಸಿತ ಏರಿಕೆಯಾಗಿದೆ ಎಂದು ಅಮೆರಿಕದ ಬ್ಯೂರೋ ಆಫ್ ಲೇಬರ್ ಸ್ಟ್ಯಾಟಿಸ್ಟಿಕ್ಸ್ ವರದಿ ಮಾಡಿದೆ.
ಯುಎಸ್ಎ ಟುಡೇ ವರದಿಯ ಪ್ರಕಾರ, ಮಾರ್ಚ್ 14ಕ್ಕೆ ಕೊನೆಗೊಂಡ ವಾರದಲ್ಲಿ ಲೇಬರ್‌ನ ಸಮೀಕ್ಷೆ ನಡೆಸಲಾಯಿತು. ಬಹುತೇಕ ರಾಜ್ಯಗಳು ತನ್ನ ನಿವಾಸಿಗರನ್ನು ಮನೆಯಲ್ಲಿಯೇ ಇರುವಂತೆ ಆದೇಶಿಸಿದೆ. ರೆಸ್ಟೋರೆಂಟ್, ಚಿತ್ರಮಂದಿರ ಮತ್ತು ಮಳಿಗೆಗಳನ್ನು ಮುಚ್ಚಲು ಅನಿವಾರ್ಯವಾಗಿ ಆದೇಶಿಸಿವೆ. ಹೀಗಾಗಿ, ಮಾರ್ಚ್‌ನಲ್ಲಿ ಉದ್ಯೋಗ ನಷ್ಟದ ಸಂಖ್ಯೆಗಳು ಹೆಚ್ಚಿವೆ.
ಕಳೆದ ವಾರ 6.6 ಮಿಲಿಯನ್ ಕಾರ್ಮಿಕರು ನಿರುದ್ಯೋಗದ ಹಕ್ಕುಗಳನ್ನು ಸಲ್ಲಿಸಿದ್ದಾರೆ ಎಂದು ಅಮೆರಿಕ ಕಾರ್ಮಿಕ ಇಲಾಖೆ ಗುರುವಾರ ಬಹಿರಂಗಪಡಿಸಿದೆ. ಈ ವರದಿಯು ಆರ್ಥಿಕತೆಯ ಐತಿಹಾಸಿಕ ಮುಕ್ತ ಪತನದ ಮೊದಲ ಯೆಡವಟ್ಟನ್ನು ಸೆರೆಹಿಡಿಯುತ್ತದೆ. ಆರಂಭಿಕ ನಿರುದ್ಯೋಗ ಹಕ್ಕುಗಳನ್ನು ಸಲ್ಲಿಸುವ ಕಾರ್ಮಿಕರ ಸಂಖ್ಯೆ 2013ರಿಂದ 70,000ರಷ್ಟು ಹೆಚ್ಚಾಗಿದೆ. ಲೇಬರ್ ಸಮೀಕ್ಷೆಯ ವಾರದಲ್ಲಿ 2,82,000ಕ್ಕೆ ತಲುಪಿದೆ.
ಮೇ 8ರವರೆಗೆ ಬಿಡುಗಡೆಯಾಗದ ಏಪ್ರಿಲ್ ಉದ್ಯೋಗ ವರದಿಯಲ್ಲಿ ಸಾಂಕ್ರಾಮಿಕ ರೋಗ ಹಬ್ಬುವಿಕೆ ವ್ಯವಹಾರಗಳನ್ನು ಸ್ಥಗಿತಗೊಳಿಸುವಂತೆ ಮಾಡಿದೆ. ಜನರು ಮನೆಯಲ್ಲಿಯೇ ಇರಬೇಕಾಗಿರುವುದರಿಂದ ಮೊದಲ ಬಾರಿಗೆ ನಿರುದ್ಯೋಗ ಪ್ರಯೋಜನಕ್ಕಾಗಿ ಅರ್ಜಿ ಸಲ್ಲಿಸಿದ ಸುಮಾರು 10 ಮಿಲಿಯನ್ ಅಮೆರಿಕನ್ನರನ್ನು ಒಳಗೊಂಡಿರಬಹುದು ಎಂದು ಸಿಎನ್ಎನ್ ವರದಿ ತಿಳಿಸಿದೆ.