ನವದೆಹಲಿ: ಪ್ರಸಕ್ತ ವರ್ಷದ 2021ರ ಜನವರಿ 1ರ ವೇಳೆಗೆ 450 ಮೂಲಸೌಕರ್ಯ ಯೋಜನೆಗಳು 4.28 ಲಕ್ಷ ಕೋಟಿ ರೂ.ಯಷ್ಟು ವೆಚ್ಚದ ಪ್ರಮಾಣ ಮೀರಿದೆ ಎಂದು ಸಾಂಖಿಕ್ಯ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಂಕಿ - ಅಂಶಗಳು ತಿಳಿಸಿವೆ.
ಅಂಕಿ- ಅಂಶಗಳ ಪ್ರಕಾರ, ಕೇಂದ್ರ ವಲಯದ 1,687 ಯೋಜನೆಗಳಲ್ಲಿ 558 ವಿಳಂಬವಾಗಿವೆ. 1,687 ಯೋಜನೆಗಳ ಅನುಷ್ಠಾನದ ಒಟ್ಟು ಮೂಲ ವೆಚ್ಚ 21.44 ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚಿತ್ತು. ಅವುಗಳ ನಿರೀಕ್ಷಿತ ಪೂರ್ಣಗೊಳಿವಿಕೆ ವೆಚ್ಚದ ಪ್ರಮಾಣವು 25.72 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗಬಹುದು. ಇದರ ಒಟ್ಟಾರೆ ಏರಿಕೆ 4.28 ಲಕ್ಷ ಕೋಟಿ ರೂ.ಯಷ್ಟಿದ್ದು, ಮೂಲ ವೆಚ್ಚದ ಶೇ 19.96ರಷ್ಟು ಹೆಚ್ಚಳವನ್ನು ತೋರಿಸುತ್ತಿದೆ.
ಇದನ್ನೂ ಓದಿ: ಬಜೆಟ್ ನಿರೀಕ್ಷೆಯ ಭಾರಕ್ಕೆ 1,444 ಅಂಕ ಕುಸಿದ ಸೆನ್ಸೆಕ್ಸ್!
1,687 ಯೋಜನೆಗಳಲ್ಲಿ ಕೇವಲ 11 ಯೋಜನೆಗಳು ನಿಗದಿತ ಸಮಯಕ್ಕಿಂತ ಮುಂದಿವೆ. 195 ಯೋಜನೆಗಳು ವೇಳಪಟ್ಟಿಗೆ ಅನುಗುಣವಾಗಿ ಇದ್ದರೇ 558 ವಿಳಂಬವಾಗಿವೆ. 450 ಯೋಜನೆಗಳು ಉದ್ದೇಶಿತ ವೆಚ್ಚದ ಪ್ರಮಾಣ ಮೀರಿದೆ ಎಂದು ವರದಿ ತಿಳಿಸಿದೆ. 221 ಯೋಜನೆಗಳು ಅವುಗಳ ಮೂಲ ಯೋಜನೆ ಅನುಷ್ಠಾನದ ಗುರಿಗೆ ಸಂಬಂಧಿಸಿದಂತೆ ಸಮಯ ಮತ್ತು ವೆಚ್ಚವನ್ನೂ ಮೀರಿವೆ.
ಪೂರ್ಣಗೊಂಡ ಇತ್ತೀಚಿನ ವೇಳಾಪಟ್ಟಿ ಆಧಾರದ ಮೇಲೆ ವಿಳಂಬಿತ ಯೋಜನೆಗಳನ್ನು ಲೆಕ್ಕಹಾಕಿದರೆ ಅವುಗಳ ಸಂಖ್ಯೆ 408ಕ್ಕೆ ಇಳಿಯುತ್ತದೆ. ಸಚಿವಾಲಯದ ವರದಿಯು 923 ಯೋಜನೆಗಳಿಗೆ ಕಾರ್ಯಾರಂಭದ ವರ್ಷ ಅಥವಾ ತಾತ್ಕಾಲಿಕ ಅವಧಿ ವರದಿ ಮಾಡಿಲ್ಲ.