ನವದೆಹಲಿ: ಪ್ರತಿ ನಾಲ್ವರು ಭಾರತೀಯ ವೃತ್ತಿಪರರಲ್ಲಿ ಮೂವರು ನೌಕರರು ತಮ್ಮ ಉದ್ಯೋಗಗಳನ್ನು ಬದಲಿಸುವ ಹಾಗೂ ಮುಂದಿನ 12 ತಿಂಗಳಲ್ಲಿ ಹೊಸ ಕೆಲಸ ಹುಡುಕುವ ಸಾಧ್ಯತೆ ಇದ ಎಂದು ಲಿಂಕ್ಡ್ಇನ್ ಜಾಬ್ ಸೀಕರ್ ಸಂಶೋಧನಾ ವರದಿ ತಿಳಿಸಿದೆ.
ನಾಲ್ವರಲ್ಲಿ ಮೂವರು ಈಗಿನ ಉದ್ಯೋಗ ಬದಲಿಸುವ ಹಾಗೂ ಹೊಸ ಉದ್ಯೋಗ ಹುಡುಕಾಟದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಉದ್ಯೋಗ ಮಾರುಕಟ್ಟೆ 2021ರಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿ ಇರಲಿದೆ ಎಂದಿದೆ.
1,016 ಸಮೀಕ್ಷೆಯ ಪ್ರತಿಕ್ರಿಯೆಗಳ ಆಧಾರದ ಮೇಲೆ ನಾಲ್ಕು ಭಾರತೀಯ ವೃತ್ತಿಪರರಲ್ಲಿ ಮೂವರು 2021ರಲ್ಲಿ ಹೊಸ ಉದ್ಯೋಗಕ್ಕಾಗಿ ಸಕ್ರಿಯವಾಗಿ ಹುಡುಕುತ್ತಾರೆ ಎಂದು ಸಂಶೋಧನೆ ಗಮನಿಸಿದೆ.
ಇದನ್ನೂ ಓದಿ: ಲೋಕಲ್ ಟ್ರೈನ್ಗೆ ನಮಿಸಿದ ಪ್ರಯಾಣಿಕ: 'ಭಾರತದ ಆತ್ಮ ಹೀಗೇ ಇರಲಿ' ಎಂದ ಆನಂದ್ ಮಹೀಂದ್ರಾ
ಮೂರರಲ್ಲಿ ಇಬ್ಬರು (ಶೇ 64ರಷ್ಟು) ವೃತ್ತಿಪರರು ತಮ್ಮ ಭವಿಷ್ಯದ ಪ್ರಗತಿಯ ಬಗ್ಗೆ ವಿಶ್ವಾಸ ಹೊಂದಿದ್ದಾರೆ. ಐದರಲ್ಲಿ ಇಬ್ಬರು ನೆಟ್‌ವರ್ಕಿಂಗ್ ಈವೆಂಟ್‌ಗಳಿಗೆ (ಶೇ 38) ಹಾಜರಾಗುತ್ತಾರೆ. ಆನ್‌ಲೈನ್ ಕಲಿಕೆಯ ಹೂಡಿಕೆ (ಶೇ 37) ನಿರ್ಣಾಯಕವಾಗಿದೆ. 2021ರಲ್ಲಿ ಉದ್ಯೋಗ ಮಾರುಕಟ್ಟೆ ಹೆಚ್ಚು ಸ್ಪರ್ಧಾತ್ಮಕವಾಗುತ್ತಿರುವುದರಿಂದ ಭಾರತೀಯ ವೃತ್ತಿಪರರಲ್ಲಿ ವೃತ್ತಿಪರ ಅನಿಶ್ಚಿತತೆ ಮತ್ತು ಚಿಂತೆ ಕಾಡಲಿದೆ.