ETV Bharat / business

ಆರ್ಥಿಕ ಹಿಂಜರಿತದ ಮಧ್ಯೆ ಒಂದೇ ತಿಂಗಳಲ್ಲಿ 13 ಲಕ್ಷ ಜನಕ್ಕೆ ಸಿಕ್ತು ಉದ್ಯೋಗ - ಇಎಸ್​ಐಸಿ

ಇದೇ ವರ್ಷದ ಹಿಂದಿನ ತಿಂಗಳ (ಜುಲೈ) 14.49 ಲಕ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಆಗಿದೆ. 2018-19ರ ಅವಧಿಯಲ್ಲಿ ಇಎಸ್‌ಐಸಿನ ಹೊಸ ಚಂದಾದಾರರ ಒಟ್ಟು ದಾಖಲಾತಿ 1.49 ಕೋಟಿ ಆಗಿದೆ ಎಂದು ರಾಷ್ಟ್ರೀಯ ಅಂಕಿ - ಅಂಶ ಕಚೇರಿಯ (ಎನ್‌ಎಸ್‌ಒ) ವರದಿಯಲ್ಲಿದೆ. 2017ರ ಸೆಪ್ಟೆಂಬರ್ ಮತ್ತು 2019ರ ಆಗಸ್ಟ್​ ಅವಧಿಯಲ್ಲಿ ಸುಮಾರು 2.97 ಕೋಟಿ ಹೊಸ ಚಂದಾದಾರರು ಇಎಸ್‌ಐ ಯೋಜನೆಗೆ ಸೇರ್ಪಡೆ ಆಗಿದ್ದಾರೆ

ಸಾಂದರ್ಭಿಕ ಚಿತ್ರ
author img

By

Published : Oct 25, 2019, 8:04 PM IST

ನವದೆಹಲಿ: ಉದ್ಯೋಗಿಗಳ ರಾಜ್ಯ ವಿಮಾ ನಿಗಮವು (ಇಎಸ್‌ಐಸಿ) ಇತ್ತೀಚಿನ ವೇತನದಾರರ ದತ್ತಾಂಶ ಮಾಹಿತಿ ಪ್ರಕಾರ, ಆಗಸ್ಟ್​​ನ ಒಂದೇ ತಿಂಗಳಲ್ಲಿ ಸುಮಾರು 13 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿವೆ ಎಂದು ತಿಳಿಸಿದೆ.

ಇದೇ ವರ್ಷದ ಹಿಂದಿನ ತಿಂಗಳ (ಜುಲೈ) 14.49 ಲಕ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆ ಆಗಿದೆ. 2018-19ರ ಅವಧಿಯಲ್ಲಿ ಇಎಸ್‌ಐಸಿನ ಹೊಸ ಚಂದಾದಾರರ ಒಟ್ಟು ದಾಖಲಾತಿ 1.49 ಕೋಟಿ ಆಗಿದೆ ಎಂದು ರಾಷ್ಟ್ರೀಯ ಅಂಕಿ - ಅಂಶ ಕಚೇರಿಯ (ಎನ್‌ಎಸ್‌ಒ) ವರದಿಯಲ್ಲಿದೆ. 2017ರ ಸೆಪ್ಟೆಂಬರ್ ಮತ್ತು 2019ರ ಆಗಸ್ಟ್​ ಅವಧಿಯಲ್ಲಿ ಸುಮಾರು 2.97 ಕೋಟಿ ಹೊಸ ಚಂದಾದಾರರು ಇಎಸ್‌ಐ ಯೋಜನೆಗೆ ಸೇರ್ಪಡೆ ಆಗಿದ್ದಾರೆ

ಎನ್ಎಸ್ಒ ವರದಿಯು ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ದತ್ತಾಂಶಗಳನ್ನು ಕಲೆಹಾಕಿ ತನ್ನ ವರದಿಯನ್ನು ಪ್ರಕಟಿಸಿದ್ದು, ಇಎಸ್ಐಸಿ, ನಿವೃತ್ತಿ ನಿಧಿ ಸಂಸ್ಥೆಯಾದ ಇಪಿಎಫ್ಒ ಮತ್ತು ಪಿಂಚಣಿ ನಿಧಿ ನಿಯಂತ್ರಣ ಹಾಗೂ ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆಆರ್​ಡಿಎ) ವರದಿ ಆಧರಿಸಿ ಈ ಅಂಕಿ- ಅಂಶ ಪ್ರಕಟಿಸಲಾಗಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.