ಸ್ಯಾನ್ಫ್ರಾನ್ಸಿಸ್ಕೋ: ಸಾಂಕ್ರಾಮಿಕ, ವಿಡಿಯೋ ಸಹಯೋಗ ಮತ್ತು ಚಾಟ್ ಪ್ಲಾಟ್‌ಫಾರ್ಮ್ ಝೂಮ್‌ನಲ್ಲಿ ವರ್ಕ್ ಫ್ರಾಮ್ ಹೋಮ್ನ ವ್ಯಾಪಕತೆಯಿಂದಾಗಿ ತ್ರೈಮಾಸಿಕ ಆದಾಯದಲ್ಲಿ ಶೇ 369ರಷ್ಟು ಏರಿಕೆಯಾಗಿದೆ.
ನಾಲ್ಕನೇ ತ್ರೈಮಾಸಿಕದಲ್ಲಿ ನಿವ್ವಳ ಆದಾಯ 260.4 ಮಿಲಿಯನ್ ಡಾಲರ್ನಷ್ಟಾಗಿದೆ ಎಂದು ಝೂಮ್ ಸ್ಟಾರ್ಟ್ಅಪ್ ಪ್ರಕಟಣೆಯಲ್ಲಿ ತಿಳಿಸಿದೆ.
ಈಗ ಸುಮಾರು 10ಕ್ಕಿಂತ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಸುಮಾರು 4,67,100 ಗ್ರಾಹಕರಿಗೆ ತನ್ನ ಡಿಜಿಟಲ್ ಸೇವೆ ನೀಡುತ್ತಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕಕ್ಕಿಂತ ಸುಮಾರು 470ರಷ್ಟು ಹೆಚ್ಚಾಗಿದೆ. 1,644 ಗ್ರಾಹಕರು 12 ತಿಂಗಳ (ಟಿಟಿಎಂ) ಆದಾಯದಲ್ಲಿ 1,00,000 ಡಾಲರ್ಗಿಂದ ಹೆಚ್ಚಿನ ಕೊಡುಗೆ ನೀಡುತ್ತಿದ್ದಾರೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕಕ್ಕಿಂತ ಸುಮಾರು ಶೇ 156ರಷ್ಟು ಹೆಚ್ಚಾಗಿದೆ ಎಂದು ಹೇಳಿದೆ.
ನಾವು 2022ರ ಹಣಕಾಸು ವರ್ಷಕ್ಕೆ ಪ್ರವೇಶಿಸುತ್ತಿದ್ದಂತೆ ನಮ್ಮ ನವೀನ ವಿಡಿಯೋ ಸಂವಹನ ಪ್ಲಾಟ್ಫಾರ್ಮ್ನಲ್ಲಿ ಬಲವಾದ ಬೆಳವಣಿಗೆಯ ಉತ್ತಮ ಸ್ಥಾನದಲ್ಲಿ ಇರಲಿದ್ದೇವೆ. ಈ ಬೆಳವಣಿಗೆಯ ಮೇಲೆ ನಮ್ಮ ಗ್ರಾಹಕರು ತಮ್ಮ ವ್ಯವಹಾರಗಳನ್ನು ನಡೆಸಬಹುದು ಎಂದಿದೆ.
ಇದನ್ನೂ ಓದಿ: ಮುಂಬೈನಲ್ಲಿ ಗೂಳಿಯ ನಾಗಾಲೋಟ: 190 ಅಂಕ ಜಿಗಿದ ಸೆನ್ಸೆಕ್ಸ್
2021ರ ಪೂರ್ಣ ಹಣಕಾಸು ವರ್ಷದಲ್ಲಿ ಒಟ್ಟು ಆದಾಯವು 2,651.4 ಮಿಲಿಯನ್ ಡಾಲರ್ ಆಗಿದ್ದು, ಇದು ಕಳೆದ ವರ್ಷಕ್ಕಿಂತ ಶೇ 326ರಷ್ಟು ಹೆಚ್ಚಾಗಿದೆ. 2022ರ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಒಟ್ಟು ಆದಾಯವು 900 ದಶಲಕ್ಷ ಡಾಲರ್ನಿಂದ 905 ದಶಲಕ್ಷ ಡಾಲರ್ ತನಕ ಇರಬಹುದು ಎಂದು ಝೂಮ್ ಅಂದಾಜಿಸಿದೆ.