ETV Bharat / business

ಯೆಸ್​ ಬ್ಯಾಂಕ್ ಬಿಕ್ಕಟ್ಟಿನ ವಹಿವಾಟಿನ ನಿರ್ಬಂಧ ವಾರದೊಳಗೆ ಶಮನ: SBI ಅಧ್ಯಕ್ಷ

ಬ್ಯಾಂಕ್​ನಲ್ಲಿರುವ ಗ್ರಾಹಕರ ಠೇವಣಿಯು ಸುರಕ್ಷಿತವಾಗಿರಲಿದೆ ಎಂದು ಭರವಸೆ ನೀಡಿದ ಕುಮಾರ್, ಒಮ್ಮೆ ಸರ್ಕಾರಿ ಸ್ವಾಮ್ಯದವರು ಹೆಜ್ಜೆ ಹಾಕಿದರೆ ಹಣಕಾಸಿನ ವ್ಯವಸ್ಥೆಯು ಉತ್ತಮವಾಗಿರುವುದರಿಂದ ಹಣದ ಬಗ್ಗೆ ಯಾರೂ ಚಿಂತಿಸಬಾರದು ಎಂದು ತಿಳಿಸಿದ್ದಾರೆ.

Yes Bank
ಯೆಸ್ ಬ್ಯಾಂಕ್
author img

By

Published : Mar 9, 2020, 11:54 PM IST

ನವದೆಹಲಿ : ಯೆಸ್​ ಬ್ಯಾಂಕ್​ ಮೇಲೆ ಹೇರಿದ ನಿಷೇಧವನ್ನು ಒಂದು ವಾರದೊಳಗೆ ತೆಗೆದು ಹಾಕಬಹುದು. ಬ್ಯಾಂಕ್ ಠೇವಣಿದಾರರು ಎದುರಿಸುತ್ತಿರುವ ಅನಾನುಕೂಲತೆ ಮತ್ತು ಅನಿಶ್ಚಿತತೆ ಬಗೆಹರಿಯಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.

ಬ್ಯಾಂಕ್​ನಲ್ಲಿರುವ ಗ್ರಾಹಕರ ಠೇವಣಿಯು ಸುರಕ್ಷಿತವಾಗಿರಲಿದೆ ಎಂದು ಭರವಸೆ ನೀಡಿದ ಕುಮಾರ್, ಒಮ್ಮೆ ಸರ್ಕಾರಿ ಸ್ವಾಮ್ಯದವರು ಹೆಜ್ಜೆ ಹಾಕಿದರೆ ಹಣಕಾಸಿನ ವ್ಯವಸ್ಥೆಯು ಉತ್ತಮವಾಗಿರುವುದರಿಂದ ಹಣದ ಬಗ್ಗೆ ಯಾರೂ ಚಿಂತಿಸಬಾರದು ಎಂದು ತಿಳಿಸಿದ್ದಾರೆ. ಎಸ್‌ಬಿಐ ಪ್ರವೇಶದೊಂದಿಗೆ ಯೆಸ್ ಬ್ಯಾಂಕ್‌ಗೆ ಎಂದಿನಂತೆ ವ್ಯವಹಾರವಾಗಲಿದೆ ಎಂದು ಕುಮಾರ್ ಠೇವಣಿದಾರರಿಗೆ ಭರವಸೆ ನೀಡಿದರು.

ಠೇವಣಿದಾರರು ಮತ್ತು ಹೂಡಿಕೆದಾರರು ಬ್ಯಾಂಕಿನ ಭವಿಷ್ಯ ಹಾಗೂ ಅದರ ಬಂಡವಾಳದ ಸಮರ್ಪಕತೆಯ ಬಗ್ಗೆ ಕಾಳಜಿ ವಹಿಸುತ್ತಿರುವ ನಡುವೆಯೇ ರಜಿನೀಶ್ ಅವರ ಈ ಹೇಳಿಕೆ ಮಹತ್ವ ಪಡೆದಿದೆ. ಹಣಕಾಸಿನ ಬಿಕ್ಕಟ್ಟಿನಿಂದ ಬಳಲುತ್ತಿರುವ ಖಾಸಗಿ ಸಾಲಗಾರ ಬ್ಯಾಂಕ್​ಗೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಕರಡು ಪುನರ್ನಿರ್ಮಾಣ ಯೋಜನೆಯ ರೂಪಿಸಿದೆ. ಎಸ್‌ಬಿಐ ಬ್ಯಾಂಕಿನಲ್ಲಿ ಶೇ. 49ರಷ್ಟು ಬಂಡವಾಳ ತೆಗೆದುಕೊಳ್ಳಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.