ETV Bharat / business

ಅಡುಗೆ ಮನೆಯಲ್ಲಿ ಬಳಸಿದ ಎಣ್ಣೆಯಿಂದಲೂ ಓಡಲಿವೆ ಕಾರು, ಬೈಕ್​... ಹೇಗೆ ಗೊತ್ತೆ?

ವಿಶ್ವ ಜೈವಿಕ ಇಂಧನ ದಿನಾಚರಣೆ ನಿಮಿತ್ತ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಜಂಟಿಯಾಗಿ ದೇಶದ ಪ್ರಮುಖ 100 ನಗರಗಳಲ್ಲಿ ಬಳಸಿದ ಅಡುಗೆ ಎಣ್ಣೆಯಿಂದ (ಯುಸಿಒ) ಜೈವಿಕ ಡೀಸೆಲ್ ಖರೀದಿಸಲು ಆಸಕ್ತಿಯ ಅಭಿಪ್ರಾಯಗಳನ್ನು ಆಹ್ವಾನಿಸುವ (ಇಒಐಎಸ್​) ಪ್ರಕ್ರಿಯೆಗೆ ಚಾಲನೆ ನೀಡಿವೆ.

author img

By

Published : Aug 10, 2019, 8:25 PM IST

ಸಾಂದರ್ಭಿಕ ಚಿತ್ರ

ನವದೆಹಲಿ: ಭಾರತ ಭವಿಷ್ಯದಲ್ಲಿ ತೈಲ ಆಮದನ್ನು ಕಡಿಮೆಗೊಳಿಸಿ ತನ್ನ ರಾಷ್ಟ್ರದಲ್ಲಿನ ಅಡುಗೆ ಮನೆಗಳಿಂದ ದೊಡ್ಡ ಪ್ರಮಾಣದಲ್ಲಿ ಇಂಧನವನ್ನು ತರಿಸಿಕೊಳ್ಳಲು ಸಜ್ಜಾಗುತ್ತಿದೆ.

ವಿಶ್ವ ಜೈವಿಕ ಇಂಧನ ದಿನಾಚರಣೆಯ ನಿಮಿತ್ತ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಜಂಟಿಯಾಗಿ ದೇಶದ ಪ್ರಮುಖ 100 ನಗರಗಳಲ್ಲಿ ಬಳಸಿದ ಅಡುಗೆ ಎಣ್ಣೆಯಿಂದ (ಯುಸಿಒ) ಜೈವಿಕ ಡೀಸೆಲ್ ಖರೀದಿಸಲು ಆಸಕ್ತಿಯ ಅಭಿಪ್ರಾಯಗಳನ್ನು ಆಹ್ವಾನಿಸುವ (ಇಒಐಎಸ್​) ಪ್ರಕ್ರಿಯೆಗೆ ಚಾಲನೆ ನೀಡಿವೆ.

ಮೇ ತಿಂಗಳಲ್ಲಿನ ಜೈವಿಕ ಇಂಧನದ ಚಿಲ್ಲರೆ ನೀತಿಯ ಅಧಿಸೂಚನೆ ಹೊರಬಿದ್ದ ಬಳಿಕ ಮೆಕ್​ಡೋನಾಲ್ಡ್ಸ್, ಕೆಎಫ್‌ಸಿ, ಬರ್ಗರ್ ಕಿಂಗ್ ಮತ್ತು ಹಲ್ದಿರಾಮ್ ಸೇರಿದಂತೆ ಹಲವು ಆಹಾರ ಸರಬರಾಜು ಕಂಪನಿಗಳು ಜೈವಿಕ ಇಂಧನ ಸಂಸ್ಥೆಗಳಿಗೆ ಬಳಸಿದ ಎಣ್ಣೆ ಸರಬರಾಜು ಮಾಡಲು ಆರಂಭಿಸಿವೆ.

ಆಯ್ಕೆ ಮಾಡಿಕೊಂಡ ನಗರಗಳಲ್ಲಿನ ರೆಸ್ಟೋರೆಂಟ್‌, ಸ್ಥಳೀಯ ಹೋಟೆಲ್‌ ಮತ್ತು ಕ್ಯಾಂಟೀನ್‌ಗಳ ಮೂಲಕ ಎಣ್ಣೆ ಸಂಗ್ರಹಿಸುವುದನ್ನು ಇಒಐಎಸ್​ ಖಚಿತಪಡಿಸಿದೆ. 2030ರ ವೇಳೆಗೆ ದೇಶದ ಕಚ್ಚಾ ತೈಲ ಆಮದು ಪ್ರಮಾಣ ತಗ್ಗಿಸಲು ಹೈ- ಸ್ಪೀಡ್ ಡೀಸೆಲ್​ನಲ್ಲಿ (ಎಚ್‌ಎಸ್‌ಡಿ) ಜೈವಿಕ ಡೀಸೆಲ್ ಅನ್ನು ಶೇ 5ರಷ್ಟು ಮಿಶ್ರಣ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಇರಿಸಿಕೊಂಡಿದೆ.

ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಕೋಶದ (ಪಿಪಿಎಸಿ) ಇತ್ತೀಚಿನ ಮಾಹಿತಿ ಅನ್ವಯ, 2018-19ರಲ್ಲಿ 112 ಬಿಲಿಯನ್​ ಡಾಲರ್​ನಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳಲಾಗಿತ್ತು. 2017-18ರಲ್ಲಿ ಇದು 87.8 ಬಿಲಿಯನ್ ಡಾಲರ್​ನಷ್ಟಿದ್ದು, ಶೇ 28ರಷ್ಟು ಹೆಚ್ಚಳವಾಗಿದೆ. ಪ್ರಸ್ತುತ ಭಾರತದಲ್ಲಿ ಪ್ರತಿ ತಿಂಗಳು ಸರಾಸರಿ 8.50 ಬಿಲಿಯನ್ ಲೀಟರ್ ಡೀಸೆಲ್ ಬಳಸಲಾಗುತ್ತಿದೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.