ನವದೆಹಲಿ: ಸಾಧನೆಯ ಕನಸನ್ನು ನನಸಾಗಿಸಿಕೊಳ್ಳಲು ಬಡತವ ಅಡ್ಡಿಯಲ್ಲ. ಆತ್ಮಸ್ಥೈರ್ಯ ಇದ್ದಾಗ ಎದುರಾದ ಸವಾಲುಗಳನ್ನು ಅವಕಾಶಗಳಾಗಿ ಬಳಸಿಕೊಂಡು ಬೆಳೆಯಲ್ಲ ಸಾಧ್ಯ ಎನ್ನುವುದನ್ನು ಉದ್ಯಮಿ ಜೇ ಚೌದರಿ ತೋರಿಸಿಕೊಟ್ಟಿದ್ದಾರೆ.
ಇದುವರೆಗಿನ ನನ್ನ ಯಶಸ್ಸಿಗೆ ಬಹುಮುಖ್ಯ ಕಾರಣವೆಂದರೇ ನನಗೆ ಹಣದ ಬಗ್ಗೆ ಬಹಳ ಕಡಿಮೆ ಬಾಂಧವ್ಯವಿದೆ. ಪ್ರತಿಯೊಬ್ಬರೂ ವ್ಯಾಪಾರ ಮಾಡಲು ಇಂಟರ್ನೆಟ್ ಮತ್ತು ಕ್ಲೌಡ್ ಸುರಕ್ಷಿತ ತಾಣವೆಂಬುದನ್ನು ಖಾತರಿಪಡಿಸಿಕೊಳ್ಳುವುದು ನನ್ನ ಗೀಳು. ಇದೇ ನನ್ನ ಯಶಸ್ಸು ಎನ್ನುವ ಚೌದರಿ ಜನಿಸಿದ್ದು ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪನೋಹ್ ಎಂಬ ಹಳ್ಳಿಯಲ್ಲಿ.
ಸೌಕರ್ಯಗಳಿಂದ ವಂಚಿತವಾದ ಪನೋಹ್ ಹಳ್ಳಿಯಲ್ಲಿ ಕನಿಷ್ಠ ವಿದ್ಯುತ್ ಸಂಪರ್ಕವೂ ಇರಲಿಲ್ಲ. ನಿತ್ಯ ಮರದ ಕೆಳಗೆ ಕುಳಿತುಕೊಂಡು ಅಭ್ಯಾಸ ಮಾಡುತ್ತಿದ್ದರು. ಚಿಕ್ಕವ ವಯಸ್ಸಿನಲ್ಲಿ ಅವರ ತಂದೆ ತೀರಿಕೊಂಡರು. ಆತನ ತಾಯಿ ಚೌದರಿಯನ್ನು ಕಷ್ಟಪಟ್ಟು ಓದಿಸಿ, ಇಂದು ಸೈಬರ್ ಸೆಕ್ಯೂರಿಟಿ ಉದ್ಯಮದಲ್ಲಿ ಆತನನ್ನು ಅದ್ವಿತೀಯ ಉದ್ಯಮಿಯನ್ನಾಗಿಸಿದ್ದಾರೆ.
ಸೈಬರ್ ಸೆಕ್ಯುರಿಟಿ ಸಂಸ್ಥೆ ಝಡ್ಸ್ಕೇಲರ್ ಮಾಲೀಕ ಜೇ ಚೌಧರಿ ಅವರು ಹುರುನ್ ಗ್ಲೋಬಲ್ ರಿಚ್ ಲಿಸ್ಟ್ 2021ರಲ್ಲಿ 577ನೇ ಸ್ಥಾನ ಪಡೆದಿದ್ದಾರೆ. ಭಾರತದ ಅಗ್ರ ಹತ್ತು ಶ್ರೀಮಂತರಲ್ಲಿ ಇವರೂ ಒಬ್ಬರಾಗಿದ್ದಾರೆ. ಚೌಧರಿ ಮತ್ತು ಅವರ ಕುಟುಂಬವು ನಾಸ್ಡಾಕ್ ಪಟ್ಟಿ ಮಾಡಿದ ಝಡ್ಡ್ಸ್ಕೇಲರ್ನ ಶೇ 45ರಷ್ಟು ಪಾಲು ಹೊಂದಿದ್ದು, ಇದು ಇಂದು 28 ಬಿಲಿಯನ್ ಡಾಲರ್ ಮೌಲ್ಯದ್ದಾಗಿದೆ.
ಇದನ್ನೂ ಓದಿ: ಎಂಜಿನಿಯರಿಂಗ್ ಫ್ರೆಶರ್ಗಳಿಗೆ ಗುಡ್ ನ್ಯೂಸ್.. ಪೇಪಾಲ್ ಸೇರಲು ಈಗಲೇ ರೆಸ್ಯೂಮ್ ಸಿದ್ಧಪಡಿಸಿ
ಹುರುನ್ ಪಟ್ಟಿಯ ಅಧ್ಯಯನದ ಪ್ರಕಾರ, ಚೌಧರಿ ಅವರ ನಿವ್ವಳ ಮೌಲ್ಯವು ಕಳೆದ ವರ್ಷ ಶೇ 271ರಷ್ಟು ಹೆಚ್ಚಳವಾಗಿ 13 ಬಿಲಿಯನ್ ಡಾಲರ್‌ಗಳಿಗೆ ತಲುಪಿದೆ. ಕೋವಿಡ್-19 ಸಾಂಕ್ರಾಮಿಕದಿಂದ ಝೂಮ್‌ನಂತಹ ವಿಡಿಯೋ ಕಾನ್ಫರೆನ್ಸಿಂಗ್ ಅಪ್ಲಿಕೇಷನ್‌ಗಳು ಅಥವಾ ನೆಟ್‌ಫ್ಲಿಕ್ಸ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳು ಡಿಜಿಟಲ್ ತಂತ್ರಜ್ಞಾನ ವೇಗವಾಗಿ ಅಳವಡಿಸಿಕೊಳ್ಳುವುದು ಚೌಧರಿ ಕಂಪನಿಗೆ ಸಾಕಷ್ಟು ನೆರವಾಯಿತು.
2021ರ ಎರಡನೇ ತ್ರೈಮಾಸಿಕದಲ್ಲಿ ಝಡ್ಸ್ಕೇಲರ್ನ ಆದಾಯ 157 ಮಿಲಿಯನ್ ಡಾಲರ್ಗೆ ತಲುಪಿ, ಸತತವಾಗಿ ಶೇ 10ರಷ್ಟು ಮತ್ತು ವರ್ಷದಿಂದ ವರ್ಷಕ್ಕೆ ಶೇ 55ರಷ್ಟು ಹೆಚ್ಚಾಗಿದೆ. ಕಂಪನಿಯು 5,000 ಗ್ರಾಹಕರನ್ನು ಹೊಂದಿದ್ದು, 2,600ಕ್ಕೂ ಅಧಿಕ ಉದ್ಯೋಗಿಗಳು ಇದ್ದಾರೆ.
ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಪನೋಹ್ ಎಂಬ ಹಿಮಾಲಯನ್ ತಪ್ಪಲಿನ ಗ್ರಾಮದಲ್ಲಿ ಬೆಳೆದೆ. ನಮ್ಮ ಮನೆಯಲ್ಲಿ ವಿದ್ಯುತ್ ಸಂಪರ್ಕವಿರಲಿಲ್ಲ. ಮರಗಳ ಕೆಳಗೆ ಕುಳಿತು ಓದುತ್ತಿದ್ದೆ. ಸದಾ ನೆರೆಯ ಹಳ್ಳಿಯಾದ ಧುಸಾರದಲ್ಲಿ ಇರುವ ನನ್ನ ಪ್ರೌಢ ಶಾಲೆಯಲ್ಲಿ ವ್ಯಾಸಂಗ ಮಾಡಲು ನಾನು ನಿತ್ಯ 4 ಕಿ.ಮೀ ನಡೆದುಕೊಂಡು ಹೋಗುತ್ತಿದ್ದೆ ಎಂದು ಕೆಲವು ವರ್ಷಗಳ ಹಿಂದೆ ಟ್ರಿಬ್ಯೂನ್‌ಗೆ ನೀಡಿದ ಸಂದರ್ಶನದಲ್ಲಿ ಚೌಧರಿ ಹೇಳಿಕೊಂಡಿದ್ದರು.