ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಗ್ರಾಹಕರು ಮತ್ತು ಚಿಲ್ಲರೆ ವ್ಯಾಪಾರಿಗಳು ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ವೊಡಾಫೋನ್- ಐಡಿಯಾ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಧ್ವನಿ ಆಧಾರಿತ ಸಂಪರ್ಕವಿಲ್ಲದ ರೀಚಾರ್ಜ್ ಸೇವೆ ಸೌಲಭ್ಯವನ್ನು ಪ್ರಕಟಿಸಿದೆ.
ಕಿತ್ತಳೆ ಮತ್ತು ಹಸಿರು ವಲಯಗಳಲ್ಲಿನ ಚಿಲ್ಲರೆ ಮಾರಾಟ ಮಳಿಗೆಗಳು ತೆರೆಯಲು ಆರಂಭಿಸುತ್ತಿದ್ದಂತೆ, ವೊಡಾಫೋನ್- ಐಡಿಯಾ ತನ್ನ ಮಳಿಗೆಗಳಲ್ಲಿ ಸಾಮಾಜಿಕ ಅಂತರ ಪ್ರೋಟೋಕಾಲ್ ಅನ್ನು ಕ್ರಮಬದ್ಧವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕ ಅಥವಾ ಚಿಲ್ಲರೆ ವ್ಯಾಪಾರಿ ಹತ್ತು ಅಂಕಿಯ ಮೊಬೈಲ್ ಸಂಖ್ಯೆಯನ್ನು ಮೆಲು ಧ್ವನಿಯಲ್ಲಿ ನೀಡಬಹುದು. ಗೂಗಲ್ ಧ್ವನಿ ಬೆಂಬಲಿತ ವೈಶಿಷ್ಟ್ಯವು ಈ ಆಜ್ಞೆಯನ್ನು ಹತ್ತು ಅಡಿಗಳ ಅಂತರದಿಂದ ಸೆರೆಹಿಡಿಯುತ್ತದೆ. ಸಂಪರ್ಕವಿಲ್ಲದ ರೀಚಾರ್ಜ್‌ಗಳಿಗೆ ಸ್ಮಾರ್ಟ್ ಕನೆಕ್ಟ್ ಅನ್ನು ಧ್ವನಿ ಆಧಾರಿತ ರೀಚಾರ್ಜ್ ವೈಶಿಷ್ಟ್ಯದ ಜತೆ ಜೋಡಿಸಲಾಗಿದೆ. ಎಲ್ಲ ವೊಡಾಫೋನ್- ಐಡಿಯಾ ಮಳಿಗೆಗಳು ಮತ್ತು ಮಲ್ಟಿ ಬ್ರಾಂಡ್ ಮಳಿಗೆಗಳಲ್ಲಿ ಈ ಸೇವೆ ಲಭ್ಯವಿದೆ ಎಂದು ಮಾಹಿತಿ ನೀಡಿದೆ.