ಲಂಡನ್: ಸಾವಿರಾರು ಕೋಟಿ ವಂಚಿಸಿ ಇಂಗ್ಲೆಂಡ್ನಲ್ಲಿ ತಲೆ ಮರಿಸಿಕೊಂಡಿರುವ ಮದ್ಯದ ಉದ್ಯಮಿ ವಿಜಯ್ ಮಲ್ಯ ವಿರುದ್ಧ ಎಸ್ಬಿಐ ನೇತೃತ್ವದಲ್ಲಿ ಭಾರತೀಯ ಬ್ಯಾಂಕ್ಗಳ ಒಕ್ಕೂಟ ಸಾಲ ಮರುಪಾವತಿಗೆ ಮತ್ತೊಂದು ಸುತ್ತಿನ ಕಾನೂನು ಸಮರ ಸಾರಿವೆ.
ಇಂಗ್ಲೆಂಡ್ ಬ್ಯಾಂಕ್ ಖಾತೆಯಲ್ಲಿರುವ ಮಲ್ಯನಿಗೆ ಸಂಬಂಧಿಸಿದ 2.60 ಲಕ್ಷ ಪೌಂಡ್ ( ₹ 2.34 ಕೋಟಿ) ಪಡೆದ ಸಾಲಕ್ಕೆ ಪ್ರತಿಯಾಗಿ ತಮಗೆ ನೀಡುವಂತೆ ಇಲ್ಲಿನ ಸ್ಥಳೀಯ ಕೋರ್ಟ್ಗೆ ಮನವಿ ಮಾಡಿವೆ.
ಭಾರತೀಯ ಬ್ಯಾಂಕುಗಳು ಈ ವರ್ಷದ ಜನವರಿಯಲ್ಲಿ ಮಧ್ಯಂತರ ಸಾಲ ಆದೇಶ ಪಡೆದಿವೆ. ಈ ಹಣ ಹಿಂದೆ ಕಿಂಗ್ಫಿಶರ್ ಏರ್ಲೈನ್ಸ್ ಮುಖ್ಯಸ್ಥರಾಗಿದ್ದಾಗ ಸಂಬಂಧಿಸಿದ್ದು, ಪ್ರಸ್ತುತ ಲಂಡನ್ನಲ್ಲಿರುವ ಐಸಿಐಸಿಐ ಬ್ಯಾಂಕ್ ಖಾತೆಯಲ್ಲಿ ಮಲ್ಯ ಇರಿಸಿದ್ದಾರೆ.
ನ್ಯಾಯಾಲಯದ ಕ್ವೀನ್ಸ್ ಬೆಂಚ್ ವಿಭಾಗದ ಮಾಸ್ಟರ್ ಡೇವಿಡ್ ಕುಕ್ ಅವರು ಮೊದಲ ವಿಚಾರಣೆಯಲ್ಲಿ ಮಲ್ಯ ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಂತರ ಆದೇಶದಲ್ಲಿ ವಜಾಗೊಳಿಸಿದರು. ಈ ಪ್ರಕರಣಕ್ಕೆ ಸಂಬಂಧಿಸಿದ ತೀರ್ಪು ಮುಂದಿನ ದಿನಗಳಲ್ಲಿ ಬರಲಿದೆ ಎಂದು ನಿರೀಕ್ಷಿಸಲಾಗುತ್ತಿದೆ.
ಜನವರಿ ತಿಂಗಳಲ್ಲಿ ಬ್ಯಾಂಕ್ಗಳು ಪಡೆದ ಕೋರ್ಟ್ನ ಮಧ್ಯಂತರ ಆದೇಶದ ಅನ್ವಯ, ಮಲ್ಯ ಲಂಡನ್ನಲ್ಲಿರುವ ಐಸಿಐಸಿಐ ಖಾತೆಯಲ್ಲಿ 260,000 ಪೌಂಡ್ಗಳಷ್ಟು ಹಣವಿದೆ ಎಂದು ಟಿಎಲ್ಟಿ ಎಲ್ಎಲ್ಪಿ ವಕ್ತಾರ ಭಾರತೀಯ ಬ್ಯಾಂಕ್ಗಳಿಗೆ ಮಾಹಿತಿ ನೀಡಿದ್ದಾರೆ.
ಎಸ್ಬಿಐ ಸೇರೆ ಇತರೆ 12 ಭಾರತೀಯ ಬ್ಯಾಂಕ್ಗಳಾದ ಬ್ಯಾಂಕ್ ಆಫ್ ಬರೋಡಾ, ಕಾರ್ಪೊರೇಷನ್ ಬ್ಯಾಂಕ್, ಫೆಡರಲ್ ಬ್ಯಾಂಕ್ ಲಿಮಿಟೆಡ್, ಐಡಿಬಿಐ ಬ್ಯಾಂಕ್, ಇಂಡಿಯನ್ ಓವರ್ ಸೀಸ್ ಬ್ಯಾಂಕ್, ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್, ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಯುಕೋ ಬ್ಯಾಂಕ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಜೆಎಂ ಫೈನಾನ್ಸಿಯಲ್ ಅಸೆಟ್ ರೀಕನ್ಸ್ಟ್ರಕ್ಷನ್ ಕೋ- ಪ್ರೈವೇಟ್ ಲಿಮಿಟೆಡ್ ಇಂಗ್ಲೆಂಡ್ ಕೋರ್ಟ್ಗೆ ಕೋರಿವೆ.