ETV Bharat / business

ಇನ್ಮುಂದೆ ಗ್ರಾಹಕನಿಗೆ ತಲೆಬಿಸಿ.....! ವೈರತ್ವ ಮರೆತು ಡೇಟಾ, ಕಾಲ್ ದರ ಏರಿಕೆಗೆ ಒಂದಾದ ಜಿಯೋ, ಏರ್​ಟೆಲ್​, ವೋಡಾ - ಐಡಿಯಾ..!

author img

By

Published : Nov 21, 2019, 7:48 PM IST

ಮೊಬೈಲ್​ ಡೇಟಾ ಹಾಗೂ ಕರೆ ದರ ಹೆಚ್ಚಳದಿಂದ ಉದ್ಯಮದ ಮೇಲಿದ್ದ ಒತ್ತಡವು ಕಡಿಮೆಯಾಗಲಿದೆ. ಸ್ಪರ್ಧಾತ್ಮಕ ಪೈಪೋಟಿ ಕಂಡುಬರಲಿದೆ ಎಂದು ಸೆಲ್ಯುಲಾರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಸಿಒಎಐ) ಡಿಜಿ ರಾಜನ್ ಮ್ಯಾಥ್ಯುಸ್​ ಹೇಳಿದರು. ಈ ಹಿಂದೆ ಇದೇ ಮ್ಯಾಥ್ಯುಸ್ 'ಟೆಲಿಕಾಂ ವಲಯವು ಬಿಕ್ಕಟ್ಟು ಎದುರಿಸುತ್ತಿದೆ. ಇದಕ್ಕೆ ಜಿಯೋದ ದರ ನೀತಿ ಕಾರಣ ಎಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ಇದರ ವಿರುದ್ಧ ರಿಲಯನ್ಸ್‌ ಜಿಯೊ ಕಟುವಾಗಿ ಟೀಕಿಸಿ ಕೋರ್ಟ್‌ ಮೆಟ್ಟಿಲೇರುವುದಾಗಿಯೂ ಎಚ್ಚರಿಸಿತ್ತು.

ಕಾಲ್ ದರ

ನವದೆಹಲಿ: ಟೆಲಿಕಾಂ ಕಂಪನಿಗಳನ್ನು ಪ್ರತಿನಿಧಿಸುವ ಸಂಘಟನೆ ಸೆಲ್ಯುಲಾರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಸಿಒಎಐ) ಸದಸ್ಯರಾದ ಭಾರ್ತಿ ಏರ್​ಟೆಲ್, ವೋಡಾಫೋನ್​ ಮತ್ತು ರಿಲಯನ್ಸ್​ ಜಿಯೋ ಒಗ್ಗೂಡಿದ್ದು, ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದ್ದ ಟೆಲಿಕಾಂ ವಲಯದ ಸ್ಪೆಕ್ಟ್ರಮ್​ ಹಣ ಪಾವತಿ ನಿವಾರಣೆ ಆಗಲಿದೆ ಜೊತೆಗೆ ಈ ವಲಯವು ಸಾಲ ಮುಕ್ತವಾಗಲಿದೆ ಎಂದು ಹೇಳಿದೆ.

ಸೆಲ್ಯುಲಾರ್‌ ಆಪರೇಟರ್ಸ್‌ ಅಸೋಸಿಯೇಷನ್‌ ಆಫ್‌ ಇಂಡಿಯಾದ (ಸಿಒಎಐ) ಡಿಜಿ ರಾಜನ್ ಮ್ಯಾಥ್ಯುಸ್​ ಮಾತನಾಡಿ, ಮೊಬೈಲ್​ ಡೇಟಾ ಹಾಗೂ ಕರೆ ದರ ಹೆಚ್ಚಳದಿಂದ ಉದ್ಯಮದ ಮೇಲಿದ್ದ ಒತ್ತಡವು ಕಡಿಮೆಯಾಗಲಿದೆ. ಸ್ಪರ್ಧಾತ್ಮಕ ಪೈಪೋಟಿ ಕಂಡುಬರಲಿದೆ ಎಂದು ಹೇಳಿದರು.

ಕಳೆದ ಎರಡು ವರ್ಷಗಳಲ್ಲಿ ಉದ್ಭವವಾಗಿದ್ದ ಸ್ಪೆಕ್ಟ್ರಮ್​ ಹಣ ಪಾವತಿ, ದರ ಏರಿಕೆಯ ಪ್ರಸ್ತವಾನೆ ಹಾಗೂ ಒಟ್ಟು ನಿವ್ವಳ ಆದಾಯ ಅಡೆಚಣೆಗಳು ದೂರಾಗಲಿವೆ. ಇದು ಟೆಲಿಕಾಂ ವಲಯದ ಮರುಪ್ರಗತಿಗೆ ಸಹಾಯಕವಾಗಲಿದೆ ಎಂದರು.

ವೈರಿಯಂತೆ ಕಾದಾಡಿದ್ದ ಸಿಒಎಐ- ಜಿಯೋ

ಟೆಲಿಕಾಂ ವಲಯವು ಬಿಕ್ಕಟ್ಟು ಎದುರಿಸುತ್ತಿದೆ ಎಂದು ಸಿಒಎಐ ಕೇಂದ್ರ ಸರ್ಕಾರಕ್ಕೆ ಈ ಹಿಂದೆ ಪತ್ರ ಬರೆದಿತ್ತು. ಇದರ ವಿರುದ್ಧ ರಿಲಯನ್ಸ್‌ ಜಿಯೊ ಕಟುವಾಗಿ ಟೀಕಿಸಿ ಕೋರ್ಟ್‌ ಮೆಟ್ಟಿಲೇರುವುದಾಗಿಯೂ ಎಚ್ಚರಿಸಿತ್ತು. ಈ ಪತ್ರ ಬರೆಯಲು ಸಿಒಎಐ ನಮ್ಮ ಅಭಿಪ್ರಾಯ ಕೇಳಿಲ್ಲ. ಇದು ಪ್ರಚಾರಕ್ಕಾಗಿ ಬರೆದ ಪತ್ರವಾಗಿದೆ. ಇದರಲ್ಲಿ ಎಳ್ಳಷ್ಟು ಸತ್ಯಾಂಶವಿಲ್ಲ ಎಂದು ಜಿಯೋ ಸಂಸ್ಥೆ ಸಿಒಎಐಗೆ ತಪಾರಕಿ ಹಾಕಿತ್ತು. ಈಗ ಎಲ್ಲ ಸದಸ್ಯ ಕಂಪನಿಗಳು ಒಗ್ಗೂಡಿ ದರ ಏರಿಕೆಗೆ ಮುಂದಾಗಿವೆ.

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.