ETV Bharat / business

ರೈಲ್ವೆ ಟಿಕೆಟ್​​​ ಶುಲ್ಕದಲ್ಲಿ ಬದಲಾವಣೆ: ಹಿರಿಯ ನಾಗರಿಕರಿಗಿಲ್ಲ ವಿನಾಯತಿ

author img

By

Published : May 11, 2020, 9:46 PM IST

ಲಾಕ್​ಡೌನ್​ ವೇಳೆ ಆಯ್ದ ಮಾರ್ಗಗಳಲ್ಲಿ ಸಂಚರಿಸುತ್ತಿರುವ ರೈಲ್ವೆ ಟಿಕೆಟ್ ಶುಲ್ಕ ರಿಯಾಯಿತಿಯನ್ನು ರೋಗಿಗಳು, ವಿದ್ಯಾರ್ಥಿಗಳು ಮತ್ತು ವಿಕಲಚೇತನರು ಮಾತ್ರ ಪಡೆಯಬಹುದು. ಹಿರಿಯ ನಾಗರಿಕರಿಗೆ ಯಾವುದೇ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದು ರೈಲ್ವೆ ಇಲಾಖೆ ಸ್ಪಷ್ಟಪಡಿಸಿದೆ.

Indian Railway
ಭಾರತೀಯ ರೈಲ್ವೆ

ನವದೆಹಲಿ: ಕೊರೊನಾ ವೈರಸ್​ ಪ್ರೇರಿತ ಮೂರನೇ ಹಂತದ ಲಾಕ್‌ಡೌನ್​ ತೆರವಿನ ಅಂತ್ಯದಲ್ಲಿ ಮೇ 12ರಿಂದ ಆಯ್ದ ಮಾರ್ಗಗಳಲ್ಲಿ ಪ್ರಯಾಣಿಕ ರೈಲ್ವೆ ಸಂಚಾರ ಪುನರಾರಂಭಿಸುವುದಾಗಿ ಭಾರತೀಯ ರೈಲ್ವೆ ಇಲಾಖೆ ಈಗಾಗಲೇ ಘೋಷಿಸಿದೆ. ಜೊತೆಗೆ ಐಆರ್‌ಸಿಟಿಸಿ ವೆಬ್‌ಸೈಟ್‌ನಲ್ಲಿ ಟಿಕೆಟ್‌ ಬುಕ್ಕಿಂಗ್​ ಸಂಜೆ 4ರಿಂದ ಶುರುವಾಗಿದೆ.

ಈ ನಡುವೆ ರೈಲ್ವೆ ಇಲಾಖೆಯು ಮತ್ತೊಂದು ಪ್ರಕಟಣೆ ಹೊರಡಿಸಿದೆ. ರೈಲ್ವೆ ಟಿಕೆಟ್ ಶುಲ್ಕ ರಿಯಾಯಿತಿಯನ್ನು ರೋಗಿಗಳು, ವಿದ್ಯಾರ್ಥಿಗಳು ಮತ್ತು ವಿಕಲಚೇತನರು ಮಾತ್ರ ಪಡೆಯಬಹುದು. ಹಿರಿಯ ನಾಗರಿಕರಿಗೆ ಯಾವುದೇ ರಿಯಾಯಿತಿ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ವಿಶೇಷ ವಿಭಾಗಗಳಿಗೆ ಪ್ರಯಾಣಿಕರ ಮೀಸಲಾತಿ ವ್ಯವಸ್ಥೆ (ಪಿಆರ್​ಎಲ್​) ಕೌಂಟರ್‌ಗಳನ್ನು ಮೂಲ, ನಿಲುಗಡೆ ಮತ್ತು ಅಂತಿಮ ನಿಲ್ದಾಣಗಳಲ್ಲಿ ತೆರೆಯಲು ರೈಲ್ವೆ ಸಚಿವಾಲಯದ ಇತ್ತೀಚಿನ ಆದೇಶದಲ್ಲಿ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.