ETV Bharat / business

NST ಪೋಸ್ಟ್​ ಜಾರಿಯಲ್ಲಿ ಭದ್ರತೆ ಉಲ್ಲಂಘನೆಯಾದ್ರೆ ಯಾರು ಹೊಣೆಗಾರರು? ಕೇಂದ್ರಕ್ಕೆ ಟಿಲಿಕಾಂ ಸವಾಲ್! - ಟೆಲಿಕಾಂ ಕಂಪನಿಗಳು

ಎನ್‌ಎಸ್‌ಸಿಎಸ್ ವಿಶ್ವಾಸಾರ್ಹ ಉತ್ಪನ್ನಗಳ ಮಾರ್ಗದಲ್ಲಿ ಕೆಲಸ ಮಾಡಲು ಸಭೆ ಕರೆಯಲಾಯಿತು. ಟೆಲಿಕಾಂ ಸೇವಾ ಪೂರೈಕೆದಾರರ ಹಿರಿಯ ನಿಯಂತ್ರಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು, ತಮ್ಮ ಆಹ್ವಾಲುಗಳನ್ನು ನೀಡಿದರು. ಉಲ್ಲಂಘನೆಗೆ ಯಾರು ಕಾರಣರು ಎಂಬುದರ ಕುರಿತು ಸರ್ಕಾರವು ಸ್ಪಷ್ಟ ಮಾರ್ಗಸೂಚಿಗಳನ್ನು ತರಬೇಕೆಂದು ಟೆಲಿಕಾಂ ಕಂಪನಿಗಳು ಬಯಸಿವೆ..

Telcos
Telcos
author img

By

Published : Jan 23, 2021, 3:09 PM IST

ನವದೆಹಲಿ : ಟೆಲಿಕಾಂ ಕ್ಷೇತ್ರದಲ್ಲಿ ರಾಷ್ಟ್ರೀಯ ಭದ್ರತಾ ನಿರ್ದೇಶನ (ಎನ್‌ಎಸ್‌ಡಿ) ನೆಟ್​​ವರ್ಕ್​ ಜಾರಿಯಲ್ಲಿ ಭದ್ರತಾ ಉಲ್ಲಂಘನೆ ಕಂಡು ಬಂದಲ್ಲಿ ಹೊಣೆಗಾರರಾಗಿರುವ ಘಟಕದ ಬಗ್ಗೆ ಸ್ಪಷ್ಟನೆ ನೀಡುವಂತೆ ಟೆಲಿಕಾಂ ಕಂಪನಿಗಳು ಸರ್ಕಾರವನ್ನು ಕೋರಿವೆ ಎಂದು ಉದ್ಯಮದ ಮೂಲಗಳು ತಿಳಿಸಿವೆ.

ಒಂದೂವರೆ ವಾರದ ಹಿಂದೆ ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ (ಎನ್‌ಎಸ್‌ಸಿಎಸ್) ಕರೆದ ಸಭೆಯಲ್ಲಿ ಟೆಲಿಕಾಂ ಆಪರೇಟರ್‌ಗಳು ತಮ್ಮ ಇನ್ಪುಟ್‌ನ ಸರ್ಕಾರಕ್ಕೆ ನೀಡಿದ್ದಾರೆ ಎಂದು ಉದ್ಯಮದ ಮೂಲಗಳು ಸುದ್ದಿ ಸಂಸ್ಥೆಗೆ ತಿಳಿಸಿವೆ.

ಎನ್‌ಎಸ್‌ಸಿಎಸ್ ವಿಶ್ವಾಸಾರ್ಹ ಉತ್ಪನ್ನಗಳ ಮಾರ್ಗದಲ್ಲಿ ಕೆಲಸ ಮಾಡಲು ಸಭೆ ಕರೆಯಲಾಯಿತು. ಟೆಲಿಕಾಂ ಸೇವಾ ಪೂರೈಕೆದಾರರ ಹಿರಿಯ ನಿಯಂತ್ರಕ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು, ತಮ್ಮ ಆಹ್ವಾಲುಗಳನ್ನು ನೀಡಿದರು.

ಉಲ್ಲಂಘನೆಗೆ ಯಾರು ಕಾರಣರು ಎಂಬುದರ ಕುರಿತು ಸರ್ಕಾರವು ಸ್ಪಷ್ಟ ಮಾರ್ಗಸೂಚಿಗಳನ್ನು ತರಬೇಕೆಂದು ಟೆಲಿಕಾಂ ಕಂಪನಿಗಳು ಬಯಸಿವೆ. ನೆಟ್​ವರ್ಕ್​ನಲ್ಲಿ ನಿಯೋಜಿಸಬೇಕಾದ ವಿಶ್ವಾಸಾರ್ಹ ಉತ್ಪನ್ನಗಳ ಪಟ್ಟಿಯನ್ನು ಸರ್ಕಾರ ಸಿದ್ಧಪಡಿಸುತ್ತಿದೆ ಎಂದು ಖಾಸಗಿ ಆಪರೇಟರ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: 2020ರಲ್ಲಿ ದಾಖಲೆಯ 1.60 ಲಕ್ಷ ರೂ. ಮಾರುತಿ ಹ್ಯಾಚ್​ಬ್ಯಾಕ್ ಸ್ವಿಫ್ಟ್ ಮಾರಾಟ

ಪ್ರಸ್ತುತ ನಿಯಮಗಳ ಪ್ರಕಾರ, ಟೆಲಿಕಾಂ ಆಪರೇಟರ್‌ಗಳು ತಮ್ಮ ನೆಟ್‌ವರ್ಕ್‌ನಲ್ಲಿ ಯಾವುದೇ ಭದ್ರತಾ ಉಲ್ಲಂಘನೆ ಕಂಡುಬಂದಲ್ಲಿ ಅವರೇ ಜವಾಬ್ದಾರರಾಗಿರುತ್ತಾರೆ.

ಇಬ್ಬರು ಖಾಸಗಿ ಮೊಬೈಲ್ ಸೇವಾ ಪೂರೈಕೆದಾರರು ಚೀನಾದಿಂದ ಉಪಕರಣಗಳನ್ನು ನೆಟ್‌ವರ್ಕ್‌ಗಳಿಂದ ನಿರ್ಬಂಧಿಸಿದ್ರೆ ಮಾರಾಟಗಾರರಲ್ಲಿ ಬೆಲೆ ಸ್ಪರ್ಧಾತ್ಮಕತೆ ಖಾತ್ರಿಪಡಿಸಿಕೊಳ್ಳಬೇಕೆಂದು ಸರ್ಕಾರ ಬಯಸುತ್ತದೆ ಎಂದು ಮತ್ತೊಬ್ಬ ಖಾಸಗಿ ಆಪರೇಟರ್ ಪ್ರತಿನಿಧಿ ಹೇಳಿದ್ದಾರೆ.

ಆಮದು ಸುಂಕ ಕಡಿಮೆ ಮಾಡುವ ಮೂಲಕ ಬೆಲೆ ಸ್ಪರ್ಧಾತ್ಮಕತೆ ಕಾಪಾಡಿಕೊಳ್ಳಬಹುದು ಎಂದು ಸೂಚಿಸಲಾಗಿದೆ. ನೋಕಿಯಾ ಮತ್ತು ಎರಿಕ್ಸನ್ ಭಾರತದಲ್ಲಿ ಉತ್ಪಾದನೆ ಕೈಗೆತ್ತಿಕೊಳ್ಳುತ್ತಿದ್ದು, ಆಮದು ಸುಂಕದಲ್ಲಿ ಉಳಿತಾಯ ಆಗುವುದರಿಂದ ತಮ್ಮ ಟೆಲಿಕಾಂ ಬೆಲೆಗಳು ಕಡಿಮೆಯಾಗುತ್ತವೆ ಎಂದು ಸರ್ಕಾರಿ ಅಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಪ್ರತಿನಿಧಿ ಹೇಳಿದ್ದಾರೆ.

ಸಂವಹನ ಜಾಲದ ಸುರಕ್ಷತೆ ಬಿಗಿಗೊಳಿಸುವ ಉದ್ದೇಶದಿಂದ ಸರ್ಕಾರವು ಡಿಸೆಂಬರ್ 16ರಂದು ದೂರಸಂಪರ್ಕ ವಲಯದ ರಾಷ್ಟ್ರೀಯ ಭದ್ರತಾ ನಿರ್ದೇಶನ ಪ್ರಕಟಿಸಿತ್ತು. ಇದು ವಿಶ್ವಾಸಾರ್ಹ ಮೂಲಗಳಿಂದ ಉಪಕರಣಗಳನ್ನು ಖರೀದಿಸಲು ಸೇವಾ ಪೂರೈಕೆದಾರರನ್ನು ಕಡ್ಡಾಯಗೊಳಿಸುತ್ತದೆ.

ವಿಶೇಷವೆಂದ್ರೆ, ಚೀನಾದ ಟೆಲಿಕಾಂ ತಯಾರಕ ಹುವಾಯ್​ ಈ ಹಿಂದೆ ಕೆನಡಾ ಮತ್ತು ಅಮೆರಿಕ ಸರ್ಕಾರಗಳೊಂದಿಗೆ ತನ್ನ ರನ್-ಇನ್​ಗಳನ್ನು ಹೊಂದಿತ್ತು. ದೇಶ ಮತ್ತು ನಾಗರಿಕರು ಗೂಢಚರ್ಯೆಗೆ ಗುರಿಯಾಗಿಸಿಕೊಂಡು ಸೈಬರ್‌ ಸುರಕ್ಷತೆ ಮತ್ತು ಗೌಪ್ಯತೆ ಕಾನೂನುಗಳನ್ನು ಪಾಲಿಸಲಿಲ್ಲ ಎಂದು ಅಮೆರಿಕ ಆರೋಪಿಸಿದೆ.

ಸಭೆಯಲ್ಲಿ ಇಂಡಸ್ಟ್ರಿ ಒಕ್ಕೂಟ ಸಿಒಎಐ, ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ ಪ್ರತಿನಿಧಿಗಳು ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.