ETV Bharat / business

ದೇಶದ ಸಾಫ್ಟ್​ವೇರ್ ದೈತ್ಯ ಟಿಸಿಎಸ್​ಗೆ 8,433 ಕೋಟಿ ರೂ. ಲಾಭ: 16,000 ಕೋಟಿ ರೂ. ಬೈಬ್ಯಾಕ್​ ಪ್ಲಾನ್​ - ಟಿಸಿಎಸ್​

ನಿವ್ವಳ ಲಾಭವು 1,218 ಕೋಟಿ ರೂ. ಒಳಗೊಂಡಂತೆ, ನಿವ್ವಳ ಲಾಭ 7,475 ಕೋಟಿ ರೂ.ಯಷ್ಟಾಗಿದೆ. ಟಿಸಿಎಸ್ 2019ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 8,042 ಕೋಟಿ ರೂ.ಯಷ್ಟು ಲಾಭ ಮಾಡಿಕೊಂಡಿತ್ತು ಎಂದು ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

TCS
ಟಿಸಿಎಸ್
author img

By

Published : Oct 7, 2020, 9:50 PM IST

ಮುಂಬೈ : ಭಾರತದ ಅತಿದೊಡ್ಡ ಸಾಫ್ಟ್‌ವೇರ್ ಸೇವಾ ಸಂಸ್ಥೆ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, 2020ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಒಟ್ಟು ನಿವ್ವಳ ಲಾಭ ಶೇ. 4.9ರಷ್ಟು ಏರಿಕೆಯಾಗಿ 8,433 ಕೋಟಿ ರೂ.ಗೆ ತಲುಪಿದೆ ಮತ್ತು 16,000 ರೂ. ಬೈಬ್ಯಾಕ್​ (ಮರುಖರೀದಿ) ಯೋಜನೆ ಪ್ರಕಟಿಸಿದೆ.

ನಿವ್ವಳ ಲಾಭವು 1,218 ಕೋಟಿ ರೂ. ಒಳಗೊಂಡಂತೆ, ನಿವ್ವಳ ಲಾಭ 7,475 ಕೋಟಿ ರೂ.ಯಷ್ಟಾಗಿದೆ. ಟಿಸಿಎಸ್ 2019ರ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ 8,042 ಕೋಟಿ ರೂ.ಯಷ್ಟು ಲಾಭ ಮಾಡಿಕೊಂಡಿತ್ತು ಎಂದು ನಿಯಂತ್ರಕ ಫೈಲಿಂಗ್​ನಲ್ಲಿ ತಿಳಿಸಿದೆ.

ಟಿಸಿಎಸ್​ನ ಆದಾಯವು ವರ್ಷದಿಂದ ವರ್ಷಕ್ಕೆ ಶೇ.3ರಷ್ಟು ಏರಿಕೆಯಾಗಿ 40,135 ಕೋಟಿ ರೂ.ಗೆ ತಲುಪಿದೆ. ಹಿಂದಿನ ತ್ರೈಮಾಸಿಕದಲ್ಲಿ ಇದು 38,977 ಕೋಟಿ ರೂ.ಯಷ್ಟಿತ್ತು. 16,000 ಕೋಟಿ ರೂ. ಮರು ಖರೀದಿ ಯೋಜನೆಗೆ ಮಂಡಳಿ ಅನುಮೋದನೆ ನೀಡಿದ್ದು, ಈಕ್ವಿಟಿ ಷೇರಿಗೆ 3,000 ರೂ. ನಿಗದಿಪಡಿಸಿದೆ. ಬುಧವಾರ ಬಿಎಸ್‌ಇಯಲ್ಲಿ ಟಿಸಿಎಸ್ ಷೇರುಗಳ ಮುಕ್ತಾಯದ ಬೆಲೆಗಿಂತ ಶೇ.9ರಷ್ಟು ಏರಿಕೆಯಾಗಿ, ಪ್ರತಿ ಷೇರು 2,737.4 ರೂ.ಗೆ ಮಾರಾಟವಾದವು.

ಟಿಸಿಎಸ್‌ನ 5,33,33,333 ಈಕ್ವಿಟಿ ಷೇರುಗಳನ್ನು ಮರಳಿ ಖರೀದಿಸುವ ಪ್ರಸ್ತಾಪವನ್ನು ಮಂಡಳಿ ಅನುಮೋದಿಸಿದೆ. ಇದು ಒಟ್ಟು ಪಾವತಿಸಿದ ಈಕ್ವಿಟಿ ಷೇರು ಬಂಡವಾಳದ ಶೇ. 1.42ರಷ್ಟಿದ್ದು, 16,000 ಕೋಟಿ ರೂ. ಮೀರಂದತೆ 3,000 ರೂ.ಯಲ್ಲಿ ಪ್ರತಿ ಷೇರನ್ನು ಖರೀದಿಸಲಿದೆ. ಕಂಪನಿಯು ಪ್ರತಿ ಷೇರಿಗೆ 12 ರೂ. ಮಧ್ಯಂತರ ಲಾಭಾಂಶ ಘೋಷಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.