ಮುಂಬೈ: ಟಾಟಾ ಸ್ಟೀಲ್ ತನ್ನ ನೆದರ್‌ಲ್ಯಾಂಡ್ ವ್ಯವಹಾರ ಮಾರಾಟಕ್ಕೆ ಸ್ವೀಡನ್ ಮೂಲದ ಎಸ್‌ಎಸ್‌ಎಬಿ ಜೊತೆ ಮಾತುಕತೆ ಆರಂಭಿಸಿದೆ.
ಟಾಟಾ ಸ್ಟೀಲ್ ನೆದರ್‌ಲ್ಯಾಂಡ್ಸ್‌ನ ಮೇಲ್ವಿಚಾರಣಾ ಮಂಡಳಿ ಮತ್ತು ಆಡಳಿತ ಮಂಡಳಿಯೊಂದಿಗೆ ಚರ್ಚೆ ಪ್ರಾರಂಭಿಸಿದೆ. ಈ ಪ್ರಕ್ರಿಯೆಯು ಸ್ಟೇಕ್ಹೋಲ್ಡರ್ ಸಮಾಲೋಚನೆ ಸೇರಿದಂತೆ ಮುಂದಿನ ಹಂತಕ್ಕೆ ತೆಗೆದುಕೊಳ್ಳಲಾಗುವುದು ಎಂದು ಟಾಟಾ ಸ್ಟೀಲ್ ನಿಯಂತ್ರಕ ಫೈಲಿಂಗ್ನಲ್ಲಿ ತಿಳಿಸಿದೆ.
ಟಾಟಾ ಸ್ಟೀಲ್ ನೆದರ್ಲ್ಯಾಂಡ್ಸ್ ಮತ್ತು ಟಾಟಾ ಸ್ಟೀಲ್ ಯುಕೆಯನ್ನು ಪ್ರತ್ಯೇಕಿಸುವ ಪ್ರಕ್ರಿಯೆ ಪ್ರಾರಂಭಿಸಿದೆ. ಭವಿಷ್ಯದಲ್ಲಿ ತನ್ನ ನೆದರ್‌ಲ್ಯಾಂಡ್ ಮತ್ತು ಯುಕೆ ವ್ಯವಹಾರಕ್ಕಾಗಿ ಪ್ರತ್ಯೇಕ ಕಾರ್ಯತಂತ್ರದ ಮಾರ್ಗಗಳನ್ನು ಅನುಸರಿಸಲಿದೆ.
ಇಜ್ಮುಯಿಡೆನ್ ಸ್ಟೀಲ್ ವರ್ಕ್ಸ್ ಸೇರಿದಂತೆ ಟಾಟಾ ಸ್ಟೀಲ್ನ ನೆದರ್‌ಲ್ಯಾಂಡ್ ವ್ಯವಹಾರ ಸ್ವಾಧೀನದ ಖರೀದಿ ಆಸಕ್ತಿ ಸ್ವೀಕರಿಸಿದ ಕಂಪನಿ, ಎಸ್ಎಸ್ಎಬಿ ಸ್ವೀಡನ್ ಜತೆಗೆ ಚರ್ಚೆ ಪ್ರಾರಂಭಿಸಿದೆ ಎಂದು ಹೇಳಿದೆ.
ಜುಲೈ-ಸೆಪ್ಟೆಂಬರ್ ಅವಧಿಯಲ್ಲಿ ತನ್ನ ಏಕೀಕೃತ ನಿವ್ವಳ ಲಾಭದಲ್ಲಿ ಶೇ. 60ರಷ್ಟು ಕುಸಿತ ದಾಖಲಿಸಿ 1,635 ಕೋಟಿ ರೂಪಾಯಿಯಷ್ಟಾಗಿದೆ. ಕಳೆದ ಹಣಕಾಸು ವರ್ಷದ ಇದೇ ತ್ರೈಮಾಸಿಕದಲ್ಲಿ ಕಂಪನಿಯು 4,043 ಕೋಟಿ ರೂ. ಆದಾಯದಲ್ಲಿತ್ತು. ಈ ತ್ರೈಮಾಸಿಕದಲ್ಲಿ 2,408 ಕೋಟಿ ರೂ. ಆದಾಯ ನಷ್ಟ ಎದುರಾಗಿದೆ.
ಟಾಟಾ ಸ್ಟೀಲ್ ಭಾರತದಲ್ಲಿ ವಿಶಾಲ ಮಾರುಕಟ್ಟೆ ಬೆಳವಣಿಗೆ ಹೊಂದಿದೆ. ಬಲವಾದ ಹಣದ ಹರಿವಿನ ಉತ್ಪಾದನೆಯೊಂದಿಗೆ ಉತ್ತಮ ವಹಿವಾಟಿನ ಫಲಿತಾಂಶಗಳನ್ನು ನೀಡಿದೆ. ನಮ್ಮ ವ್ಯವಹಾರ ಮಾದರಿಯ ಸ್ಥಿರತೆ ಮತ್ತು ಬದ್ಧತೆಯು ಕೋವಿಡ್ ಸಾಂಕ್ರಾಮಿಕದ ನಿರಂತರ ಸವಾಲುಗಳನ್ನು ಎದುರಿಸಲು ನೆರವಾಗಿವೆ ಎಂದು ಟಾಟಾ ಸ್ಟೀಲ್ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕ ಟಿ.ವಿ.ನರೇಂದ್ರನ್ ಹೇಳಿದ್ದಾರೆ.