ನವದೆಹಲಿ: 2021ರ ಮಾರ್ಚ್ 31ಕ್ಕೆ ಕೊನೆಗೊಂಡ ನಾಲ್ಕನೇ ತ್ರೈಮಾಸಿಕದಲ್ಲಿ ದೇಶೀಯ ಆಟೋ ದೈತ್ಯ ಟಾಟಾ ಮೋಟಾರ್ಸ್ 7,585 ಕೋಟಿ ರೂ. ನಿವ್ವಳ ನಷ್ಟ ಕಂಡಿದೆ.
2019-20ರ ಆರ್ಥಿಕ ವರ್ಷದ ಜನವರಿ - ಮಾರ್ಚ್ ಅವಧಿಯಲ್ಲಿ ಒಟ್ಟು 9,864 ಕೋಟಿ ರೂ.ಯಷ್ಟು ನಿವ್ವಳ ನಷ್ಟ ದಾಖಲಿಸಿತ್ತು ಎಂದು ಟಾಟಾ ಮೋಟಾರ್ಸ್ ಬಿಎಸ್‌ಇ ಫೈಲಿಂಗ್ನಲ್ಲಿ ತಿಳಿಸಿದೆ.
2021ರ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಆಟೋ ಮೇಜರ್‌ನ ಒಟ್ಟು ಆದಾಯ 89,319 ಕೋಟಿ ರೂ.ಯಷ್ಟಿದೆ. ಇದು ಹಿಂದಿನ ವರ್ಷದ ತ್ರೈಮಾಸಿಕದಲ್ಲಿ 63,057 ಕೋಟಿ ರೂ. ಆಗಿತ್ತು.
ಇದನ್ನೂ ಓದಿ: 14 ದಿನದಲ್ಲೇ 10 ಬಾರಿ ಇಂಧನ ಬೆಲೆ ಏರಿಕೆ.. ಶತಕದ ಅಂಚಿಗೆ ಬಂದು ನಿಂತ ಪೆಟ್ರೋಲ್ ದರ.. ಕಾರಣ,,
ಇಡೀ 2020-21ರ ಹಣಕಾಸು ವರ್ಷದಲ್ಲಿ ಕಂಪನಿಯು ಒಟ್ಟು 13,395 ಕೋಟಿ ರೂ. ನಿವ್ವಳ ನಷ್ಟ ದಾಖಲಿಸಿದೆ. ಈ ಹಿಂದಿನ 2019-20ರಲ್ಲಿ ಅದು 11,975 ಕೋಟಿ ರೂ.ಯಷ್ಟಿತ್ತು.
ಕಳೆದ ಹಣಕಾಸು ವರ್ಷದಲ್ಲಿ ಇದರ ಒಟ್ಟು ಆದಾಯ 2,52,438 ಕೋಟಿ ರೂ.ಗಳಾಗಿದ್ದು, 2020ರ ವಿತ್ತೀಯ ವರ್ಷದಲ್ಲಿ 2,64,041 ಕೋಟಿ ರೂ. ಆಗಿತ್ತು.