ETV Bharat / business

ಸ್ನ್ಯಾಪ್‌ಚಾಟ್​ಗೆ 500 ಮಿಲಿಯನ್ ಸಕ್ರಿಯ​ ಬಳಕೆದಾರರು: ಭಾರತದಲ್ಲಿ ಶೇ 100ರಷ್ಟು ಬೆಳವಣಿಗೆ

author img

By

Published : May 21, 2021, 3:25 PM IST

ಭಾರತದಲ್ಲಿ ಸ್ನ್ಯಾಪ್‌ಚಾಟ್ ಕಳೆದ ಐದು ತ್ರೈಮಾಸಿಕಗಳಲ್ಲಿ ದೈನಂದಿನ ಸಕ್ರಿಯ ಬಳಕೆದಾರರಲ್ಲಿ (ಡಿಎಯು) ಶೇ 100 ಪ್ರತಿಶತ (ವರ್ಷದಿಂದ ವರ್ಷ) ಬೆಳವಣಿಗೆ ಕಂಡಿದೆ ಎಂದು ಕಂಪನಿಯು ತನ್ನ ಮೂರನೇ ಸ್ನ್ಯಾಪ್ ಪಾಲುದಾರ ಸಭೆಯಲ್ಲಿ ಘೋಷಿಸಿದೆ.

snapchat
snapchat

ನವದೆಹಲಿ: ಜನಪ್ರಿಯ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಸ್ನ್ಯಾಪ್‌ಚಾಟ್ ಮಾಸಿಕ 500 ಮಿಲಿಯನ್‌ಗಿಂತಲೂ ಹೆಚ್ಚು ಸಕ್ರಿಯ ಬಳಕೆದಾರರನ್ನು ತಲುಪಿದೆ. ಸುಮಾರು 40 ಪ್ರತಿಶತ ಬಳಕೆದಾರರು ಉತ್ತರ ಅಮೆರಿಕ ಮತ್ತು ಯುರೋಪಿನ ಹೊರಗಡೆ ಇದ್ದಾರೆ.

ಇದನ್ನೂ ಓದಿ: 2021ರಲ್ಲಿ ಎಸ್​ಬಿಐನ ವಾರ್ಷಿಕ ಆದಾಯ ಶೇ 80ರಷ್ಟು ಏರಿಕೆ

ಸ್ನ್ಯಾಪ್ ಹೊಸ ಫೀಚರ್​ಗಳು ಇತ್ತೀಚಿನ ಅಪ್​ಡೇಟ್ ಮತ್ತು ಆಗ್ಮೆಂಟೆಡ್ ರಿಯಾಲಿಟಿ (ಎಆರ್) ಅನುಭವಗಳನ್ನು ಘೋಷಿಸಿತು. ಹೊಸ ಎಆರ್ ಪರಿಕರ ಮತ್ತು ಕ್ಯಾಮರಾ ಅನುಭವಗಳು, ಮುಂದಿನ ಪೀಳಿಗೆಯ ಸ್ಪೆಕ್ಟಾಕಲ್ಸ್ ಮತ್ತು ಮೊಬೈಲ್‌ನಲ್ಲಿ ಸೃಷ್ಟಿಕರ್ತರಿಗೆ ಪ್ರಬಲವಾದ ಎಡಿಟಿಂಗ್ ಪರಿಕರಗಳನ್ನು ನೀಡುವ ಹೊಸ ಸ್ವತಂತ್ರ ಅಪ್ಲಿಕೇಶನ್ ‘ಸ್ಟೋರಿ ಸ್ಟುಡಿಯೋ’ ಪ್ರಾರಂಭಿಸಿತು. ಕ್ರಿಯೆಟರ್​​ಗಳನ್ನು ಗಮನದಲ್ಲಿ ಇರಿಸಿಕೊಂಡು ಸ್ಟೋರಿ ಸ್ಟುಡಿಯೋ ಸ್ನ್ಯಾಪ್‌ಚಾಟ್‌ನಲ್ಲಿ ನಡೆಯುತ್ತಿರುವ ಪ್ರವೃತ್ತಿಗಳ ಕುರಿತು ಒಳನೋಟಗಳನ್ನು ನೀಡುತ್ತದೆ. ಇದು ಈ ವರ್ಷದ ಕೊನೆಯಲ್ಲಿ ಐಒಎಸ್​ನಲ್ಲಿ ಪ್ರಾರಂಭವಾಗುತ್ತಿದೆ. ಇದು ಉಚಿತವಾಗಿ ಲಭ್ಯವಿರುತ್ತದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.