ನವದೆಹಲಿ: ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಡಿಸೆಂಬರ್ ಅಂತ್ಯದ ಮೂರನೇ ತ್ರೈಮಾಸಿಕದಲ್ಲಿ ಸ್ವತಂತ್ರ ನಿವ್ವಳ ಲಾಭದಲ್ಲಿ ಶೇ 7 ರಷ್ಟು ಕುಸಿತವಾಗಿ 5,196.22 ಕೋಟಿ ರೂ.ಗಳಷ್ಟಾಗಿದೆ.
ಹಿಂದಿನ ಹಣಕಾಸು ವರ್ಷದ ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲಿ ಬ್ಯಾಂಕ್ 5,583.36 ಕೋಟಿ ರೂ. ಆದಾಯ ಗಳಿಸಿತ್ತು. ಈ ಮೊತ್ತಕ್ಕೆ ಹೋಲಿಸಿದರೇ ಶೇ 7ರಷ್ಟು ಗಳಿಕೆ ಕುಸಿದಿದೆ.
2021ರ ಹಣಕಾಸು ವರ್ಷದ 3ನೇ ತ್ರೈಮಾಸಿಕ ಅವಧಿಯಲ್ಲಿ ಒಟ್ಟು ಆದಾಯ (ಸ್ವತಂತ್ರ) 75,980.65 ಕೋಟಿ ರೂ.ಗೆ ಇಳಿದಿದೆ. 2019-20ರ ಇದೇ ಅವಧಿಯಲ್ಲಿ 76,797.91 ಕೋಟಿ ರೂ.ಗಳಷ್ಟಾಗಿದೆ.
ಪರಿಶೀಲನೆಯ ತ್ರೈಮಾಸಿಕದಲ್ಲಿ ಬ್ಯಾಂಕ್ ನಿವ್ವಳ ಲಾಭದಲ್ಲಿ ಶೇ 5.8ರಷ್ಟು ಕುಸಿತವಾಗಿ 6,402.16 ಕೋಟಿ ರೂ.ಯಷ್ಟು ದಾಖಲಿಸಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ 6,797.25 ಕೋಟಿ ರೂ.ಯಷ್ಟಿತ್ತು. ಅನುತ್ಪಾದಕ ಆಸ್ತಿಯು 2020ರ ಡಿಸೆಂಬರ್ 31ರ ವೇಳೆಗೆ ಶೇ 4.77ಕ್ಕೆ ಇಳಿದಿದ್ದರಿಂದ ಬ್ಯಾಂಕಿನ ಆಸ್ತಿ ಗುಣಮಟ್ಟ ಗಣನೀಯವಾಗಿ ಸುಧಾರಿಸಿದೆ.
ಇದನ್ನೂ ಓದಿ: ಫ್ಯೂಚರ್ ಗ್ರೂಪ್ ಅಧ್ಯಕ್ಷ ವಿರುದ್ಧ ಸೆಬಿ ನಿಷೇಧ: ಕಂಪನಿಯಿಂದ ಮೇಲ್ಮನವಿ ಅರ್ಜಿ ಸಲ್ಲಿಕೆ ತೀರ್ಮಾನ
ಒಟ್ಟು ಎನ್‌ಪಿಎ ಅಥವಾ ಕೆಟ್ಟ ಸಾಲ 1,17,244.23 ಕೋಟಿ ರೂ.ಗಳಾಗಿದ್ದು, ಕಳೆದ ವರ್ಷ 1,59,661.19 ಕೋಟಿ ರೂ.ಗಳಿಷ್ಟಿತ್ತು. ನಿವ್ವಳ ಎನ್‌ಪಿಎ ಶೇ 1.23ರಷ್ಟು ಇಳಿಕೆ ಕಂಡು 29,031.72 ಕೋಟಿ ರೂ.ಗೆ ತಲುಪಿದೆ. ಈ ಹಿಂದಿನ ವರ್ಷ ಇದು ಶೇ 2.65ರಷ್ಟು (58,248.61 ಕೋಟಿ ರೂ.) ಇತ್ತು.
ಎಸ್‌ಬಿಐನ ಷೇರುಗಳು ಬಿಎಸ್‌ಇಯಲ್ಲಿ ಶೇ 2.02 ರಷ್ಟು ಏರಿಕೆ ಕಂಡು ತಲಾ 342.65 ರೂ.ಯಲ್ಲಿ ವಹಿವಾಟು ನಡೆಸುತ್ತಿದ್ದವು.