ETV Bharat / business

100 ಕೋಟಿ ರೂ. ಬಳಿಕ ಮತ್ತೆ ಪಿಎಂ ಕೇರ್ಸ್​ಗೆ ದೇಣಿಗೆ ಕೊಟ್ಟ SBI ನೌಕರರು - ಕೋವಿಡ್​ 19 ಬಿಕ್ಕಟ್ಟು

2020ರ ಮಾರ್ಚ್​ನಲ್ಲಿ ಎಸ್‌ಬಿಐನ ಸುಮಾರು 2,56,000 ಉದ್ಯೋಗಿಗಳು ಪಿಎಂ-ಕೇರ್ಸ್ ನಿಧಿಗೆ 100 ಕೋಟಿ ರೂ. ದೇಣಿಗೆ ನೀಡಿದ್ದರು. ಇದು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನೀಡಲಾಗಿದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

State Bank of India
ಎಸ್​ಬಿಐ
author img

By

Published : May 19, 2020, 6:19 PM IST

Updated : May 19, 2020, 6:24 PM IST

ಮುಂಬೈ: ಕೋವಿಡ್​-19 ಬಿಕ್ಕಟ್ಟಿನ ವಿರುದ್ಧದ ಕಾಳಗದಲ್ಲಿ ದೇಶದ ಅತಿದೊಡ್ಡ ಹಣಕಾಸು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ (ಎಸ್‌ಬಿಐ) ನೌಕರರು ಪ್ರಧಾನ ಮಂತ್ರಿ ನಾಗರಿಕರ ಸಹಾಯ ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ (ಪಿಎಂ-ಕೇರ್ಸ್) ನಿಧಿಗೆ ಹೆಚ್ಚುವರಿಯಾಗಿ 7.95 ಕೋಟಿ ರೂ. ನೀಡಿದ್ದಾರೆ

ಒಂದು ದಿನದ ಸಂಬಳ ಮತ್ತು ಒಂದು ದಿನದ ರಜೆ ಎನ್‌ಕ್ಯಾಶ್‌ಮೆಂಟ್‌ ಮೂಲಕ ಎಸ್‌ಬಿಐ ನೌಕರರು ನೀಡಿದ ಒಟ್ಟಾರೆ ದೇಣಿಗೆ ಈಗ 107.95 ಕೋಟಿ ರೂ.ಗೆ ಏರಿಕೆಯಾಗಿದೆ.

2020ರ ಮಾರ್ಚ್​ನಲ್ಲಿ ಎಸ್‌ಬಿಐನ ಸುಮಾರು 2,56,000 ಉದ್ಯೋಗಿಗಳು ಪಿಎಂ-ಕೇರ್ಸ್ ನಿಧಿಗೆ 100 ಕೋಟಿ ರೂ. ದೇಣಿಗೆ ನೀಡಿದ್ದರು. ಇದು ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ನೀಡಲಾಗಿದೆ ಎಂದು ಎಸ್‌ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್‌ಬಿಐ ತನ್ನ ಸಿಎಸ್‌ಆರ್ ಚಟುವಟಿಕೆಗಳ ಭಾಗವಾಗಿ ಕೋವಿಡ್ -19ರ ವಿರುದ್ಧ ಹೋರಾಡಲು 2019-20ನೇ ಸಾಲಿನ ವಾರ್ಷಿಕ ಲಾಭದ ಶೇ 0.25ರಷ್ಟು ನೀಡಲು ಬದ್ಧವಾಗಿದೆ ಎಂದಿದೆ.

Last Updated : May 19, 2020, 6:24 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.