ನವದೆಹಲಿ: ಸೌದಿ ಅರೇಬಿಯಾದ ಸಾರ್ವಜನಿಕ ಹೂಡಿಕೆ ನಿಧಿಯು ರಿಲಯನ್ಸ್ ಇಂಡಸ್ಟ್ರೀಸ್‌ನ ಚಿಲ್ಲರೆ ವಿಭಾಗದಲ್ಲಿ 9,555 ಕೋಟಿ ರೂ. (ಅಂದಾಜು 1.3 ಬಿಲಿಯನ್ ಡಾಲರ್) ಹೂಡಿಕೆ ಮಾಡಿ ಶೇ 2.04ರಷ್ಟು ಷೇರು ಖರೀದಿಸಿದೆ.
ಈ ಹೂಡಿಕೆಯ ಮೂಲಕ ರಿಲಯನ್ಸ್ ರಿಟೇಲ್ ವೆಂಚರ್ಸ್ ಲಿಮಿಟೆಡ್ (ಆರ್ಆರ್ವಿಎಲ್) ಈಕ್ವಿಟಿ ಮೌಲ್ಯ 4.587 ಟ್ರಿಲಿಯನ್ ರೂ. (ಅಂದಾಜು 62.4 ಬಿಲಿಯನ್ ಡಾಲರ್) ಆಗಿದೆ ಎಂದು ಆರ್ಐಎಲ್ ತಿಳಿಸಿದೆ.
ಆರ್‌ಆರ್‌ವಿಎಲ್‌ನಲ್ಲಿನ ಹೂಡಿಕೆಗೆ ಮುನ್ನ ಸೌದಿ ಅರೇಬಿಯಾದ ನಿಧಿ, ಈ ಹಿಂದೆ ರಿಲಯನ್ಸ್ ಇಂಡಸ್ಟ್ರೀಸ್‌ನ ಡಿಜಿಟಲ್ ಸೇವೆಗಳ ಅಂಗ ಸಂಸ್ಥೆಯಾದ ಜಿಯೋ ಪ್ಲಾಟ್‌ಫಾರ್ಮ್‌ಗಳಲ್ಲಿ ಶೇ 2.32ರಷ್ಟು ಪಾಲು ಸ್ವಾಧೀನಪಡಿಸಿಕೊಂಡಿತ್ತು. ಇದರ ಮೌಲ್ಯ 11,367 ಕೋಟಿ ರೂ.ಗಳಷ್ಟಾಗಿತ್ತು.
ಈ ವ್ಯವಹಾರವು ಜಾಗತಿಕ ಮಟ್ಟದಲ್ಲಿ ನವೀನ ಮತ್ತು ಪರಿವರ್ತಕ ಮಾರುಕಟ್ಟೆಯಲ್ಲಿ ಬಲವಾದ ಸಹಭಾಗಿತ್ವ ಅಭಿವೃದ್ಧಿಪಡಿಸಲು ಸಹಾಯಕವಾಗಲಿದೆ. ಜಾಗತಿಕ ಹೂಡಿಕೆದಾರರಾಗಿ ಪಿಐಎಫ್‌ನ ಕಾರ್ಯತಂತ್ರಕ್ಕೆ ಇದು ಅನುಗುಣವಾಗಿದೆ.
ಭಾರತದ ಚಿಲ್ಲರೆ ವ್ಯಾಪಾರ ಕ್ಷೇತ್ರವು ವಿಶ್ವದಲ್ಲೇ ಅತಿ ದೊಡ್ಡದಾಗಿದೆ. ಇದು ಒಟ್ಟು ದೇಶೀಯ ಉತ್ಪನ್ನದ (ಜಿಡಿಪಿ) ಶೇ 10ಕ್ಕಿಂತಲೂ ಹೆಚ್ಚಿನ ಪಾಲು ಹೊಂದಿದೆ.