ನವದೆಹಲಿ: ಸ್ಯಾಮ್ಸಂಗ್ ಮೊಬೈಲ್ ಭಾರತದಲ್ಲಿ ಹೆಚ್ಚು ಅಪೇಕ್ಷಿತ ಬ್ರಾಂಡ್ ಆಗಿದ್ದು, ಆ್ಯಪಲ್ ಐಫೋನ್ ನಂತರದ ಸ್ಥಾನದಲ್ಲಿದೆ ಎಂದು ಟಿಆರ್ಎ ರಿಸರ್ಚ್ ತಿಳಿಸಿದೆ.
2013, 2015 ಮತ್ತು 2018ರಲ್ಲಿ ಸ್ಯಾಮ್‌ಸಂಗ್ ಮೊಬೈಲ್ ಅಗ್ರಸ್ಥಾನ ಪಡೆದ ಬಳಿಕ ಈಗ ಮತ್ತೆ ಅಪೇಕ್ಷಿತ ಬ್ರಾಂಡ್ ಎಂಬ ಹೆಗ್ಗಳಿಕೆ ಪಡೆದಿದೆ.
ಸ್ಯಾಮ್‌ಸಂಗ್ ವೈವಿಧ್ಯಮಯ ಬ್ರಾಂಡ್ ಗ್ರಾಹಕ ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಮೂರನೇ ಸ್ಥಾನದಲ್ಲಿದೆ. ಸಾಮಾನ್ಯ ಮನರಂಜನಾ ಚಾನೆಲ್ ಸೋನಿ ಟಿವಿ ಮೊದಲ ಬಾರಿಗೆ ಟಾಪ್ 10 ಬ್ರಾಂಡ್‌ಗಳಡಿ ಪ್ರವೇಶಿಸಿದ್ದು, ನಾಲ್ಕನೇ ಸ್ಥಾನ ಪಡೆದಿದೆ.
ಆಟೋಮೊಬೈಲ್ನ ಪ್ರಮುಖ ಕಂಪನಿಯಾದ ಮಾರುತಿ ಸುಜುಕಿ ಐದನೇ ಸ್ಥಾನವನ್ನು ಪಡೆದುಕೊಂಡರೆ, ತಂತ್ರಜ್ಞಾನದ ದೈತ್ಯ ಡೆಲ್ ಆರನೇ ಸ್ಥಾನದಲ್ಲಿದೆ.
42 ಬ್ರಾಂಡ್‌ಗಳನ್ನು ಒಳಗೊಂಡ ಭಾರತದ ಮೋಸ್ಟ್ ಡಿಸೈರ್ಡ್ ಪಟ್ಟಿಯಲ್ಲಿ ಅಗ್ರ 100ರಲ್ಲಿ ಭಾರತೀಯ ಬ್ರ್ಯಾಂಡ್‌ಗಳು ಪ್ರಾಬಲ್ಯ ಸಾಧಿಸಿವೆ. ಅಮೆರಿಕದ 15, ಜಪಾನ್ನ 12 ಮತ್ತು ದಕ್ಷಿಣ ಕೊರಿಯಾದ 11 ಬ್ರಾಂಡ್ಗಳಿವೆ. 6 ಜರ್ಮನ್ ಬ್ರಾಂಡ್‌ಗಳಿದ್ದು ಇದರಲ್ಲಿ ಮೂರು ಐಷಾರಾಮಿ ಕಾರಿನ ಬ್ರಾಂಡ್‌ಗಳನ್ನು ಹೊಂದಿದೆ ಎಂದು ವರದಿ ತಿಳಿಸಿದೆ.