ETV Bharat / business

ಜಗತ್ತಿನಲ್ಲೇ ಅತ್ಯಧಿಕ 80,000 ಕೋಟಿ ರೂ. ತೆರಿಗೆ ಪಾವತಿ: ಯಾರು ಈ ಕುಬೇರ ಪುತ್ರ, ಗಳಿಕೆ ಎಷ್ಟು? - ದಕ್ಷಿಣ ಕೊರಿಯಾ ತೆರಿಗೆ ನೀತಿ

ದಕ್ಷಿಣ ಕೊರಿಯಾವು ವಿಶ್ವದಲ್ಲೇ ಅತಿ ಹೆಚ್ಚು ಪಿತ್ರಾರ್ಜಿತ ತೆರಿಗೆ ದರ ಹೊಂದಿದೆ. ಇಲ್ಲಿ ಉತ್ತರಾಧಿಕಾರಿಗಳು ಆಸ್ತಿ ವರ್ಗಾವಣೆಯ ಸಮಯದಲ್ಲಿ ಶೇ 50ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಲೀ ಕುವಾನ್ ಯೂ ಅವರ ಉತ್ತರಾಧಿಕಾರಿಗಳು ಪಾವತಿಸಬೇಕಾದ ತೆರಿಗೆ ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ವಿಧಿಸಿದ ಆಸ್ತಿ ತೆರಿಗೆಯ ನಾಲ್ಕು ಪಟ್ಟು ಅಧಿಕವಾಗಿದೆ. ಈ ಮೊತ್ತವನ್ನು 2021ರ ಏಪ್ರಿಲ್​ನಿಂದ ಮುಂದಿನ ಐದು ವರ್ಷಗಳಲ್ಲಿ ಸರ್ಕಾರಕ್ಕೆ ನೀಡಲಾಗುವುದು ಎಂದು ಘೋಷಿಸಲಾಗಿದೆ. ಈ ಬಾರಿ ಸ್ಯಾಮ್​ಸಂಗ್​ನ ಮಾಜಿ ಅಧ್ಯಕ್ಷರ ಪುತ್ರ ಅತ್ಯಧಿಕ ತೆರಿಗೆ ಪಾವತಿಸಲು ಮುಂದಾಗಿದ್ದಾರೆ.

tax
tax
author img

By

Published : Apr 28, 2021, 3:28 PM IST

ಸಿಂಗಾಪುರ: ದಕ್ಷಿಣ ಕೊರಿಯಾದ ಎಲೆಕ್ಟ್ರಾನಿಕ್ಸ್ ದೈತ್ಯ ಸ್ಯಾಮ್‌ಸಂಗ್‌ನ ಮಾಜಿ ಅಧ್ಯಕ್ಷ ಲೀ ಕುನ್-ಹೀ ಅವರ ಕುಟುಂಬ ಪ್ರಮುಖ ನಿರ್ಧಾರ ಕೈಗೊಂಡಿದೆ. ಪಿತ್ರಾರ್ಜಿತ ತೆರಿಗೆ ಅಡಿಯಲ್ಲಿ ಸರ್ಕಾರಕ್ಕೆ 10.78 ಬಿಲಿಯನ್ ಡಾಲರ್​ (ಅಂದಾಜು 80,000 ಕೋಟಿ ರೂ.) ಪಾವತಿಸಲು ನಿರ್ಧರಿಸಿದೆ.

ಇದರೊಂದಿಗೆ ಲೀ ಕುನ್-ಹೀ ಅವರು ಉಳಿದಿರುವ ಸ್ವತ್ತುಗಳ ಮೌಲ್ಯದ ಅರ್ಧಕ್ಕಿಂತ ಹೆಚ್ಚಿನದನ್ನು ಆನುವಂಶಿಕ ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಹೋಗಲಿದೆ. ಈ ಪಾವತಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ, ಸ್ಯಾಮ್‌ಸಂಗ್‌ನ ಉತ್ತರಾಧಿಕಾರಿಗಳು ವಿಶ್ವದ ಅತಿ ಹೆಚ್ಚು ಪಿತ್ರಾರ್ಜಿತ ತೆರಿಗೆ ಪಾವತಿಸುವವರಾಗುತ್ತಾರೆ.

ದಕ್ಷಿಣ ಕೊರಿಯಾವು ವಿಶ್ವದಲ್ಲೇ ಅತಿ ಹೆಚ್ಚು ಪಿತ್ರಾರ್ಜಿತ ತೆರಿಗೆ ದರ ಹೊಂದಿದೆ. ಇಲ್ಲಿ ಉತ್ತರಾಧಿಕಾರಿಗಳು ಆಸ್ತಿ ವರ್ಗಾವಣೆಯ ಸಮಯದಲ್ಲಿ ಶೇ 50ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಲೀ ಕುವಾನ್ ಯೂ ಅವರ ಉತ್ತರಾಧಿಕಾರಿಗಳು ಪಾವತಿಸಬೇಕಾದ ತೆರಿಗೆ ಕಳೆದ ವರ್ಷ ದಕ್ಷಿಣ ಕೊರಿಯಾದಲ್ಲಿ ವಿಧಿಸಿದ ಆಸ್ತಿ ತೆರಿಗೆಯ ನಾಲ್ಕು ಪಟ್ಟು ಅಧಿಕವಾಗಿದೆ. ಈ ಮೊತ್ತವನ್ನು 2021ರ ಏಪ್ರಿಲ್​ನಿಂದ ಮುಂದಿನ ಐದು ವರ್ಷಗಳಲ್ಲಿ ಸರ್ಕಾರಕ್ಕೆ ನೀಡಲಾಗುವುದು ಎಂದು ಘೋಷಿಸಲಾಗಿದೆ.

ಲೀ ಕುವಾನ್ ಯೂ ಅನಾರೋಗ್ಯದಿಂದ 2020ರ ಅಕ್ಟೋಬರ್‌ನಲ್ಲಿ ನಿಧನರಾದರು. ಲೀ ಕುನ್-ಹೀ 1987ರಲ್ಲಿ ಅವರ ತಂದೆ ಲೀ ಬೈಂಗ್-ಚುಲ್ ಅವರಿಂದ ಅಧಿಕಾರ ವಹಿಸಿಕೊಂಡರು. ಅವರ ಅಧಿಕಾರಾವಧಿಯಲ್ಲಿ ಕಂಪನಿಯು ದಕ್ಷಿಣ ಕೊರಿಯಾದ ಅತಿದೊಡ್ಡ ಕಂಪನಿಯಾಯಿತು.

ಈ ಮೊತ್ತವನ್ನು ಲಾಭಾಂಶದ ಜೊತೆಗೆ ಬ್ಯಾಂಕ್ ಸಾಲಗಳ ಮೂಲಕ ಸರ್ಕಾರಕ್ಕೆ ಪಾವತಿಸಲಾಗುವುದು ಎಂಬ ಮಾಹಿತಿ ಇದೆ. ಲೀ ಕುನ್-ಹೀ ಅವರು ಬಿಟ್ಟ ಆಸ್ತಿಯನ್ನು ಉತ್ತರಾಧಿಕಾರಿಗಳಲ್ಲಿ ಹೇಗೆ ಹಂಚಿಕೊಳ್ಳುತ್ತಾರೆ ಎಂಬುದನ್ನು ಅವರ ಕುಟುಂಬ ಬಹಿರಂಗಪಡಿಸಿಲ್ಲ. ಲೀ ಅವರ ನಿವ್ವಳ ಮೌಲ್ಯ 23.4 ಬಿಲಿಯನ್ ಡಾಲರ್​ ಎಂದು ಅಂದಾಜಿಸಲಾಗಿದೆ.

ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಲು 0.9 ಬಿಲಿಯನ್ ನೀಡಲಾಗುವುದು ಎಂದು ಲೀ ಅವರ ಉತ್ತರಾಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅವರ ಅತ್ಯಮೂಲ್ಯವಾದ 23,000 ವರ್ಣಚಿತ್ರಗಳು ಮತ್ತು ಪ್ರಾಚೀನ ವಸ್ತುಗಳನ್ನು ರಾಷ್ಟ್ರೀಯ ವಸ್ತು ಸಂಗ್ರಹಾಲಯಗಳಿಗೆ ದಾನ ಮಾಡಲಾಗುವುದು ಎಂದು ಲೀ ಹೇಳಿದರು. ಲೀ ಅವರ ಉತ್ತರಾಧಿಕಾರಿಗಳಲ್ಲಿ ಒಬ್ಬರು ಪ್ರಸ್ತುತ ಭ್ರಷ್ಟಾಚಾರ ಪ್ರಕರಣದಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.