ಸಿಯೋಲ್: ಲಂಚ ಪ್ರಕರಣದಲ್ಲಿ ಜಾಗತಿಕ ಟೆಕ್ ದೈತ್ಯ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಸ್ಥಾನದ ಉತ್ತರಾಧಿಕಾರಿ ಲೀ ಜೇ-ಯಂಗ್ ಅವರಿಗೆ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
ವಿಶ್ವದ ಅತಿದೊಡ್ಡ ಸ್ಮಾರ್ಟ್‌ಫೋನ್ ಮತ್ತು ಮೆಮೊರಿ ಚಿಪ್ ತಯಾರಕರಾದ ಸ್ಯಾಮ್‌ಸಂಗ್ ಎಲೆಕ್ಟ್ರಾನಿಕ್ಸ್‌ನ ಉಪಾಧ್ಯಕ್ಷ ಲೀ ಜೇ-ಯಂಗ್ ಅವರು ಅಧ್ಯಕ್ಷ ಪಾರ್ಕ್ ಗಿಯುನ್-ಹೈ ಅವರನ್ನು ಕೆಳಕ್ಕಿಳಿಸಿದ ಹಗರಣಕ್ಕೆ ಸಂಬಂಧಿಸಿದಂತೆ ಲಂಚ ಮತ್ತು ದುರುಪಯೋಗದ ಆರೋಪ ಎದುರಿಸಿದರು.
ಲೀ ಲಂಚ ಕೊಟ್ಟು ತನ್ನ ಅಧಿಕಾರ ಹಾದಿಯ ಸುಗಮದ ಉತ್ತರಾಧಿಕಾರಕ್ಕೆ ಸಹಾಯ ಮಾಡುವಂತೆ ಸೂಚ್ಯವಾಗಿ ಕೇಳಿಕೊಂಡರು ಎಂದು ಸಿಯೋಲ್ ಸೆಂಟ್ರಲ್ ಡಿಸ್ಟ್ರಿಕ್ಟ್ ಕೋರ್ಟ್ ತನ್ನ ತೀರ್ಪಿನಲ್ಲಿ ತಿಳಿಸಿದೆ.
ಇದನ್ನೂ ಓದಿ: 3 ದಿನ ಬ್ರೇಕ್ ಬಳಿಕ ಮತ್ತೆ ಜಿಗಿದ ತೈಲ ದರ: ಜ.18ರ ಪೆಟ್ರೋಲ್, ಡೀಸೆಲ್ ರೇಟ್ ಹೀಗಿದೆ!
ದೇಶದ ಉನ್ನತ ಕಂಪನಿ ಮತ್ತು ಹೆಮ್ಮೆಯ ಜಾಗತಿಕ ಸ್ಯಾಮ್ಸಂಗ್, ಅಧಿಕಾರದಲ್ಲಿ ಬದಲಾವಣೆ ಆದಾಗಲೆಲ್ಲಾ ಪದೇ ಪದೇ ಅಪರಾಧಗಳಲ್ಲಿ ಭಾಗಿಯಾಗುತ್ತಿರುವುದು ಬಹಳ ದುರದೃಷ್ಟಕರ ಎಂದು ಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಡಿಸೆಂಬರ್ ಅಂತ್ಯದ ವಿಚಾರಣೆ ವೇಳೆ ದೂರುದಾರರು ಲೀ ಅವರಿಗೆ ಒಂಬತ್ತು ವರ್ಷ ಜೈಲು ಶಿಕ್ಷೆ ವಿಧಿಸಬೇಕೆಂದು ಕೋರ್ಟ್ಗೆ ಮನವಿ ಮಾಡಿದ್ದರು ಎಂದು ಕೊರಿಯಾ ಹೆರಾಲ್ಡ್ ವರದಿ ಮಾಡಿತ್ತು.
ಸ್ಯಾಮ್ಸಂಗ್ ಅಂತಹ ಅಗಾಧ ಶಕ್ತಿ ಹೊಂದಿರುವ ತಂಡವಾಗಿದೆ. ಕೊರಿಯಾದ ಕಂಪನಿಗಳನ್ನು ಸ್ಯಾಮ್ಸಂಗ್ ಮತ್ತು ಸ್ಯಾಮ್ಸಂಗ್ಯೇತರ ಕಂಪನಿಗಳೆಂದು ವಿಂಗಡಿಸುತ್ತಾರೆ ಎಂದು ಅಂತಿಮ ವಿಚಾರಣೆಯ ಸಮಯದಲ್ಲಿ ದೂರುದಾರರು ಉಲ್ಲೇಖಿಸಿದ್ದರು.