ETV Bharat / business

ಅಮೆರಿಕದ ಶೇಲ್​ ಗ್ಯಾಸ್​ ಪಾಲು ಮಾರಿದ ರಿಲಯನ್ಸ್​: ವಹಿವಾಟಿನ ಮೊತ್ತವೆಷ್ಟು ಗೊತ್ತೇ?

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ (ಆರ್​​ಐಎಲ್) ಅಂಗಸಂಸ್ಥೆಯಾದ ರಿಲಯನ್ಸ್ ಮಾರ್ಸೆಲ್ಲಸ್, ನೈಋತ್ಯ ಪೆನ್ಸಿಲ್ವೇನಿಯಾದ ಮಾರ್ಸೆಲ್ಲಸ್ ಶೇಲ್​ನ ಕೆಲವು ಸ್ವತ್ತುಗಳ ಬೇರೆಡೆಗೆ ತಿರುಗಿಸುವ ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಘೋಷಿಸಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ.

author img

By

Published : Feb 4, 2021, 12:33 PM IST

Reliance
Reliance

ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿಯ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಅಮೆರಿಕದ ಶೇಲ್ ಗ್ಯಾಸ್​​ನಲ್ಲಿ ತನ್ನ ಪಾಲನ್ನು ನಾರ್ಥರ್ನ್ ಆಯಿಲ್ ಆ್ಯಂಡ್​​ ಗ್ಯಾಸ್ ಇಂಕಾಗೆ 250 ಮಿಲಿಯನ್ ಡಾಲರ್​ಗೆ ಮಾರಾಟ ಮಾಡಿದೆ.

ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ನ (ಆರ್​​ಐಎಲ್) ಅಂಗಸಂಸ್ಥೆಯಾದ ರಿಲಯನ್ಸ್ ಮಾರ್ಸೆಲ್ಲಸ್, ನೈಋತ್ಯ ಪೆನ್ಸಿಲ್ವೇನಿಯಾದ ಮಾರ್ಸೆಲ್ಲಸ್ ಶೇಲ್​ನ ಕೆಲವು ಸ್ವತ್ತುಗಳ ಬೇರೆಡೆಗೆ ತಿರುಗಿಸುವ ಒಪ್ಪಂದಗಳಿಗೆ ಸಹಿ ಹಾಕುವುದಾಗಿ ಘೋಷಿಸಿದೆ ಎಂದು ಕಂಪನಿಯ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಸ್ತುತ ಇಕ್ಯೂಟಿ ಕಾರ್ಪೊರೇಷನ್‌ನ ವಿವಿಧ ಅಂಗಸಂಸ್ಥೆಗಳಿಂದ ಈ ಸ್ವತ್ತುಗಳನ್ನು ನಿರ್ವಹಿಸುತ್ತಿದೆ. ನಾರ್ಥರ್ನ್ ಆಯಿಲ್ ಆ್ಯಂಡ್​ ಗ್ಯಾಸ್ ಇಂಕಾಗೆ 250 ಮಿಲಿಯನ್ ಡಾಲರ್​ ನಗದು ಮತ್ತು 3.25 ಮಿಲಿಯನ್ ಜನರಲ್​ ಷೇರು ಖರೀದಿಸುವ ಅರ್ಹತೆಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ತೈಲ ಮತ್ತು ಅನಿಲವು (ಎನ್‌ಒಜಿ) ಮುಂದಿನ ಏಳು ವರ್ಷಗಳಲ್ಲಿ ಸಾಮಾನ್ಯ ಷೇರಿಗೆ 14.00 ಡಾಲರ್ ಬೆಲೆಯಲ್ಲಿ ಇರಲಿದೆ.

ಇದನ್ನೂ ಓದಿ: ಕೊಚ್ಚಾರ್ಸ್ ವಿರುದ್ಧ ಕಾನೂನಾತ್ಮಕವಾಗಿ ಮುಂದುವರಿಯಲು ಸಾಕಷ್ಟು ವಿಷಯಗಳಿವೆ: ಪಿಎಂಎಲ್ಎ ನ್ಯಾಯಾಲಯ

ರಿಲಯನ್ಸ್ ಇಂಡಸ್ಟ್ರೀಸ್​ 2010 ಮತ್ತು 2013ರ ನಡುವೆ, ಅಮೆರಿಕದ ಶೇಲ್ ಗ್ಯಾಸ್ ಸ್ವತ್ತುಗಳಲ್ಲಿ ಹೂಡಿಕೆ ಮಾಡಿ ಚೆವ್ರಾನ್, ಪಯೋನೀರ್ ನ್ಯಾಚುರಲ್ ರಿಸೋರ್ಸ್ ಮತ್ತು ಕ್ಯಾರಿಜೊ ಆಯಿಲ್ ಆ್ಯಂಡ್​ ಗ್ಯಾಸ್‌ನೊಂದಿಗೆ ಮೂರು ತೈಲ ಪರಿಶೋಧನೆ ಜಂಟಿ ಉದ್ಯಮಗಳಲ್ಲಿ ಪಾಲು ಖರೀದಿಸಿತು. ಪಯೋನೀರ್‌ನೊಂದಿಗೆ ಮಿಡ್‌ಸ್ಟ್ರೀಮ್ ಜಂಟಿ ಉದ್ಯಮವಾಗಿದೆ. ಮಿಡ್‌ಸ್ಟ್ರೀಮ್ ಹೈಡ್ರೋಕಾರ್ಬನ್‌ಗಳ ಸಂಸ್ಕರಣೆ, ಸಂಗ್ರಹಣೆ, ಸಾಗಣೆ ಮತ್ತು ಮಾರಾಟ ವಹಿವಾಟು ಹೊಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.