ETV Bharat / business

ಸಾಲದ ಪ್ರಪಾತಕ್ಕೆ ರಿಲಯನ್ಸ್​ ಇನ್ಫ್ರಾಸ್ಟ್ರಕ್ಷರ್​: ತಮ್ಮನ ಕೂಗಿಗೆ ಮತ್ತೆ ಬರುವರೇ ಮುಕೇಶ್ ಅಂಬಾನಿ..?

ರಿಲಯನ್ಸ್​ ಇನ್ಫ್ರಾಸ್ಟ್ರಕ್ಷರ್​ನ ಲೆಕ್ಕಪರಿಶೋಧಕರು ವಾರ್ಷಿಕ ಫಲಿತಾಂಶಗಳ ಬಗ್ಗೆ ತಮ್ಮ ಲೆಕ್ಕಪರಿಶೋಧನಾ ಅಭಿಪ್ರಾಯ ನೀಡಲು ಹಿಂದೇಟುಹಾಕುತ್ತಿದ್ದಾರೆ. ಹೀಗಾಗಿ, ಕಂಪನಿಯ ಮತ್ತು ಅದರ ಕೆಲವು ಅಂಗಸಂಸ್ಥೆಗಳ ಸಾಮರ್ಥ್ಯದ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

ಸಾಂದರ್ಭಿಕ ಚಿತ್ರ
author img

By

Published : Jun 16, 2019, 9:55 AM IST

ಮುಂಬೈ: ಅನಿಲ್ ಅಂಬಾನಿ ಒಡೆತನದ ರಿಲಯನ್ಸ್​ ಇನ್ಫ್ರಾಸ್ಟ್ರಕ್ಷರ್​, 2019ರ ಮಾರ್ಚ್​ಗೆ ಕೊನೆಗೊಂಡ ತ್ರೈಮಾಸಿಕ ಅವಧಿಯಲ್ಲಿ ₹ 3,301 ಕೋಟಿಯಷ್ಟು ನಷ್ಟ ಎದುರಾಗಿದೆ.

ಕಳೆದ ವರ್ಷ ಇದೇ ಅವಧಿಯಲ್ಲಿ ₹ 134 ಕೋಟಿಯಷ್ಟು ಆದಾಯ ಬಂದಿತ್ತು. ಲೆಕ್ಕಪರಿಶೋಧಕರು ವಾರ್ಷಿಕ ಫಲಿತಾಂಶಗಳ ಬಗ್ಗೆ ತಮ್ಮ ಲೆಕ್ಕಪರಿಶೋಧನಾ ಅಭಿಪ್ರಾಯ ನೀಡಲು ಹಿಂದೇಟುಹಾಕುತ್ತಿದ್ದಾರೆ. ಹೀಗಾಗಿ, ಕಂಪನಿಯ ಮತ್ತು ಅದರ ಕೆಲವು ಅಂಗಸಂಸ್ಥೆಗಳ ಸಾಮರ್ಥ್ಯದ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ.

ಅಸಾಧಾರಣ ಖರ್ಚಿನ ಮೇಲೆ ಕಂಪನಿಯು ಒಂದು ಬಾರಿ ₹ 8,481 ಕೋಟಿ ತೆಗೆದುಕೊಂಡಿದ್ದು, ಲಾಭ ಮತ್ತು ನಷ್ಟದ ಖಾತೆಯ ಸಾಮಾನ್ಯ ಮೀಸಲು ಮೊತ್ತ ₹ 6,616 ಕೋಟಿಯಾಗಿದೆ. ತ್ರೈಮಾಸಿಕ ಮತ್ತು ಪೂರ್ಣ ವರ್ಷದ ನಷ್ಟವು ₹ 6,616 ಕೋಟಿಗಿಂತ ಅಧಿಕವಾಗಿದೆ.

ಅನಿಲ್ ಅಂಬಾನಿ ಮಾಲೀಕತ್ವದ ಆರ್‌ಕಾಮ್​ನ ಸ್ಪೆಕ್ಟ್ರಂ, ಮೊಬೈಲ್ ಟವರ್‌'ಗಳು ಮತ್ತು ಆಪ್ಟಿಕಲ್ ಸೈಬರ್ ನೆಟ್'ವರ್ಕ್ ಸೇರಿದಂತೆ ಮೊಬೈಲ್ ಆಸ್ತಿಗಳನ್ನು ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜಿಯೋ ಸ್ವಾಧೀನ ಪಡಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಈ ಮೂಲಕ ಸಾಲ ಸುಳಿಗೆ ಸಿಲುಕಿದ ತಮ್ಮನ ನೆರವಿಗೆ ಮುಕೇಶ್ ಧಾವಿಸಿದ್ದರು. ರಿಲಯನ್ಸ್​ ಇನ್ಫ್ರಾಸ್ಟ್ರಕ್ಷರ್ ಕೂಡ ಆರ್​ಕಾಮ್​ನಂತೆ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದೆ. ಮತ್ತೆ ಅಣ್ಣ ಮುಕೇಶ್ ಅಭಯ ನೀಡುವರೆ ಎಂದು ಎದುರು ನೋಡಲಾಗುತ್ತಿದೆ.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.