ನವದೆಹಲಿ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (ಆರ್ಐಎಲ್), ಬ್ರೇಕ್ಥ್ರೊ ಎನರ್ಜಿ ವೆಂಚರ್ಸ್ನಲ್ಲಿ (ಬಿಇವಿ) 50 ಮಿಲಿಯನ್ ಡಾಲರ್ ಹೂಡಿಕೆ ಒಪ್ಪಂದ ಮಾಡಿಕೊಂಡಿದೆ.
ಈ ಬಂಡವಾಳ ಹೂಡಿಕೆ ನಿಧಿಯ ಗಾತ್ರ ಶೇ 5.75ರಷ್ಟಿದೆ. ಮುಂದಿನ 8-10 ವರ್ಷಗಳಲ್ಲಿ ಈ ಹೂಡಿಕೆ ತಾತ್ಕಾಲಿಕವಾಗಿ ಮಾಡಲಾಗುವುದು.
ಸೀಮಿತ ಪಾಲುದಾರಿಕೆಯ ಬ್ರೇಕ್‌ಥ್ರೂ ಎನರ್ಜಿ ವೆಂಚರ್ಸ್ II, ಎಲ್ಪಿಯಲ್ಲಿ (ಬಿಇವಿ) ಕಂಪನಿಯು 50 ಮಿಲಿಯನ್ ಬಂಡವಾಳ ಹೂಡಿಕೆಯ ಒಪ್ಪಂದ ಮಾಡಿಕೊಂಡಿದೆ. ಇದನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಡೆಲವೇರ್ ಸ್ಟೇಟ್ ಲಾಸ್ ಅಡಿ ಹೊಸದಾಗಿ ಸಂಯೋಜಿಸಲಾಗಿದೆ ಎಂದು ಆರ್ಐಎಲ್ ವಿನಿಮಯ ಫೈಲಿಂಗ್ನಲ್ಲಿ ತಿಳಿಸಿದೆ.
ಈ ಹೂಡಿಕೆಯೊಂದಿಗೆ ಮುಖೇಶ್ ಅಂಬಾನಿ ಅವರು ಬಿಲ್ ಗೇಟ್ಸ್, ಜೆಫ್ ಬೆಝೋಸ್, ಮೈಕೆಲ್ ಬ್ಲೂಮ್‌ಬರ್ಗ್, ಜ್ಯಾಕ್ ಮಾ, ಮಸಯೋಶಿ ಸನ್ ಸೇರಿದಂತೆ ಇತರರು ಈ ನಿಧಿಯಲ್ಲಿ ಹೂಡಿಕೆ ಮಾಡಿದ ದಿಗ್ಗಜ ಉದ್ಯಮಿಗಳಾಗಿದ್ದಾರೆ.
ಇಂಧನ ಮತ್ತು ಕೃಷಿ ತಂತ್ರಜ್ಞಾನಅಭಿವೃದ್ಧಿ ಉದ್ದೇಶಗಳಿಗೆ ಹೂಡಿಕೆ ಮಾಡುವ ಮೂಲಕ ಹವಾಮಾನ ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ಬಿಇವಿ ಪ್ರಯತ್ನಿಸುತ್ತದೆ. ಶುದ್ಧ ಇಂಧನ ಪರಿಹಾರಗಳಲ್ಲಿ ಹೊಸತನವನ್ನು ಬೆಂಬಲಿಸಲು ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಬಿಇವಿ ಹೂಡಿಕೆ ಮಾಡುತ್ತದೆ. ನಿವ್ವಳ ಶೂನ್ಯ ಹೊಗೆ ಹೊರಸೂಸುವಿಕೆಗೆ ಕೆಲಸ ಮಾಡುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದು ನಿಧಿಯ ಉದ್ದೇಶವಾಗಿದೆ.