ETV Bharat / business

2 ಗಂಟೆಯಲ್ಲಿ ಕೊರೊನಾ ರಿಸಲ್ಟ್​: RT - PCR ಕಿಟ್ ಶೋಧಿಸಿದ ಮುಖೇಶ್ ಅಂಬಾನಿಯ ರಿಲಯನ್ಸ್! - ಕೋವಿಡ್ 19 ಪರೀಕ್ಷೆಯ ಹೊಸ ಕಿಟ್

ಸಾರ್ಸ್​​-ಸಿಒವಿ-2 (SARS-CoV-2)ನಿಂದ ರೋಗನಿರ್ಣಯದ ನ್ಯೂಕ್ಲಿಯಿಕ್ ಆಮ್ಲದ ಗುಣಾತ್ಮಕ ಪತ್ತೆಗೆ ನೈಜ-ಸಮಯದ ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್-ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್‌ಆರ್‌ಟಿ-ಪಿಸಿಆರ್) ಪರೀಕ್ಷೆಯಾದ ಕೋವಿಡ್​-19 ಆರ್​ಟಿ-ಪಿಸಿಆರ್​ ಪರೀಕ್ಷೆ ನೀಡಲು 24 ಗಂಟೆ ತೆಗೆದುಕೊಳ್ಳುತ್ತದೆ . ರಿಲಯನ್ಸ್​ ಅಭಿವೃದ್ಧಿಪಡಿಸಿದ ಕಿಟ್​, ಸುಮಾರು 2 ಗಂಟೆಗಳಲ್ಲಿ ಕೋವಿಡ್​-19 ಸೋಂಕು ಪತ್ತೆಹಚ್ಚುವ ಭರವಸೆ ನೀಡುತ್ತದೆ ಎಂದು ರಿಲಯನ್ಸ್​ ಲೈಫ್​ ಸೈನ್ಸ್​ ಹೇಳಿದೆ.

RT-PCR kit
ಆರ್​ಟಿ-ಪಿಸಿಆರ್ ಕಿಟ್
author img

By

Published : Oct 2, 2020, 8:01 PM IST

ನವದೆಹಲಿ: ಸುಮಾರು ಎರಡು ಗಂಟೆಗಳ ಒಳಗೆ ಕೊರೊನಾ ಸೋಂಕು ಪತ್ತೆಹಚ್ಚಬಲ್ಲ ಆರ್​ಟಿ-ಪಿಸಿಆರ್ ಕಿಟ್ ಅನ್ನು ರಿಲಯನ್ಸ್ ಲೈಫ್ ಸೈನ್ಸಸ್ ಅಭಿವೃದ್ಧಿಪಡಿಸಿದೆ ಎಂದು ಕಂಪನಿಯ ಮೂಲಗಳು ತಿಳಿಸಿವೆ.

ಪ್ರಸ್ತುತ, ಸಾರ್ಸ್​​-ಸಿಒವಿ-2 (SARS-CoV-2)ನಿಂದ ರೋಗನಿರ್ಣಯದ ನ್ಯೂಕ್ಲಿಯಿಕ್ ಆಮ್ಲದ ಗುಣಾತ್ಮಕ ಪತ್ತೆಗೆ ನೈಜ-ಸಮಯದ ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್-ಪಾಲಿಮರೇಸ್ ಚೈನ್ ರಿಯಾಕ್ಷನ್ (ಆರ್‌ಆರ್‌ಟಿ-ಪಿಸಿಆರ್) ಪರೀಕ್ಷೆಯಾದ ಕೋವಿಡ್​-19 ಆರ್​ಟಿ-ಪಿಸಿಆರ್​ ಪರೀಕ್ಷೆ ನೀಡಲು 24 ಗಂಟೆ ತೆಗೆದುಕೊಳ್ಳುತ್ತದೆ . ರಿಲಯನ್ಸ್​ ಅಭಿವೃದ್ಧಿಪಡಿಸಿದೆ ಕಿಟ್​, ಸುಮಾರು 2 ಗಂಟೆಗಳಲ್ಲಿ ಕೋವಿಡ್​-19 ಸೋಂಕು ಪತ್ತೆಹಚ್ಚುವ ಭರವಸೆ ನೀಡುತ್ತದೆ ಎಂದು ಹೇಳಿದೆ.

ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಂಗ ಸಂಸ್ಥೆಯಾದ ರಿಲಯನ್ಸ್ ಲೈಫ್ ಸೈನ್ಸಸ್‌ನ ಕಂಪ್ಯೂಟೇಷನಲ್ ಬಯಾಲಜಿಸ್ಟ್‌ಗಳು ಭಾರತದಲ್ಲಿ ಸಾರ್ಸ್​-ಸಿಒವಿ-2ನ 100ಕ್ಕೂ ಅಧಿಕ ಜೀನೋಮ್‌ಗಳನ್ನು ವಿಶ್ಲೇಷಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ರಿಲಯನ್ಸ್ ಲೈಫ್ ಸೈನ್ಸಸ್‌ನ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ ಈ ಕಿಟ್‌ಗೆ ಆರ್ - ಗ್ರೀನ್ ಕಿಟ್ (ಎಸ್‌ಎಆರ್​ಎಸ್ ಸಿಒವಿ 2-ರಿಯಲ್-ಟೈಮ್ ಪಿಸಿಆರ್) ಎಂದು ಹೆಸರಿಸಲಾಗಿದೆ. ಇದರ ಕಾರ್ಯಕ್ಷಮತೆಯನ್ನು ಐಸಿಎಂಆರ್ ತಾಂತ್ರಿಕವಾಗಿ ಮೌಲ್ಯೀಕರಿಸಿದೆ ಎಂದು ಮೂಲಗಳು ದೃಢಪಡಿಸಿವೆ.

ಐಸಿಎಂಆರ್ ಫಲಿತಾಂಶಗಳ ಪ್ರಕಾರ, ಕಿಟ್ ಶೇ 98.7ರಷ್ಟು ಸೂಕ್ಷ್ಮತೆ ಮತ್ತು 98.8 ಪ್ರತಿಶತದಷ್ಟು ನಿರ್ದಿಷ್ಟತೆ ತೋರಿಸುತ್ತದೆ. ಈ ಕಿಟ್ ರಿಲಯನ್ಸ್​ನಲ್ಲಿ ಕೆಲಸ ಮಾಡುವ ಆರ್&ಡಿಯ ವಿಜ್ಞಾನಿಗಳ ಸಂಪೂರ್ಣ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ್ದಾರೆ. ಈ ಕಿಟ್‌ ಅನ್ನು ಸರಳವಾಗಿ ಬಳಸಬಹುದು ಮತ್ತು ಸುಲಭವಾಗಿ ಲಭ್ಯ ಇರುವಂತೆ ನೋಡಿಕೊಳ್ಳಬಹುದು. ರೋಗನಿರ್ಣಯದ ಸಮಯ ಸುಮಾರು 2 ಗಂಟೆಗಳಿರುತ್ತದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.