ನವದೆಹಲಿ: ಬಿಲಿಯನೇರ್ ಮುಖೇಶ್ ಅಂಬಾನಿ ಒಡೆತನದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 13 ಲಕ್ಷ ಕೋಟಿ ರೂ. ಮಾರುಕಟ್ಟೆ ಬಂಡವಾಳ ಹೊಂದಿರುವ ಮೊದಲ ಕಂಪನಿಯಾದ ನಂತರ ಜಾಗತಿಕ ಅಗ್ರ 50 ಮೌಲ್ಯದ ಕಂಪನಿಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.
ಸ್ಟಾಕ್ ಮಾರುಕಟ್ಟೆಯ ಅಂಕಿಅಂಶಗಳ ಪ್ರಕಾರ, ತೈಲದಿಂದ ಟೆಲಿಕಾಂ ಗ್ರೂಪ್ವರೆಗಿನ ಜಾಗತಿಕ ಮಾರುಕಟ್ಟೆ ಬಂಡವಾಳ ಕಂಪನಿಗಳ ಸಾಲಿನಲ್ಲಿ 48ನೇ ಸ್ಥಾನದಲ್ಲಿದೆ. ಸೌದಿ ಅರಾಮ್ಕೊ 1.7 ಟ್ರಿಲಿಯನ್ ಅಮೆರಿಕನ್ ಡಾಲರ್ ಮೂಲಕ ನಂ.1 ಸ್ಥಾನದಲ್ಲಿದೆ. ಆ್ಯಪಲ್, ಮೈಕ್ರೋಸಾಫ್ಟ್, ಅಮೆಜಾನ್ ಮತ್ತು ಆಲ್ಫಾಬೆಟ್ ನಂತರದ ಸ್ಥಾನದಲ್ಲಿವೆ.
ರಿಲಯನ್ಸ್ ಷೇರು ಗುರುವಾರ ಬಿಎಸ್‌ಇನಲ್ಲಿ 2,060.65 ರೂ.ಗೆ ತಲುಪಿದ್ದು, ಹಿಂದಿನ ದಿನದ ಮುಕ್ತಾಯಕ್ಕಿಂತ ಶೇ 2.82ರಷ್ಟು ಏರಿಕೆಯಾಗಿದೆ. ಇದರಿಂದಾಗಿ ಕಂಪನಿಯ ಒಟ್ಟಾರೆ ಎಂ-ಕ್ಯಾಪಿಟಲ್ 13 ಲಕ್ಷ ಕೋಟಿ ರೂ. ತಲುಪಿದೆ.
ಯಾವುದೇ ಭಾರತೀಯ ಕಂಪನಿಯು 13 ಲಕ್ಷ ಕೋಟಿ ರೂ. ಎಂ-ಕ್ಯಾಪ್ ದಾಟಿಲ್ಲ. ಚೆವ್ರಾನ್‌ರ ಸುಮಾರು 170 ಶತಕೋಟಿ ಡಾಲರ್ನಷ್ಟು ಎಂ-ಕ್ಯಾಪ್ ಹೊಂದಿದೆ. ಒರಾಕಲ್, ಯೂನಿಲಿವರ್, ಬ್ಯಾಂಕ್ ಆಫ್ ಚೀನಾ, ಬಿಎಚ್‌ಪಿ ಗ್ರೂಪ್, ರಾಯಲ್ ಡಚ್ ಶೆಲ್ ಮತ್ತು ಸಾಫ್ಟ್‌ಬ್ಯಾಂಕ್ ಗ್ರೂಪ್‌ಗಳಿಗಿಂತ ಅತ್ಯಧಿಕವಾಗಿದೆ. ರಿಲಯನ್ಸ್ ಏಷ್ಯಾದ 10ನೇ ಅತಿದೊಡ್ಡ ಎಂ-ಕ್ಯಾಪ್ ಕಂಪನಿಯಾಗಿದ್ದು, ಚೀನಾದ ಅಲಿಬಾಬಾ ಗ್ರೂಪ್ ಜಾಗತಿಕವಾಗಿ 7ನೇ ಸ್ಥಾನದಲ್ಲಿದೆ.
ಟಾಪ್ 100 ಸಂಸ್ಥೆಗಳಲ್ಲಿರುವ ಏಕೈಕ ಭಾರತೀಯ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್. ಬಿಎಸ್‌ಇನಲ್ಲಿ ಟಿಸಿಎಸ್ ಎಂ-ಕ್ಯಾಪ್ 8.14 ಲಕ್ಷ ಕೋಟಿ ರೂ.ಯಷ್ಟಿದೆ.